Snow Storm: ಅಮೆರಿಕದಲ್ಲಿ ಭೀಕರ ಹಿಮ ಬಿರುಗಾಳಿ, 8,000 ವಿಮಾನಗಳ ಹಾರಾಟ ದಿಢೀರ್ ರದ್ದು

ಅಮೆರಿಕ ಇದೀಗ ಪ್ರಕೃತಿಯ ಮುನಿಸಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ, ಇದೀಗ ಅಮೆರಿಕದ ಹಲವು ರಾಜ್ಯಗಳಲ್ಲಿ ದಿಢೀರ್ ಭೀಕರ ಹಿಮ ಬಿರುಗಾಳಿ ಅಪ್ಪಳಿಸಿದೆ. ಅದರಲ್ಲೂ, ಪ್ರಮುಖ ರಾಜ್ಯಗಳ ಪರಿಸ್ಥಿತಿ ಹಿಮ ಬಿರುಗಾಳಿಯ ಪರಿಣಾಮ ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ಜನರು ಮನೆಗಳಿಂದ ಹೊರಗೆ ಬರಲು ಸಾವಿರ ಬಾರಿ ಯೋಚನೆ ಮಾಡುವ ಸ್ಥಿತಿಯು ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸುಮಾರು 8,000 ವಿಮಾನಗಳ ಹಾರಾಟವನ್ನೇ ದಿಢೀರ್ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ಅಮೆರಿಕದಲ್ಲಿ ಸಿಲುಕಿರುವ ಲಕ್ಷ ಲಕ್ಷ ಪ್ರಯಾಣಿಕರು ಒದ್ದಾಡುವ ಪರಿಸ್ಥಿತಿ ಇದೆ.

ಮುಂದುವರಿದ ದೇಶ ಎಂಬ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ವಾರಾಂತ್ಯ ಬಂದರೆ ಸಾಕು ಭಾರಿ ಪ್ರಮಾಣದಲ್ಲಿ ವಿಮಾನಗಳ ಹಾರಟ ಇರುತ್ತದೆ. ಆದರೆ ಅಮೆರಿಕದ ಹಲವು ರಾಜ್ಯಗಳಲ್ಲಿ ಇದೀಗ ವಾರಾಂತ್ಯದಲ್ಲಿ ಹಾರಾಟ ನಡೆಸಲಿರುವ 8,000 ವಿಮಾನಗಳ ಹಾರಾಟ ರದ್ದು ಮಾಡಿದ್ದು ಚಿಂತೆ ತರಿಸಿದೆ. ಹಿಮ ಬಿರುಗಾಳಿಯ ಅಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದ್ದು, ಅಮೆರಿಕ ಹವಾಮಾನ ಕೈಮೀರಿ ಹೋಗುವ ಮುನ್ಸೂಚನೆ ಸಿಗುತ್ತಿದೆ. ಇಷ್ಟೆಲ್ಲಾ ಕಠಿಣ ಪರಿಸ್ಥಿತಿಯ ನಡುವೆ ವಿದ್ಯುತ್ ಕಡಿತಗೊಳ್ಳುವ ಮತ್ತು ಪ್ರಮುಖ ರಸ್ತೆಗಳು ಅಸ್ತವ್ಯಸ್ತವಾಗುವ ಆತಂಕ ಕೂಡ ಆವರಿಸಿದೆ. ಕೋಟ್ಯಂತರ ಜನರು ಭೀಕರ ಹಿಮ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಪರದಾಡುತ್ತಿದ್ದಾರೆ.

Snow Storm

ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ಹೀಗಿತ್ತು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಮ ಚಂಡಮಾರುತ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದನ್ನು ಐತಿಹಾಸಿಕ ಚಂಡಮಾರುತ ಎಂದಿದ್ದಾರೆ. ಅಮೆರಿಕದ ರಾಜ್ಯಗಳಾದ ದಕ್ಷಿಣ ಕರೊಲಿನಾ, ವರ್ಜೀನಿಯಾ, ಟೆನ್ನೆಸ್ಸಿಸ್, ಜಾರ್ಜಿಯಾ, ಉತ್ತರ ಕೆರೊಲಿನಾ, ಮೇರಿಲ್ಯಾಂಡ್ ಸೇರಿ ಅರ್ಕಾನ್ಸಾಸ್, ಕೆಂಟಕಿ, ಲೂಸಿಯಾನ, ಮಿಸ್ಸಿಸ್ಸಿಪ್ಪಿ, ಇಂಡಿಯಾನಾ & ಪಶ್ಚಿಮ ವರ್ಜೀನಿಯಾದ ಭಾಗಗಳಲ್ಲಿ ತುರ್ತು ವಿಪತ್ತು ಘೋಷಣೆ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆ ಕೂಡ ಇದೀಗ ತುರ್ತಾಗಿ ಸಾಗಿದ್ದು, ಜನರಿಗೆ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಟ್ರಂಪ್ ಅವರ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ.

17 ರಾಜ್ಯಗಳ ಹವಾಮಾನ ಪರಿಸ್ಥಿತಿ ಭೀಕರ

ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ವಿಶೇಷ ಸಂದೇಶ ಒಂದನ್ನು ರವಾನೆ ಮಾಡಿರುವ ಟ್ರಂಪ್ ಅವರು, ಹಿಮ ಚಂಡಮಾರುತ ಅಪ್ಪಳಿಸಿರುವ ರಾಜ್ಯಗಳ ಜೊತೆಗೆ ನಾವು ಸಂಪರ್ಕದಲ್ಲಿ ಇದ್ದೇವೆ. ಎಲ್ಲಾ ರಾಜ್ಯಗಳ ಜೊತೆ ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತಿದ್ದೇವೆ ಮತ್ತು ಈ ಪರಿಸ್ಥಿತಿಯಲ್ಲಿ ನೀವು ಸುರಕ್ಷಿತವಾಗಿರಿ & ಬೆಚ್ಚಗಿರಿ ಎಂದು ಟ್ರಂಪ್ ಅವರು ಬಹುಮುಖ್ಯ ಸಲಹೆ ನೀಡಿದ್ದಾರೆ. ಅಮೆರಿಕದ ಒಟ್ಟು 17 ರಾಜ್ಯಗಳು ಸೇರಿದಂತೆ ಕೊಲಂಬಿಯಾ ಭಾಗದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಿರುವ ಬಗ್ಗೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮಾಹಿತಿ ನೀಡಿದೆ. ಈಗಿನ ವಾತಾವರಣ ನೋಡಿದರೆ ಸದ್ಯಕ್ಕೆ ಹಿಮ ಬಿರುಗಾಳಿ ಸೈಲೆಂಟ್ ಆಗುವ ಯಾವುದೇ ರೀತಿ ಲಕ್ಷಣ ಕಾಣಿಸುತ್ತಿಲ್ಲ. ಹೀಗಿದ್ದಾಗ ಅಮೆರಿಕನ್ನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈಗಾಗಲೇ ಅಧಿಕಾರಿಗಳು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+