ಮುಟ್ಟಿದರೆ ಸುಟ್ಟು ಹೋಗ್ತೀರ, ಹುಷಾರ್ ಅಂತು ದಕ್ಷಿಣ ಕೊರಿಯಾ!

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ & ರಷ್ಯಾ ಅಧ್ಯಕ್ಷ ಪುಟಿನ್ ತುಂಬಾ ಹತ್ತಿರವಾಗ್ತಿದ್ದು, ಈ ಬೆಳವಣಿಗೆ ಅಮೆರಿಕ ಮತ್ತು ದೊಡ್ಡಣ್ಣ ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ಕೆಂಡದಂತಹ ಕೋಪ ತರಿಸುತ್ತಿದೆ. ಅದ್ರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾಗೆ, ವೆಪನ್ಸ್ ಉಡುಗೊರೆ ಕೊಟ್ಟಿದ್ದಾನೆ ಎಂಬ ಆರೋಪಗಳ ಬೆನ್ನಲ್ಲೇ ದಕ್ಷಿಣ ಕೊರಿಯಾ ರಷ್ಯಾಗೆ ಡೆಡ್ಲಿ ವಾರ್ನಿಂಗ್ ಕೊಟ್ಟಿದೆ!

ಅರೆರೆ... ಪುಟಾಣಿ ದೇಶ ದಕ್ಷಿಣ ಕೊರಿಯಾ ಎಲ್ಲಿ? ರಷ್ಯಾ ಎಲ್ಲಿ?

ದ.ಕೊರಿಯಾ ರಷ್ಯಾಗೆ ವಾರ್ನಿಂಗ್ ಕೊಡೋಕೆ, ಇಷ್ಟು ತಾಕತ್ತು ಎಲ್ಲಿಂದ ಬಂತು? ಅಂತಾ ಯೋಚಿಸುತ್ತಿದ್ದೀರಾ. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ, ಹಾಗೆ ತಿಕ್ಕಲು ಸರ್ವಾಧಿಕಾರಿ ಎಂಬ ಆರೋಪ ಹೊತ್ತಿರುವ ಕಿಮ್ ಜಾಂಗ್ ಉನ್ ಮಾಡುತ್ತಿರುವ ಎಡವಟ್ಟುಗಳ ಪಟ್ಟಿ ಕೂಡ ಇಲ್ಲಿದೆ. ಇದರ ಜೊತೆಗೆ ಜಗತ್ತು ಮತ್ತೊಂದು ಮಹಾಯುದ್ಧದ ಕೂಪಕ್ಕೆ ಜಾರುವ ಅಂತಿಮ ಕ್ಷಣದಲ್ಲಿದೆಯಾ ಎಂಬ ಭಯ ಕೂಡ ಮೆಲ್ಲ ಮೆಲ್ಲಗೆ ಪ್ರಪಂಚದ ಮೂಲೆ ಮೂಲೆಯನ್ನೂ ಆವರಿಸಿದೆ.

South Korea Is Now Very Angry Against Russia For Their Close Friendship With North Korea

ರಷ್ಯಾಗೆ ವಾರ್ನಿಂಗ್ ಕೊಟ್ಟ ದ.ಕೊರಿಯಾ!

ಅಂದಹಾಗೆ ಜಗತ್ತಲ್ಲಿ ಅತಿದೊಡ್ಡ ಸೇನಾ ಶಕ್ತಿ ಹೊಂದಿರುವ ದೇಶಗಳ ಪೈಕಿ ರಷ್ಯಾ ಕೂಡ ಒಂದಾಗಿದೆ. ಹೀಗಿದ್ದಾಗ ಪುಟಾಣಿ ದೇಶ ದಕ್ಷಿಣ ಕೊರಿಯಾ ಹೀಗೆ ರಷ್ಯಾಗೆ ನೇರ ಎಚ್ಚರಿಕೆ ರವಾನಿಸಲು ಕಾರಣ ಏನು ಗೊತ್ತಾ? ಒನ್ಸ್ ಅಗೈನ್ ಅನುಮಾನವೇ ಬೇಡ, ಈ ತಿಕ್ಕಾಟಕ್ಕೆ ಕಾರಣ ಸರ್ವಾಧಿಕಾರಿ ಕಿಮ್. ಇದೇ ಸೆಪ್ಟೆಂಬರ್‌ನಲ್ಲಿ ರಷ್ಯಾಗೆ ಪ್ರವಾಸ ಕೈಗೊಂಡಿದ್ದ ಈ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದ. ಅದರಲ್ಲೂ ರಷ್ಯಾ ಸೇನೆಗೆ ಉಕ್ರೇನ್ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ನೀಡುವ ಭರವಸೆ ಕೊಟ್ಟಿದ್ದ ಎನ್ನಲಾಗಿತ್ತು.

ಗ್ರಹಚಾರ ನೆಟ್ಟಗೆ ಇರಲ್ಲ!

ರಷ್ಯಾಗೆ ಶಸ್ತ್ರಾಸ್ತ್ರ ನೀಡುವ ಭರವಸೆ ಕೊಟ್ಟಂತೆ, ಕಿಮ್ ಜಾಂಗ್ ಉನ್ ತನ್ನ ತವರು ನೆಲ ಉತ್ತರ ಕೊರಿಯಾಗೆ ಬಂದು ತಲುಪುತ್ತಿದ್ದಂತೆ ಅಲರ್ಟ್ ಆಗಿದ್ದ. ಹೀಗೆ, ತನ್ನ ಸ್ಕೆಚ್‌ನಂತೆ ಕಿಮ್ ಜಾಂಗ್ ಉನ್ ರಷ್ಯಾಗೆ ಸುಮಾರು 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರ ಪೂರೈಕೆಯನ್ನು ಮಾಡಿದ್ದಾನೆ ಎಂದು ಅಮೆರಿಕ ಆರೋಪಿಸಿತ್ತು. ಆರೋಪದ ಬೆನ್ನಲ್ಲೇ ದಕ್ಷಿಣ ಕೊರಿಯಾ ಅಲರ್ಟ್ ಆಗಿದ್ದು, ಸರ್ವಾಧಿಕಾರಿ ಕಿಮ್ ಶಸ್ತ್ರಾಸ್ತ್ರ ಕೊಟ್ಟಿರುವುದಕ್ಕೆ ಪ್ರತಿಯಾಗಿ ರಷ್ಯಾದ ಕಡೆಯಿಂದ ಕ್ಷಿಪಣಿ ತಂತ್ರಜ್ಞಾನ ವರ್ಗಾವಣೆ ಮಾಡಿದರೆ ಗ್ರಹಚಾರ ನೆಟ್ಟಗೆ ಇರಲ್ಲ ಅಂತಾ ರಷ್ಯಾಗೆ ವಾರ್ನಿಂಗ್ ಕೊಟ್ಟಿದೆ.

South Korea Is Now Very Angry Against Russia For Their Close Friendship With North Korea

ಈ ಬಗ್ಗೆ ಮಾತನಾಡಿರುವ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಪಾರ್ಕ್ ಜಿನ್, ರಷ್ಯಾ ಸರ್ಕಾರಕ್ಕೆ ಮತ್ತು ಸೇನೆಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಮಾಸ್ಕೋ ಈಗ ತನ್ನ ಕ್ಷಿಪಣಿ ತಂತ್ರಜ್ಞಾನವನ್ನು ಉತ್ತರ ಕೊರಿಯಾಗೆ ಕೊಟ್ಟರೆ, ಅಂದರೆ ವರ್ಗಾವಣೆ ಮಾಡಿದರೆ ರಿವೇಂಜ್ ಪಕ್ಕಾ ಎಂದಿದ್ದಾರೆ. ಈ ಮೂಲಕ ಪುಟಾಣಿ ದೇಶ ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ವಿಚಾರವಾಗಿ ರಷ್ಯಾ ಜೊತೆಗೆ ಯುದ್ಧಕ್ಕೆ ಸಿದ್ಧ ಎಂಬ ಸೂಚನೆ ನೀಡಿದೆ. ಆದರೆ ಈ ರೀತಿ ದಕ್ಷಿಣ ಕೊರಿಯಾ ನೀಡಿರುವ ಧಮ್ಕಿಗೆ ರಷ್ಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ರಷ್ಯಾಗೆ ಗುಟ್ಟಾಗಿ ಶಸ್ತ್ರಾಸ್ತ್ರ ಪೂರೈಕೆ?

ಉತ್ತರ ಕೊರಿಯಾ ದೇಶ ಪರಮಾಣು ಅಸ್ತ್ರಗಳ ದೊಡ್ಡ ಸಂಗ್ರಹವನ್ನೇ ಇಟ್ಟುಕೊಂಡು, ಬೆದರಿಕೆ ಹಾಕುತ್ತಿದೆ. ಮಾತ್ರವಲ್ಲ ರಷ್ಯಾ ಜೊತೆ ಒಂದಷ್ಟು ಕಿಲೋ ಮೀಟರ್‌ನಷ್ಟು ಉದ್ದ ಗಡಿಯನ್ನೂ ಉತ್ತರ ಕೊರಿಯಾ ಹಂಚಿಕೊಂಡಿದೆ. ಈ ಗಡಿ ಭಾಗದಿಂದ, ರಷ್ಯಾ ಸೇನೆಗೆ ಕಿಮ್ ಗ್ಯಾಂಗ್ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದ್ರಲ್ಲಿ ಗುಟ್ಟಾಗಿ 1 ಸಾವಿರ ಕಂಟೇನರ್ ಮೂಲಕ ಶಸ್ತ್ರಾಸ್ತ್ರ ಪೂರೈಕೆ ವ್ಯವಹಾರ ನಡೆದಿದೆ ಎಂಬುದಾಗಿ ಅಮೆರಿಕ ಆರೋಪ ಮಾಡಿದೆ.

ಅಮೆರಿಕ ಮಾಡಿದ ಆರೋಪದ ಹಿನ್ನೆಲೆ ದಕ್ಷಿಣ ಕೊರಿಯಾ, ಜಪಾನ್ ಕೂಡ ರೊಚ್ಚಿಗೆದ್ದಿದೆ. ಆದರೆ ಹೆಚ್ಚು ಭಯ ಕಾಡುತ್ತಿರುವುದು ದಕ್ಷಿಣ ಕೊರಿಯಾಗೆ. ಯಾಕೆ ಅಂದ್ರೆ, ರಷ್ಯಾ ಸೇನೆ ಉತ್ತರ ಕೊರಿಯಾಗೆ ಕ್ಷಿಪಣಿ ತಂತ್ರಜ್ಞಾನವನ್ನ ಪೂರೈಕೆ ಮಾಡುವ ಆತಂಕ ದ.ಕೊರಿಯಾಗೆ ಹೆಚ್ಚಾಗಿದ್ದು ಮುಂದೆ ತನಗೆ ಅಪಾಯ ಪಕ್ಕಾ ಅಂತಾ ದಕ್ಷಿಣ ಕೊರಿಯಾ ಯೋಚಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+