ಶೀಘ್ರದಲ್ಲೇ ನೀವು ನಿಮ್ಮ ಮದುವೆಯನ್ನು ಬಾಹ್ಯಾಕಾಶದಲ್ಲಿ ಯೋಜಿಸಬಹುದು: ಹೆಚ್ಚಿನ ಮಾಹಿತಿ ಇಲ್ಲಿದೆ..
ಊರೆಲ್ಲಾ ಕೂಡಿ, ವೇದಿಕೆ ಕಟ್ಟಿ, ಐದು ದಿನ ಊಟ ಹಾಕಿ ಮದುವೆ ಮಾಡಿಕೊಳ್ಳುವ ಮನಸ್ಸು ಅನೇಕರಿಗೆ ಇಲ್ಲ. ಬದಲಾಗಿ ಹತ್ತಿರದ ಬಂಧು ಮಿತ್ರರನ್ನು ಮಾತ್ರ ಆಹ್ವಾನಿಸಿ ಡೆಸ್ಟಿನೇಶನ್ ವೆಡ್ಡಿಂಗ್ ಹೆಸರಿನಲ್ಲಿ ಬೀಚ್, ಕಣಿವೆ ಮತ್ತು ಹೋಟೆಲ್ ನಲ್ಲಿ ಪ್ರತ್ಯೇಕವಾಗಿ ಮದುವೆಯಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಈ ಡೆಸ್ಟಿನೇಶನ್ ವೆಡ್ಡಿಂಗ್ ಕ್ರೇಜ್ ಹೆಚ್ಚಾಗುತ್ತಿದೆ. ಈಗ ಪವಾಡವೆಂದರೆ ನಿಮ್ಮ ಮದುವೆಯನ್ನು ನೀವು ಸಾಧ್ಯವಾದಷ್ಟು ಬೇಗ ಬಾಹ್ಯಾಕಾಶದಲ್ಲಿ ಮಾಡಿಕೊಳ್ಳಬಹುದು. ಆಶ್ಚರ್ಯ ಎನಿಸಿದರೂ ಇದು ನಿಜ. ಬಾಹ್ಯಾಕಾಶದಲ್ಲಿ ಮದುವೆ ಮಾಡಿಕೊಂಡು ಮರೆಯಲಾಗದ ನೆನಪುಗಳನ್ನು ಸೃಷ್ಟಿಸಬಹುದು. ಬಾಹ್ಯಾಕಾಶದಲ್ಲಿ ಈ ವಿಶಿಷ್ಟ ವ್ಯವಸ್ಥೆಯನ್ನು ಮಾಡಲಾಗಿದೆ. ಮಾತ್ರವಲ್ಲದೆ ಬಾಹ್ಯಾಕಾಶದಲ್ಲಿ ಮದುವೆಯಾಗುವ ಈ ವಿಶೇಷ ಪರಿಕಲ್ಪನೆಯನ್ನು ಆನಂದಿಸಲು ಈಗಾಗಲೇ 1000 ಕ್ಕೂ ಹೆಚ್ಚು ಜೋಡಿಗಳು ಬುಕ್ ಮಾಡಿವೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಾಹ್ಯಾಕಾಶ ಪ್ರವಾಸೋದ್ಯಮದ ಕ್ರೇಜ್
ಹೌದು.. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಇದು ಈಗ ಭೂಮಿಯ ವಾತಾವರಣವನ್ನು ಮೀರಿ ಹೋಗುವ ಕನಸು ಕಾಣುವವರಿಗೆ ಆಕರ್ಷಕ ಆಯ್ಕೆಯನ್ನು ಸೃಷ್ಟಿಸಿದೆ. ಬಾಹ್ಯಾಕಾಶ ವಿವಾಹಗಳ ಪರಿಕಲ್ಪನೆಯು ಈ ಅನುಭವವನ್ನು ನೀಡಲಿದ್ದು, ಇದೊಂದು ಅನುಭವ ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಪ್ರಪಂಚದ ಹೊರಗಿನ ಆಚರಣೆಯನ್ನು ಬಯಸುವ ದಂಪತಿಗಳಿಗೆ ಇದು ಅನನ್ಯ ಮತ್ತು ಅಸಾಮಾನ್ಯ ಸೆಟ್ ಅನ್ನು ನೀಡುತ್ತದೆ.
ಬಾಹ್ಯಾಕಾಶ ಪ್ರವಾಸೋದ್ಯಮದಿಂದ ಹೊಸ ಸಾಹಸ
ಬಾಹ್ಯಾಕಾಶ ಪ್ರವಾಸೋದ್ಯಮ ನಿಮ್ಮ ಮದುವೆಯನ್ನು ಈ ಪ್ರಪಂಚದ ಹೊಸ ಹಾಗೂ ನಂಬಲಾಗದ ಸ್ಥಳದಲ್ಲಿ ಆಚರಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಡೆಸ್ಟಿನೇಶನ್ ವೆಡ್ಡಿಂಗ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ, ಬಾಹ್ಯಾಕಾಶ ಪ್ರವಾಸೋದ್ಯಮ ಈಗ ಒಂದು ಹೆಜ್ಜೆ ಮುಂದೆ ಹೋಗಿ ಈ ವಿಶಿಷ್ಟ ವ್ಯವಸ್ಥೆಯನ್ನು ನೀಡಲು ಸಿದ್ಧವಾಗಿದೆ. ಹಾಗಾದರೆ ಬಾಹ್ಯಾಕಾಸದಲ್ಲಿ ಮದುವೆಯಾಗಲು ತಗಲು ವೆಚ್ಚವೆಷ್ಟು ಗೊತ್ತಾ. ಅದನ್ನ ಕೇಳಿದ್ರೆ ನೀವು ಶಾಕ್ ಆಗ್ತೀರ. ಒಬ್ಬ ವ್ಯಕ್ತಿ ಬಾಹ್ಯಾಕಾಶದಲ್ಲಿ ಮದುವೆಯಾಗಲು 1 ಕೋಟಿ ರೂಪಾಯಿ ನೀಡಬೇಕು. ಇದು ಸ್ವಲ್ಪ ಹೆಚ್ಚು ಎಂದು ತೋರುತ್ತದೆ. ಆದರೆ ನೀವು ಪಡೆಯಲಿರುವ ಅನುಭವ ತುಂಬಾ ಹೊಸದು.
2024 ರಿಂದ ಬಾಹ್ಯಾಕಾಶ ವಿವಾಹ ಸೇವೆ ಪ್ರಾರಂಭ
ಬಾಹ್ಯಾಕಾಶ ಪರ್ಸ್ಪೆಕ್ಟಿವ್ಸ್ (Space Perspectives) ಜೋಡಿಗಳು ಭಾಹ್ಯಾಕಾಶದಲ್ಲಿ ಮದುವೆಯಾಗಲು ಅವಕಾಶವನ್ನು ನೀಡುವುದಾಗಿ ಘೋಷಿಸಿದೆ. ಕಾರ್ಬನ್ ನ್ಯೂಟ್ರಲ್ ಬಲೂನ್‌ನಲ್ಲಿ ನೆಪ್ಚೂನ್‌ಗೆ ಹಾರಲು ಆರು ಗಂಟೆಗಳ ಪ್ರಯಾಣ ಮಾಡಬೇಕು. ಪ್ರಯಾಣಿಕರನ್ನು ಭೂಮಿಯಿಂದ 1,000 ಅಡಿ ಎತ್ತರಕ್ಕೆ ಕರೆದೊಯ್ಯಲಾಗುತ್ತದೆ. ಕೆಲ ಗಂಟೆಗಳ ನಂತರ ಅವರನ್ನು ಹಿಂದಕ್ಕೆ ಕರೆತರಲಾಗುತ್ತದೆ. ಇದಕ್ಕಾಗಿ ಈಗಾಗಲೇ 1,000 ಮದುವೆಗಳಿಗೆ ಬುಕ್ ಮಾಡಲಾಗಿದೆ. ಸೇವೆಯು 2024 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಅಸಾಧಾರಣ ಸೌಲಭ್ಯಗಳನ್ನು ಹೊಂದಿರುವ ನೌಕೆ
ಬಾಹ್ಯಾಕಾಶದಲ್ಲಿ ಮದುವೆಯಾಗಲು ಬಯಸುವ ಜೋಡಿಗಳಿಗೆ ವಿಶೇಷ ಅನುಭವ ನೀಡಲು ನೆಪ್ಚೂನ್ (Neptune) ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಎಂಟು ಪ್ರಯಾಣಿಕರು ಆರಾಮದಾಯಕವಾಗಿ ಹಾರಲು ಅವಕಾಶವಿದೆ. ಒರಗುವ ಆಸನಗಳು ಇದರಲ್ಲಿವೆ. ಪೈಲಟ್ಗೆ ಮುಂಭಾಗದಲ್ಲಿ ಸ್ಥಳವಕಾಶವಿರುತ್ತದೆ. ಇದರಲ್ಲಿ ಊಟದ ಕೋಣೆಯ ಟೇಬಲ್ ಹಾಗೂ ಮದುವೆಯ ವೇದಿಕೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮೆನು ಮತ್ತು ಕಾಕ್‌ಟೇಲ್‌ಗಳಿಂದ ಮ್ಯೂಸಿಕ್ ಮತ್ತು ಕಂಗೊಳಿಸುವ ಲೈಟಿಂಗ್ ವ್ಯವಸ್ಥೆ ಇದರಲ್ಲಿರುತ್ತದೆ. ಇದು ವಿಶಿಷ್ಟವಾದ ಆಹಾರ ಸೇವೆಗಳನ್ನು ಹೊಂದಿದೆ. ದೃಶ್ಯಗಳ ವಿಷಯದಲ್ಲಿ ನೆಪ್ಚೂನ್ ಬಾಹ್ಯಾಕಾಶ ನೌಕೆಯು ಅಲ್ಟ್ರಾ-ರೆಸಿಸ್ಟೆಂಟ್ ಮೆಟೀರಿಯಲ್‌ನಿಂದ ನಿರ್ಮಿಸಲಾದ ಬೃಹತ್ ಪೋರ್‌ಹೋಲ್ ಕಿಟಕಿಗಳನ್ನು ಮತ್ತು ವಿಶೇಷ ಆಂಟಿ-ಯುವಿ ಲೇಪನವನ್ನು ಹೊಂದಿದ್ದು, ಅಸಾಧಾರಣ ಅನುಭವವನ್ನು ನೀಡಲು ಸಿದ್ದವಾಗಿದೆ.
ವಿಶಿಷ್ಟ ಅನುಭವ ನೀಡುವ ಬಾಹ್ಯಾಕಾಶ ವಿವಾಹ
ಪ್ರಯಾಣಿಕರು ಹಾರುವ ಸಮಯದಲ್ಲಿ ಉತ್ತಮ ಸಮಯವನ್ನು ಆನಂದಿಸಬಹುದು. ನಿಮಗೆ ಹತ್ತಿರವಿರುವವರೊಂದಿಗೆ ನೀವು ಕಾಕ್‌ಟೇಲ್‌ಗಳನ್ನು ಹಂಚಿಕೊಳ್ಳಬಹುದು. ಇತರ ಪ್ರಯಾಣಿಕರೊಂದಿಗೆ ಚಾಟ್ ಮಾಡಬಹುದು ಮತ್ತು ರೈಡ್‌ಗಾಗಿ ಪರಿಪೂರ್ಣ ಪ್ಲೇಪಟ್ಟಿಯನ್ನು ಆಯ್ಕೆ ಮಾಡಬಹುದು. ಬಾಹ್ಯಾಕಾಶಕ್ಕೆ ಹಾರಿದ ಬಳಿಕ ಎಕ್ಸ್‌ಪ್ಲೋರರ್‌ಗಳು ನೋಡುಗರನ್ನು ವಿಸ್ಮಯಗೊಳಿಸಲಿವೆ.
ಇದರಲ್ಲಿ ಹೈ-ಸ್ಪೀಡ್ ವೈ-ಫೈ ಸಂಪರ್ಕವೂ ಇದೆ. ಆದ್ದರಿಂದ ನೀವು ತಕ್ಷಣ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಬಹುದು ಮತ್ತು ವೈರಲ್ ಆಗಬಹುದು. ಈ ಹೊಸ ರೀತಿಯ ಅನುಭವ ಈಗ ನಿಶ್ಚಿತಾರ್ಥದ ಜೋಡಿಗಳಿಗೆ ಆಕಾಶಕ್ಕೆ ತೆಗೆದುಕೊಂಡು ಹೋಗಲು ಮತ್ತು ಬಾಹ್ಯಾಕಾಶದ ಅಂಚಿನಿಂದ ಸುಂದರವಾದ ಭೂಮಿಯನ್ನು ನೋಡಲು, ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಎಲ್ಲಕ್ಕಿಂತ ಉತ್ತಮವಾಗಿ ಈ ಆಕಾಶ ಸಾಹಸಕ್ಕೆ ಸೇರಲು ನೀವು ಗಗನಯಾತ್ರಿಯಾಗಿರಬೇಕಾಗಿಲ್ಲ!












Click it and Unblock the Notifications