ನೆದರ್ಲೆಂಡ್ ನಲ್ಲಿ ಶೂಟೌಟ್ : ಉಗ್ರರ ದಾಳಿ ಶಂಕೆ, ಹಲವರಿಗೆ ಗಾಯ

ಹೇಗ್ (ನೆದರ್ಲೆಂಡ್), ಮಾರ್ಚ್ 18 : ಡಚ್ ನಗರಿ ಉಟ್ರೆಚ್ ನ ಟ್ರಾಮ್ ವೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ಹಿಂದೆ ಉಗ್ರರ ಕೈವಾಡವಿದೆಯಾ ಎಂಬುದು ದೃಢಪಡಬೇಕಿದೆ.

ಪೊಲೀಸರು ತ್ವರಿತವಾಗಿ ತನಿಖೆ ಆರಂಭಿಸಿದ್ದು, ಈ ಶೂಟೌಟ್ ನ ಹಿಂದೆ ಭಯೋತ್ಪಾದಕರ ಕೈವಾಡದ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 10.45ರ ಸುಮಾರಿಗೆ 24 ಅಕ್ಟೋಬರ್ ಸ್ಕ್ವೇರ್ ನಲ್ಲಿ ಈ ಘಟನೆ ಜರುಗಿದೆ. ಅಪರಿಚಿತ ವ್ಯಕ್ತಿ ಬೇಕಾಬಿಟ್ಟಿ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ 7 ಜನ ಗಾಯಗೊಂಡಿದ್ದಾರೆ.

ಇಡೀ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಜನರ ರಕ್ಷಣೆಗಾಗಿ ಮೂರು ಹೆಲಿಪಾಕ್ಟರ್ ಗಳನ್ನು ಕೂಡ ಕಳುಹಿಸಲಾಗಿದೆ. ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಗಳನ್ನು ಕೂಡ ತರಿಸಲಾಗಿದೆ. ಅದೃಷ್ಟವಶಾತ್ ಯಾರೂ ಸಾವಿಗೀಡಾಗಿಲ್ಲ. ಈ ಘಟನೆಯ ಬಗ್ಗೆ ನಿಖರವಾದ ಚಿತ್ರಣ ಇನ್ನೂ ಬರಬೇಕಿದೆ.

Shooting inside tram in Utrecht : Several injured

ಇಂಥ ಘಟನೆಗಳು ಮರುಕಳಿಸುವ ಸಾಧ್ಯತೆ ಇರುವುದರಿಂದ ಜನರು ಈ ಸಮಯ ಮನೆಯಲ್ಲಿಯೇ ಇರಬೇಕು ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.

ನ್ಯೂಜಿಲೆಂಡ್ ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದ ಎರಡೇ ದಿನಗಳಲ್ಲಿ ನೆದರ್ಲೆಂಡ್ ನಲ್ಲಿ ಈ ಘಟನೆ ನಡೆದಿದ್ದು ಕಳವಳಕ್ಕೀಡು ಮಾಡಿದೆ. ನ್ಯೂಜಿಲೆಂಡ್ ನಲ್ಲಿ ನಡೆದಿದ್ದ ಘಟನೆಯಲ್ಲಿ ಐವತ್ತು ಜನರು ಗುಂಡಿನ ದಾಳಿಗೆ ಹತರಾಗಿ ಹಲವರು ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+