ಶ್ರೀಲಂಕಾ ಉಗ್ರ ದಾಳಿಗೂ ಮುನ್ನ ಏನಾಯ್ತು, ಕೃತ್ಯದ ಹಿಂದಿನ ಸಂಚು ಏನು?

ಕೊಲಂಬೋ, ಏ.22: ಶ್ರೀಲಂಕಾ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟಕ್ಕೂ ಮುನ್ನ ಹೋಟೆಲ್‌ನಲ್ಲಿ ಉಗ್ರ ಏನು ಮಾಡುತ್ತಿದ್ದ, ಬಾಂಬ್ ಸ್ಫೋಟಿಸಿದ್ದು ಹೇಗೆ ಎನ್ನುವ ಕೆಲವು ಮಾಹಿತಿ ಇಲ್ಲಿದೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಇದುವರೆಗೂ 290 ಮಂದಿ ಜೀವಬಿಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಇನ್ನು ಭಾರತದಿಂದ ಹೋದವರ 7 ಜನರಲ್ಲಿ 2 ಮೃತಪಟ್ಟಿರುವ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಇನ್ನುಳಿದವರ ಬಗ್ಗೆ ಮಾಹಿತಿಯೇ ಇಲ್ಲ. ಹಾಗೆಯೇ ವಿವಿಧ ದೇಶಗಳಿಂದ ಶ್ರೀಲಂಕಾಕ್ಕೆ ಪ್ರವಾಸ ಇನ್ನಿತರೆ ಕೆಲಸದ ಮೇಲೆ ಬಂದವರದ್ದೂ ಇದೆ ಕಥೆ.

Sri Lanka Suicide Bomber Queued At Hotel Buffet Then Set Off The Blast

ಈ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು ಹೇಗೆ, ಉಗ್ರರು ಎಲ್ಲಿ ಅಡಗಿದ್ದರು, ಎನ್ನುವ ಕುರಿತು ಕೆಲವು ಮಾಹಿತಿ ಇಲ್ಲಿದೆ. ಭಾನುವಾರ ಬೆಳಗಾಗಿದೆ. ಸಿನಾಮೋನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಉಗ್ರ ಅಜಬ್ ಮೊಹಮ್ಮದ್ ಎಲ್ಲರಂತೆಯೇ ಕೊಠಡಿಯಿಂದ ಹೊರ ಬಂದಿದ್ದಾನೆ.

ಹಿಂದಿನ ದಿನ ರಾತ್ರಿಯೇ ಹೋಟೆಲ್‌ನಲ್ಲಿ ಹೆಸರು ನೋಂದಾಯಿಸಿದ್ದ. ಭಾನುವಾರ ಬೆಳಗ್ಗೆ ಒಂದು ಪ್ಲೇಟ್ ಹಿಡಿದು ತಿಂಡಿಗಾಗಿ ಕಾಯುತ್ತಿದ್ದ ಆದರೆ ಕೆಲವೇ ಕ್ಷಣಗಳಲ್ಲಿ ತನ್ನ ಬಳಿಯಿದ್ದ ಬಾಂಬ್ ಸ್ಫೋಟಿಸಿ ಅಲ್ಲಿದ್ದವರನ್ನು ಕೊಂದು ಆತ ತಾನೂ ಪ್ರಾಣಬಿಟ್ಟಿದ್ದ.

ಆದರೆ ಅರ್ಧಗಂಟೆಗಟ್ಟಲೆ ಜನರು ಉಗ್ರನ ಜೊತೆಯಲ್ಲೇ ಇದ್ದರೂ ಆತನ ಕುರಿತು ಒಂದೇ ಒಂದು ಸುಳಿವು ಜನರಿಗೆ ಸಿಗದೆ ಹೋಯಿತು, ಅನ್ಯಾಯವಾಗಿ ನೂರಾರು ಮಂದಿ ಜೀವ ಹೋಯಿತು.

ಈಸ್ಟರ್ ಹಾಲಿಡೇ ಇರುವ ಕಾರಣ ಶ್ರೀಲಂಕಾದ ಹೋಟೆಲ್‌ಗಳು ಅತಿ ಹೆಚ್ಚು ಜನರಿಂದ ತುಂಬಿ ತುಳುಕುತ್ತಿತ್ತು ಹಾಗಾಗಿ ಉಗ್ರನ ಕಡೆಗೆ ಹೆಚ್ಚು ಗಮನ ನೀಡಲು ಹೋಟೆಲ್ ನಿರ್ವಾಹಕನಿಗೆ ಸಾಧ್ಯವಾಗಿರಲಿಲ್ಲ.

ಕೇವಲ ಇದೊಂದೇ ಹೋಟೆಲ್ ಅಲ್ಲದೆ ಶಾಂಗ್ರಿಲಾ, ಕಿಂಗ್ಸ್ ಬರಿ ಹೋಟೆಲ್‌ನಲ್ಲಿ ಕೂಡ ಬಾಂಬ್ ಸ್ಫೋಟವಾಗಿದೆ. ಹೋಟೆಲ್‌ನಲ್ಲಿದ್ದ 35ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+