ಗ್ರೀಕ್ ನ ಕೋಸ್ ಐಲ್ಯಾಂಡ್ ನಲ್ಲಿ ಪ್ರಬಲ ಭೂಕಂಪ, ಇಬ್ಬರ ಸಾವು
ಕೋಸ್ ಐಲ್ಯಾಂಡ್, (ಗ್ರೀಕ್ ), ಜುಲೈ 21: ಕೋಸ್ ಐಲ್ಯಾಂಡ್‌ನಲ್ಲಿ ಶುಕ್ರವಾರ ನಸುಕಿನ ವೇಳೆ 6.7 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದೆ.
At least two dead after 6.7-magnitude earthquake strikes Greek islands, Turkish coast: AP
— ANI (@ANI_news) July 21, 2017
ಭೂಮಿ ನಡುಗಿದ ತೀವ್ರತೆಗೆ ಅನೇಕ ಕಟ್ಟಡಗಳು ಹಾನಿಗೊಂಡಿವೆ. ಇಬ್ಬರು ಸಾವನ್ನಪ್ಪಿದ್ದು. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಟರ್ಕಿಶ್ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಮಾನ ಇಲಾಖೆ ತಿಳಿಸಿದೆ.

ದಕ್ಷಿಣದ ಪಶ್ಚಿಮ ಕರಾವಳಿ ಬೋಡ್ರಮ್ ಪಟ್ಟಣ ಮತ್ತು ಕೋಸ್ ನ ಗ್ರೀಕ್ ದ್ವೀಪಕ್ಕೆ ಸಮೀಪಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಇನ್ನು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications