ದಕ್ಷಿಣ ಕೊರಿಯಾದಲ್ಲಿ ರೂಪಾಂತರಿತ ಮೊದಲ ಕೊರೊನಾವೈರಸ್ ಪತ್ತೆ

ಸಿಯೋಲ್, ಡಿಸೆಂಬರ್ 28: ಬ್ರಿಟನ್‌ನಲ್ಲಿ ಕಂಡು ಬಂದಿರುವ ರೂಪಾಂತರಿತ ಕೊರೊನಾ ಸೋಂಕು ದಕ್ಷಿಣ ಕೊರಿಯಾದಲ್ಲಿ ಪತ್ತೆಯಾಗಿದೆ.

ಕೊರೊನಾ ವೈರಸ್​ ಹೊಸ ರೂಪಾಂತರ ಮೂಲಕ ಕಾಣಿಸಿಕೊಳ್ಳುತ್ತಿದ್ದು, ಇದು ಸೂಪರ್​ ಸ್ಪ್ರೇಡರ್​ ಆಗಿದೆ. ಸೆಪ್ಟೆಂಬರ್​ನಲ್ಲಿ ಮೊದಲ ಬಾರಿಗೆ ಈ ಹೊಸ ಸ್ವರೂಪದ ಕೊರೋನಾ ವೈರಸ್​ ಮೊದಲ ಬಾರಿ ಪತ್ತೆಯಾಗಿತ್ತು.

ಇದು ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಯುನೈಡೆಡ್​​ ಕಿಂಗ್​ಡಮ್​ನ ಲಂಡನ್​ ಮತ್ತಿತ್ತರ ಭಾಗಗಳಲ್ಲಿ ಕಂಡು ಬರುತ್ತಿದೆ. ಈ ಹೊಸ ವೈರಸ್​ನಿಂದ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಹೊಸ ವರ್ಷದ ಸಂಭ್ರಮಾ​ಚರಣೆ ಮೇಲೂ ಕರಿನೆರಳು ಬೀರಿದೆ.

South Korea Reports Its First Cases Of New Covid Variant First Seen In UK

ದಕ್ಷಿಣ ಕೊರಿಯಾ ದೇಶದಲ್ಲಿ ಹೊಸ ಸ್ವರೂಪದ ಕೊರೋನ ಸೋಂಕಿನ ಮೂರು ಪ್ರಕರಣ ದೃ ಡಪಟ್ಟಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ತಿಳಿಸಿದೆ.
ಮೂವರು ಇದೇ 22 ರಂದು ಯುನೈಟೆಡ್ ಕಿಂಗ್‌ಡಂನಿಂದ ಆಗಮಿಸಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ. ಅವರು ಲಂಡನ್ನಲ್ಲಿ ವಾಸಿಸುವ ಕುಟುಂಬವಾಗಿ ದೇಶಕ್ಕೆ ಬಂದರು ಮತ್ತು ಪರೀಕ್ಷೆಗಳು ಹೊಸ ಮಾದರಿ ಸೋಂಕು ಇರುವಿಕೆಯನ್ನು ಖಚಿತಪಡಿಸಿದೆ. ಅವರೆಲ್ಲರೂ ಈಗ ಸಂಪರ್ಕ ತಡೆಯಲ್ಲಿದ್ದಾರೆ ಎಂದು ಕೆಡಿಸಿಎ ತಿಳಿಸಿದೆ.

ಯುಕೆ ಯಲ್ಲಿ ಮೊದಲು ಪತ್ತೆಯಾದ COVID-19 ನ ಹೊಸ ಪ್ರಬೇಧವನ್ನು ತಡೆಯಲು ಜಪಾನ್ ಸೋಮವಾರದಿಂದ ವಿದೇಶಿಯರಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರ, ಜಪಾನ್ ಹೊಸ ಕೊರೊನಾವೈರಸ್‌ನ ಮೊದಲ ಪ್ರಕರಣವನ್ನು ದಾಖಲಿಸಿದೆ . ಯಾವುದೇ ದೇಶದಿಂದ ನಿರ್ಗಮಿಸುವ ವೇಳೆ 72 ಗಂಟೆಗಳಿಗಿಂತ ನಂತರ ಪಡೆ ಕೊರೊನಾ ಇಲ್ಲ ಎನ್ನುವ ವರದಿ ಬೇಕಾಗುತ್ತದೆ. ಪ್ರಯಾಣಿಕರು ಜಪಾನ್‌ಗೆ ಬಂದ ನಂತರ ಮತ್ತೊಂದು COVID-19 ಪರೀಕ್ಷೆಯಲ್ಲಿ ಪಾಸ್‌ ಆಗಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+