ಪಾಕಿಸ್ತಾನಕ್ಕೆ ಅಮೆರಿಕ, ಭಾರತ ಜಂಟಿ ಎಚ್ಚರಿಕೆ

ತನ್ನ ನೆಲದಲ್ಲಿ ಭಯೋತ್ಪಾದನೆ ಪೋಷಿಸುವುದನ್ನು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ಭಾರತ ಮತ್ತು ಅಮೆರಿಕ ಜಂಟಿ ಎಚ್ಚರಿಕೆ. ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ನಂತರ ಈ ಎಚ್ಚರಿಕ

ವಾಷಿಂಗ್ಟನ್, ಜೂನ್ 27: ''ನಿಮ್ಮ ನೆಲದಿಂದ ಉಗ್ರವಾದವನ್ನು ಪೋಷಿಸುವುದನ್ನಾಗಲೀ, ಅದನ್ನು ಬೆಂಬಲಿಸುವುದನ್ನೇ ಆಗಲಿ ಈ ಕ್ಷಣಕ್ಕೆ ಬಿಟ್ಟುಬಿಡಿ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು.''
- ಇದು ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಉಗ್ರವಾದಿ ನೆಲವಾದ ಪಾಕಿಸ್ತಾನಕ್ಕೆ ಜಂಟಿಯಾಗಿ ಕೊಟ್ಟ ಎಚ್ಚರಿಕೆ.

ಸೋಮವಾರ ನಡೆದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಭೇಟಿಯಲ್ಲಿ ಭಯೋತ್ಪಾದನೆಯ ಮೂಲೋಚ್ಛಾಟನೆಗೆ ಎರಡೂ ದೇಶಗಳ ಬದ್ಧತೆಯನ್ನು ಮತ್ತಷ್ಟು ಬಿಗಿಗೊಳಿಸುವತ್ತ ಮಾತುಕತೆ ನಡೆಸಲಾಯಿತು. ಇದೇ ವೇಳೆ, ತನ್ನ ನೆಲದಲ್ಲಿ ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯೊಂದನ್ನು ರವಾನಿಸಲು ಉಭಯ ನಾಯಕರು ನಿರ್ಧರಿಸಿದರು.

Stop Terrorism in your soil: India, America to Pakistan

ಮೋದಿ, ಟ್ರಂಪ್ ಮಾತುಕತೆಯ ನಂತರ, ಆ ಮಾತುಕತೆಯ ಸಾರಾಂಶವನ್ನು ಪತ್ರಕರ್ತರ ಮುಂದಿಟ್ಟ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಶಂಕರ್ ಎಸ್. ಜಯಶಂಕರ್, ಪಾಕಿಸ್ತಾನವು ಭಯೋತ್ಪಾದನೆಯ ಲಾಲನೆ, ಪಾಲನೆಯನ್ನು ಕೈಬಿಡಬೇಕು. 26/11ರ ಮುಂಬೈ ದಾಳಿ, ಪಠಾನ್ ಕೋಟ್ ಹಾಗೂ ಭಾರತದ ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸುವಂಥ ದುಷ್ಕಾರ್ಯಗಳಿಗೆ ಇತಿಶ್ರೀ ಹಾಡಬೇಕು ಎಂದು ಉಭಯ ನಾಯಕರು ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+