ಸಿಖ್ ಬಾಲಕಿ ಅಪಹರಣ, ಮತಾಂತರ, ಪಾಕಿಸ್ತಾನದ ಯುವಕನೊಂದಿಗೆ ಮದುವೆ
ಇಸ್ಲಾಮಾಬಾದ್, ಆಗಸ್ಟ್ 30: ಸಿಖ್ ಧರ್ಮ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ , ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ, ಪಾಕಿಸ್ತಾನದ ವ್ಯಕ್ತಿಗೆ ಮದುವೆ ಮಾಡಿಸಿದ ಘಟನೆ ಲಾಹೋರ್‌ನಲ್ಲಿ ನಡೆದಿದೆ.
ಯುವತಿ ಪಾಕಿಸ್ತಾನ ಮೂಲದವಳಾಗಿದ್ದು, ಲಾಹೋರ್‌ನ ನಂಕನ ಸಾಹೇಬ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಯುವತಿ ಹಲವು ದಿನಗಳ ಹಿಂದೆ ಕಾಣೆಯಾಗಿದ್ದಳು. ಯುವತಿ ಜಗಜೀತ್ ಕೌರ್ ನ್ನು ಬಲವಂತವಾಗಿ ಮತಾಂತರ ಮಾಡಿ ಆಕೆಯ ಹೆಸರನ್ನು ಆಯೆಷಾ ಎಂದು ಬದಲಾಯಿಸಿದ್ದರು. ಇದೆಲ್ಲವೂ ಒಂದು ವಿಡಿಯೋ ಮೂಲಕ ಪತ್ತೆ ಹಚ್ಚಲಾಗಿತ್ತು.
ಸ್ಥಳೀಯ ಮೌಲ್ವಿಯೊಬ್ಬರು ಪಾಕಿಸ್ತಾನದ ವ್ಯಕ್ತಿ ಜೊತೆಗೆ ಆಕೆಯ ಮದುವೆಯನ್ನು ಮಾಡಿಸಿದ್ದರು. ಯುವತಿ 16 ವರ್ಷದ ಆಸುಪಾಸಿನಲ್ಲಿದ್ದಾಳೆ.

ಸ್ಥಳೀಯ ಮುಸ್ಲಿಂ ಗ್ಯಾಂಗ್ ಒಂದು ಅಪಹರಣ ಮಾಡಿತ್ತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಧ್ಯಸ್ಥಿಕೆಗೆ ಯುವತಿ ಕುಟುಂಬ ಮನವಿ ಮಾಡಿದೆ. ಹಾಗೆಯೇ ನರೇಂದ್ರ ಮೋದಿ ಹಾಗೂ ಜೈಶಂಕರ್ ಪ್ರಸಾದ್ ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
'ಒಂದೊಮ್ಮೆ ನೀನು ಮತಾಂತರವಾಗದಿದ್ದರೆ ನಿನ್ನ ತಂದೆಯನ್ನು ಕೊಂದು ಬಿಡುತ್ತೇವೆ ಎಂದು ಬೆದರಿಸಿ ಮತಾಂತರಿಸಿದ್ದಾರೆ'. ಎಂದು ಬಾಲಕಿಯ ಸಹೋದರ ಟ್ವೀಟ್ ಮಾಡಿದ್ದಾರೆ.












Click it and Unblock the Notifications