ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!

ವುಹಾನ್, ಮಾರ್ಚ್.18: ಕೊರೊನಾ ವೈರಸ್ ಮೊದಲಿಗೆ ಕಾಣಿಸಕೊಂಡ ಚೀನಾದ ವುಹಾನ್ ನಗರದಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿ ಬಿಟ್ಟಿದೆ. ವಿಶ್ವದೇ ಮಾರಕ ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದೆ.

Recommended Video

      Bengaluru's iskon temple shut down | Temples shut down in bangalore | Bengaluru | Karnataka

      ಇದರ ಮಧ್ಯೆ ಚೀನಾ ವುಹಾನ್ ನಗರದಲ್ಲಿ ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬುಧವಾರ ಇಡೀ ನಗರದಲ್ಲ ಒಂದೇ ಒಂದು ಸೋಂಕಿತ ಪ್ರಕರಣವು ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

      ಕಳೆದ ಒಂದು ತಿಂಗಳಿನಲ್ಲಿ ವುಹಾನ್ ನಗರದಲ್ಲಿ ಸಾವಿರಾರು ಜನರಿಗೆ ಕೊರೊನಾ ವೈರಸ್ ಸೋಂಕು ಹರಡಿದ್ದು, ಮಂಗಳವಾರ ಕೂಡಾ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿದೆ. ಸೋಂಕು ಕಾಣಿಸಿಕೊಂಡ ನಗರವು ಸಂಪೂರ್ಣ ಸ್ತಬ್ಧಗೊಂಡಿದೆ.

      ಚೀನಾದಲ್ಲಿ ಸುಧಾರಣೆ ಕಂಡು ಬಂದ ಪರಿಸ್ಥಿತಿ

      ಚೀನಾದಲ್ಲಿ ಸುಧಾರಣೆ ಕಂಡು ಬಂದ ಪರಿಸ್ಥಿತಿ

      ಕೊರೊನಾ ವೈರಸ್ ನಿಂದ ತತ್ತರಿಸಿರುವ ಚೀನಾದಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಣೆ ಕಂಡು ಬಂದಿದೆ. ಅಲ್ಲಿನ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳು ಹಲವು ರಾಷ್ಟ್ರಗಳಿಗೆ ಮಾದರಿ ಆಗಲಿದೆ. ಬುಧವಾರ ದೇಶಾದ್ಯಂತ ಕೇವಲ 13 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ವುಹಾನ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ 12 ಪ್ರಕರಣ

      ವುಹಾನ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ 12 ಪ್ರಕರಣ

      ಬುಧವಾರದ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಒಟ್ಟು 13 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ವುಹಾನ್ ನಗರದಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ವುಹಾನ್ ನಗರದಿಂದ ಹೊರ ಪ್ರದೇಶದಲ್ಲಿ 12 ಸೋಂಕಿನ ಪ್ರಕರಣವು ಬೆಳಕಿಗೆ ಬಂದಿದೆ.

      ಚೀನಾದ ಯಾವ ನಗರದಲ್ಲಿ ಎಷ್ಟು ಸೋಂಕಿತ ಪ್ರಕರಣ

      ಚೀನಾದ ಯಾವ ನಗರದಲ್ಲಿ ಎಷ್ಟು ಸೋಂಕಿತ ಪ್ರಕರಣ

      ಇನ್ನು, ಚೀನಾದ ಯಾವ ನಗರದಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದೆ. ಬೀಜಿಂಗ್ ನಲ್ಲಿ 3, ವಾಣಿಜ್ಯ ಕೇಂದ್ರವಾಗಿರುವ ಶಾಂಘೈನಲ್ಲಿ 3, ಸಿಚುಹಾನ್ ನಲ್ಲಿ 1, ಕೈಗಾರಿಕಾ ಪ್ರದೇಶದ ಹೃದಯಭಾಗವಾಗಿರುವ ಗುಯಾಂಗ್ ದಾಂಗ್ ನಲ್ಲಿ 5 ಸೋಂಕಿತ ಪ್ರಕರಣವನ್ನು ಪತ್ತೆಯಾಗಿದೆ.

      1,98,770 ಜನರಿಗೆ ಸೋಂಕಿತ ಪ್ರಕರಣ ಪತ್ತೆ

      1,98,770 ಜನರಿಗೆ ಸೋಂಕಿತ ಪ್ರಕರಣ ಪತ್ತೆ

      ವಿಶ್ವದಲ್ಲೇ ಸೋಂಕಿತರು ಹಾಗೂ ಮೃತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 7,989 ಜನರು ಇದುವರೆಗೂ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದರೆ, 1,98,770 ಜನರಿಗೆ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. 82,779 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+