ಇರಾನ್ ವಿರುದ್ಧ ಮತ್ತೆ ದಾಳಿ ಮಾಡಲು ಅಮೆರಿಕ ಪಡೆಗಳಿಂದ ಸಿದ್ಧತೆ? ಏನಿದು ಸೋಷಿಯಲ್ ಮೀಡಿಯಾ ಚರ್ಚೆ?
ಅಮೆರಿಕ ಪ್ರತಿಬಾರಿಯೂ ಜಗತ್ತಿನ ಮೇಲೆ ತನಗೆ ಇರುವ ಹಿಡಿತ ಏನು? ಅನ್ನೋದನ್ನ ತೋರಿಸಲು ಪ್ರಯತ್ನ ಮಾಡುತ್ತಲೇ ಇರುತ್ತದೆ ಅನ್ನೋ ಆರೋಪ ಇದೆ. ಈ ಆರೋಪಕ್ಕೆ ತಕ್ಕಂತೆ, ಅಮೆರಿಕ ಕೂಡ ವರ್ತಿಸುತ್ತಾ ಇರುತ್ತದೆ. ಅದರಲ್ಲೂ ಇರಾನ್ & ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಆಡಿದ ರೀತಿಗೆ ಈಗಲೂ ಪರ ಮತ್ತು ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲೇ, ಇರಾನ್ ವಿರುದ್ಧ ಮತ್ತೆ ದಾಳಿ ಮಾಡಲು ಅಮೆರಿಕ ಪಡೆಗಳಿಂದ ಸಿದ್ಧತೆ? ಏನಿದು ಸೋಷಿಯಲ್ ಮೀಡಿಯಾ ಚರ್ಚೆ?
ಅಮೆರಿಕದ ಸೇನೆ ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಅನ್ನೋದರಲ್ಲಿ ಯಾವುದೇ ಅನುಮಾನ ಕೂಡ ಇಲ್ಲ. ಯಾಕಂದ್ರೆ ಅಮೆರಿಕದ ಎದುರು ತೊಡೆತಟ್ಟಿ ನಿಲ್ಲುವ ಗಟ್ಟಿತನ ಇರುವ ಬೇರೆ ಯಾವುದೇ ಸೇನೆ ಜಗತ್ತಿನ ಮೂಲೆ ಮೂಲೆಯಲ್ಲೂ ಹುಡುಕಿದರೂ ಸಿಗಲ್ಲ ಅನ್ನೋ ಮಾತು ಇತ್ತು. ಆದರೆ ಈಗೆಲ್ಲಾ ಪರಿಸ್ಥಿತಿ ಕೂಡ ಬದಲಾಗಿ ಹೋಗುತ್ತಿದ್ದು, ಅಮೆರಿಕದ ಶತ್ರು ದೇಶಗಳು ಕೂಡ ಗಟ್ಟಿಯಾಗುತ್ತಿವೆ. ಅದರಲ್ಲೂ ಇರಾನ್‌ನ ಸೇನೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್ ಶಕ್ತಿ ಪಡೆಯಲು ಬಡಿದಾಡುತ್ತಿದೆ. ಇದೇ ಕಾರಣಕ್ಕೆ ಅತ್ತ ಅಮೆರಿಕ ಅಟ್ಯಾಕ್ ಮಾಡಿ ಸೈಲೆಂಟ್ ಆಗಿತ್ತು ಅನ್ನುವಾಗಲೇ ಮತ್ತೊಂದು ವಿಚಾರ ಕಿಡಿ ಹೊತ್ತಿಸಿದೆ.

ಇರಾನ್ ವಿರುದ್ಧ ಮತ್ತೆ ಅಟ್ಯಾಕ್?
ಹೌದು, ಅಮೆರಿಕ ಮತ್ತು ಇರಾನ್ ನಡುವೆ ಶತ್ರುತ್ವ ಬೆಳೆದು ಬಂದಿರುವುದು ಇವತ್ತು ಅಥವಾ ನಿನ್ನೆಯಿಂದ ಅಲ್ಲ. ಹತ್ತಾರು ವರ್ಷಗಳಿಂದ ಇಬ್ಬರೂ ಹೀಗೆ ಬಡಿದಾಡುತ್ತಿದ್ದಾರೆ, ಇದೇ ಕಾರಣಕ್ಕೆ ಇಬ್ಬರಿಗೂ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅದರಲ್ಲೂ ಇರಾನ್ ಅಕಸ್ಮಾತ್ ಪರಮಾಣು ಬಾಂಬ್ ಹೊಂದಿದರೆ ಅದು ವಿನಾಶಕ್ಕೆ ದಾರಿ ಮಾಡಿಕೊಡುತ್ತೆ ಅನ್ನೋದು ಅಮೆರಿಕದ ನಂಬಿಕೆ. ಹೀಗಾಗಿ ಇರಾನ್ ವಿರುದ್ಧ ಮತ್ತೊಮ್ಮೆ ಭೀಕರ ದಾಳಿಗೆ ಅಮೆರಿಕ ಸಜ್ಜಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋಗಳು ಕೂಡ ಓಡಾಡುತ್ತಿವೆ.
ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹ?
ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ಸೇರಿದಂತೆ ಸೌದಿ ಅರೇಬಿಯಾ, ಕತಾರ್ ಹಾಗೂ ಹಲವು ಪ್ರದೇಶಗಳಲ್ಲಿ ಅಮೆರಿಕ ಸೇನಾ ನೆಲೆಗಳನ್ನು ಹೊಂದಿದೆ. ಈಗ ದಿಢೀರ್ ಆ ಸೇನಾ ನೆಲೆಗಳಲ್ಲಿ ಅಮೆರಿಕ ಭಾರಿ ಭರ್ಜರಿ ಅಸ್ತ್ರಗಳನ್ನು ಸಂಗ್ರಹ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾ ಬಳಕೆದಾರರು ಚರ್ಚೆ ಮಾಡುತ್ತಿದ್ದು, ಕೆಲವು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಆದರೆ, ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಇರಾನ್ ವಿರುದ್ಧ ಮತ್ತೆ ದಾಳಿ ಮಾಡುತ್ತಾ ದೊಡ್ಡಣ್ಣ ಅಮೆರಿಕ? ಅನ್ನೋ ಪ್ರಶ್ನೆ ಕಿಚ್ಚು ಹೊತ್ತಿಸಿದೆ.












Click it and Unblock the Notifications