ಜರ್ಮನಿ: ಮ್ಯೂನಿಚ್ ರೈಲ್ವೇ ನಿಲ್ದಾಣದಲ್ಲಿ ಗುಂಡಿನ ದಾಳಿ: 7 ಜನರಿಗೆ ಗಾಯ
ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಐತಿಹಾಸಿಕ ನಗರ ಮ್ಯೂನಿಚ್ ನ ರೈಲ್ವೆ ನಿಲ್ದಾಣದಲ್ಲಿ ಗುಂಡಿನ ದಾಳಿ. ಅಪರಿಚಿತ ಹಾರಿಸಿದ ಗುಂಡಿನ ದಾಳಿಗೆ ಏಳು ಜನರಿಗೆ ಗಾಯ. ಪರಾರಿಯಾಗಿರುವ ಅಪರಿಚಿತನಿಗಾಗಿ ಪೊಲೀಸರ ಶೋಧ.
ಮ್ಯೂನಿಚ್ (ಜರ್ಮನಿ), ಜೂನ್ 13: ಜರ್ಮನಿಯ ದಕ್ಷಿಣದಲ್ಲಿರುವ ಮ್ಯೂನಿಚ್ ನಗರದ ರೈಲ್ವೇ ನಿಲ್ದಾಣವೊಂದರಲ್ಲಿ ಅಪರಿಚಿತ ವ್ಯಕ್ತಿಯೊಂದ ಗುಂಡಿನ ದಾಳಿ ನಡೆದಿದ್ದು ಏಳು ಜನರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮ್ಯೂನಿಚ್ ನ ಈಶಾನ್ಯ ದಿಕ್ಕಿನಲ್ಲಿರುವ ಬವಾರಿಯನ್ ನಗರದ ಎಸ್- ಬಹ್ನ್ ಎಂಬ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾರ್ಯಾಚರಣೆಗೆ ತೊಡಗಿರುವ ಪೊಲೀಸರು ಗುಂಡು ಹಾರಿಸಿ ಪರಾರಿಯಾಗಿರುವ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಆತ ರೈಲ್ವೇ ನಿಲ್ದಾಣದಲ್ಲೇ ಅವಿತಿರಬಹುದಾದ ಶಂಕೆಯೂ ಮೂಡಿದ್ದು ಆತನಿಗಾಗಿ ವ್ಯಾಪಕ ಶೋಧಕಾರ್ಯ ನಡೆಯುತ್ತಿದೆ.

ಪ್ರತ್ಯಕ್ಷ ದರ್ಶಿಯ ಪ್ರಕಾರ, ದಾಳಿಕೋರ ಕೈಯ್ಯಲ್ಲಿ ಪಿಸ್ತೂಲು ಹಿಡಿದು ದಾಳಿ ನಡೆಸಿದ್ದಾನೆ. ಆದರೆ, ಆತ ಪೊಲೀಸ್ ಸಮವಸ್ತ್ರದಲ್ಲಿದ್ದ ಎಂದು ಕೆಲವರು ಹೇಳಿರುವುದು, ಆತ ನಿಜವಾಗಿಯೂ ಪೊಲೀಸ್ ಸಿಬ್ಬಂದಿಯೇ ಅಥವಾ ಹೊರಗಿನಿಂದ ಬಂದ ಭಯೋತ್ಪಾದಕನೇ ಎಂಬ ಗೊಂದಲದಲ್ಲಿದ್ದಾರೆ ಪೊಲೀಸರು.
ಸದ್ಯಕ್ಕಂತೂ, ರೈಲ್ವೇ ನಿಲ್ದಾಣವನ್ನು ಪೊಲೀಸರು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications