SpaceX Mission: ಬಾಹ್ಯಾಕಾಶಕ್ಕೆ ಹಾರಲು ಭಾರತೀಯ ಸಜ್ಜು, ಹೇಗಿದೆ ಗೊತ್ತಾ ತಯಾರಿ?
ಬಾಹ್ಯಾಕಾಶ ಲೋಕದಲ್ಲಿ ಭಾರತ & ಭಾರತೀಯರು ಬಹುದೊಡ್ಡ ಸಾಧನೆ ಮಾಡುತ್ತಿದ್ದು, ಈಗಾಗಲೇ ನಮ್ಮ ದೇಶದ ಇಸ್ರೋ ಸಂಸ್ಥೆ ಇಡೀ ಜಗತ್ತಿಗೇ ಮಾದರಿಯಾಗಿ ಬೆಳೆದು ನಿಂತಿದೆ. ಭಾರತೀಯರಲ್ಲಿ ಬಾಹ್ಯಾಕಾಶ ಜ್ಞಾನ ಹೆಚ್ಚಾಗುತ್ತಿದ್ದು, ಸಾವಿರಾರು ವಿಜ್ಞಾನಿಗಳು ಈಗಾಗಲೇ ಅಮೆರಿಕದ ನಾಸಾ ಸಂಸ್ಥೆಯಲ್ಲಿ ಸೇವೆಯನ್ನ ಸಲ್ಲಿಸುತ್ತಿದ್ದಾರೆ. ಇಂತಹ ಖುಷಿಯಾದ ಸಮಯದಲ್ಲೇ ಭಾರತ ಮೂಲದ ಬಾಹ್ಯಾಕಾಶ ವಿಜ್ಞಾನಿ ಇದೀಗ ಆಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
ಅಂದಹಾಗೆ ಜೂನ್ 25 ಅಂದ್ರೆ ಇಂದು ಆಕ್ಸಿಯಮ್-4 ಮಿಷನ್ ಉಡಾವಣೆಯನ್ನು ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧವಾಗಿದೆ. ಹೀಗೆ, ನಾಸಾ ಉಡಾವಣೆ ಮಾಡುತ್ತಿರುವ ಹೊಸ ಯೋಜನೆ ಭಾರತೀಯರಿಗೆ ಕೂಡ ಬಹುಮುಖ್ಯವಾಗಿದೆ. ಯಾಕೆ ಅಂದ್ರೆ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ನೇತೃತ್ವದಲ್ಲೇ ಈ ಯೋಜನೆ ನಡೆಯುತ್ತಿದೆ. ಹಲವಾರು ಅಡ್ಡಿಗಳ ನಡುವೆ ಮುಂದೆ ಮುಂದೆ ಹೋಗುತ್ತಿದ್ದ ಉಡಾವಣೆ ಇಂದು ನೆರವೇರುತ್ತಿದ್ದು, ವಾತಾವರಣ ಕೂಡ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬೆನ್ನಿಗೆ ನಿಂತಿದೆ.

ಆಕ್ಸಿಯಮ್-4 ಉಡಾವಣೆ ಸಮಯ ಯಾವುದು?
ಇನ್ನು ಕೆಲವೇ ಕ್ಷಣಗಳಲ್ಲಿ ಆಕ್ಸಿಯಮ್-4 ಮಿಷನ್ ಉಡಾವಣೆ ಮಾಡಲಾಗುತ್ತದೆ. ಆಕ್ಸಿಯಮ್-4 ಮಿಷನ್ ಫ್ಲೊರಿಡಾದಲ್ಲಿ ಇರುವ ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಆಗುತ್ತಿದೆ. ಅಲ್ಲಿನ ಕಾಲಮಾನ ಅಂದ್ರೆ ಫ್ಲೊರಿಡಾದ ಕಾಲಮಾನ ಬೆಳಗಿನ ಜಾವ 2.31ಕ್ಕೆ ಈ ಉಡಾವಣೆ ಪ್ರಕ್ರಿಯೆಯನ್ನ ಶುರು ಮಾಡಲಾಗುತ್ತದೆ. ಅಂದ್ರೆ ಇನ್ನೇನು ಕೆಲವೇ ಕೆಲವು ನಿಮಿಷದಲ್ಲಿ ಉಡಾವಣೆ ನಡೆಯಲಿದೆ. ಹೀಗಾಗಿಯೇ ಈ ಯೋಜನೆ ಭಾರಿ ಕುತೂಹಲ ಕೆರಳಿಸಿದ್ದು, ಇಡೀ ಜಗತ್ತು ರಾಕೆಟ್ ಹಾರುವ ಅದ್ಭುತವಾದ ಕ್ಷಣಕ್ಕಾಗಿ ಕಾಯುತ್ತಾ ಕುಳಿತಿದೆ.












Click it and Unblock the Notifications