ಶಾಕಿಂಗ್: ತರಗತಿಯ ಪ್ರೊಜೆಕ್ಟರ್‌ನಲ್ಲಿ ಅಶ್ಲೀಲ ವಿಡಿಯೊ ಪ್ಲೇ ಮಾಡಿದ ಶಿಕ್ಷಕ
ಟೆಕ್ಸಾಸ್
ಎಪ್ರಿಲ್ 19: ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ಮಕ್ಕಳಿಗೆ ಮೊದಲ ಗುರು ಯಾರು ಎನ್ನುವ ಪ್ರಶ್ನೆಗೆ ಥಟ್ ಅಂತ ತಾಯಿ ಅಂತ ಹೇಳುತ್ತೇವೆ. ತಾಯಿ ನಂತರದ ಸ್ಥಾನವನ್ನು ಯಾವಾಗಲೂ ಶಿಕ್ಷಕನಿಗೆ ನಾವು ನೀಡುತ್ತೇವೆ. ಮಕ್ಕಳಿಗೆ ಅಕ್ಷರದ ಜ್ಞಾನವನ್ನ ನೀಡುವ ಶಿಕ್ಷಕನನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಆದರೆ ಇಲ್ಲೊಬ್ಬ ಶಿಕ್ಷಕ ಮಕ್ಕಳಿಗೆ ತರಗತಿಯಲ್ಲಿ ನೀಡಿದ ಜ್ಞಾನವನ್ನು ನೀವು ಕೇಳಿದ್ರೆ ಮಕ್ಕಳಿಗೆ ಶಾಲೆಗೆ ಕಳುಹಿಸುವ ಮುನ್ನ ಹತ್ತು ಬಾರಿ ಯೋಚನೆ ಮಾಡಬಹುದು. ಶಿಕ್ಷಕನೊಬ್ಬ ತರಗತಿ ಸಮಯದಲ್ಲಿ ಅಶ್ಲೀಲ ವಿಡಿಯೋ ನೋಡುವ ಮೂಲಕ ಚೀಮಾರಿ ಹಾಕಿಸಿಕೊಂಡಿದ್ದಾನೆ. id="toptextpromo"> id='are-slot-1' class='oiad oi-axt oiadv'>ಶಿಕ್ಷಕರ
'ವಿದ್ಯೆ' ಎಂಬ ಅರಿವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಜ್ಞಾನದಾಹಿಗಳನ್ನಾಗಿಸಿ ಆ ಮೂಲಕ ಅವರು ಭವಿಷ್ಯದಲ್ಲಿ ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಭದ್ರ ಬುನಾದಿಯೊಂದನ್ನು ಹಾಕಿಕೊಡುತ್ತಾರೆ. ಆದರೆ ಶಿಕ್ಷಕರೊಬ್ಬರು ಪ್ರಾಜೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಅಶ್ಲೀಲ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. ತಕ್ಷಣ ಇಡೀ ಶಾಲೆಯಲ್ಲಿ ಗದ್ದಲ ಉಂಟಾಗಿದೆ. ಈ ವಿಷಯ ಇದೀಗ ಪೊಲೀಸರಿಗೆ ತಲುಪಿದ್ದು, ವಿದ್ಯಾರ್ಥಿಗಳ ಪೋಷಕರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಈ ತಪ್ಪಿಗೆ ಶಿಕ್ಷಕನನ್ನು ಏಪ್ರಿಲ್ 19 ರಂದು ಕೆಲಸದಿಂದ ವಜಾಗೊಳಿಸಲಾಗಿದೆ. ವಿಷಯ ಉಲ್ಬಣಗೊಂಡಿದ್ದು ಈ ತಪ್ಪಿಗೆ ಶಿಕ್ಷಕರಿಗೆ ಒಂದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. id='are-slot-2' class='oiad oi-axt oiadv'>
ತರಗತಿಯ ಪ್ರೊಜೆಕ್ಟರ್‌ನಲ್ಲಿ ಅಶ್ಲೀಲ ವಿಡಿಯೊ ಪ್ಲೇ
ತರಗತಿಯಲ್ಲಿ ಪ್ರೊಜೆಕ್ಟರ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ಪ್ಲೇ ಮಾಡುವ ಆಘಾತಕಾರಿ ಘಟನೆಯು ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ನಡೆದಿದೆ. ಅಲ್ಲಿ ಹೂಸ್ಟನ್‌ನ ಕ್ಲೈನ್ ಕಾಲಿನ್ಸ್ ಹೈಸ್ಕೂಲ್‌ನಲ್ಲಿ ಶಿಕ್ಷಕ ಕೆವಿನ್ ವೆಲ್ಚೆಲ್ ಎಂಬಾತ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಅಶ್ಲೀಲ್ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ತಪ್ಪಾಗಿ ತರಗತಿಯ ಪ್ರೊಜೆಕ್ಟರ್‌ನಲ್ಲಿ ವಿಡಿಯೋ ಪ್ಲೇ ಆಗತೊಡಗಿದೆ. ಶಾಲೆಯಲ್ಲಿ ನಡೆದ ಈ ಘಟನೆಯಿಂದಾಗಿ ಇದೀಗ ದೊಡ್ಡ ವಿವಾದ ಉಂಟಾಗಿದ್ದು, ಕೆಲ ಮಕ್ಕಳ ಪೋಷಕರು ವೆಲ್ಚೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ಅವರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಯಿತು.

ತಪ್ಪಿಗೆ ಶಿಕ್ಷೆ ಏನಿರಬಹುದು?
ಕ್ಲೈನ್ ಕಾಲಿನ್ಸ್ ಹೈಸ್ಕೂಲ್ನಲ್ಲಿ ವಿದ್ಯಾರ್ಥಿಗಳ ಪೋಷಕರು ಸಹ ಶಿಕ್ಷಕ ಕೆವಿನ್ ವೆಲ್ಚೆಲ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಏಪ್ರಿಲ್ 19 ರಂದು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವೆಲ್ಚೆಲ್ ಅವರನ್ನು ವಜಾ ಮಾಡಲಾಯಿತು. ಶಿಕ್ಷಕನು ಈಗ ದುಷ್ಕೃತ್ಯದ ಆರೋಪವನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ವೆಲ್ಚೆಲ್ ಈಗ ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕ ವಸ್ತುಗಳನ್ನು ಪ್ರದರ್ಶಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ತಪ್ಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು $4,000 (3 ಲಕ್ಷ ರೂ. ) ವರೆಗೆ ದಂಡವನ್ನು ವಿಧಿಸುವ ಸಾಧ್ಯತೆ ಇದೆ.

'ಕೆವಿನ್ ಅವರನ್ನು ಮಕ್ಕಳ ಪ್ರೀತಿಸುತ್ತಾರೆ'
ಬಹುತೇಕ ಪೋಷಕರು ಅವರ ತಪ್ಪಿನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೋಷಕ ಕ್ಲಿಕ್ ಹಾಸ್ಟೆನ್ ಪ್ರಕಾರ, "ಅವರು ಅತ್ಯುತ್ತಮ ಶಿಕ್ಷಕರಾಗಿದ್ದರು ಮತ್ತು ನಮ್ಮ ಮಕ್ಕಳು ಅವರನ್ನು ಪ್ರೀತಿಸುತ್ತಿದ್ದರು. ಆದ್ದರಿಂದ ಇದು ಸಂಭವಿಸಿದ್ದು ನಿಜವಾಗಿಯೂ ದುರದೃಷ್ಟಕರವಾಗಿದೆ. ಮತ್ತು ಆಶಾದಾಯಕವಾಗಿದೆ. ಈ ಘಟನೆ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು" ಎಂದಿದ್ದಾರೆ. "ನಾವು ಯಾವಾಗಲೂ ಕೆವಿನ್ ಮತ್ತು ಅವರ ಪತ್ನಿಯೊಂದಿಗೆ ಅತ್ಯಂತ ಸಕಾರಾತ್ಮಕ ಸಂಬಂಧವನ್ನು ಹೊಂದಿದ್ದೇವೆ. ಈ ಆರೋಪವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬ ಪೋಷಕ ಹೇಳಿದ್ದಾರೆ.

ಇದು ದೊಡ್ಡ ವಿಚಾರವಲ್ಲ ಎಂದು ಕೆಲ ಪೋಷಕರು
ಈ ಘಟನೆ ತುಂಬಾ ನಿರಾಶದಾಯಕವಾಗಿದೆ. ಇದರ ಬಗ್ಗೆ ನಮ್ಮ ಮಕ್ಕಳು ನಮ್ಮನ್ನು ಪ್ರಶ್ನಿದಾಗಲೇ ಈ ಘಟನೆ ನಮಗೆ ತಿಳಿದು ಬಂದಿದೆ ಎಂದು ಕೆಲವು ಮಕ್ಕಳ ಪೋಷಕರು ಹೇಳಿದ್ದಾರೆ. ಮತ್ತೊಬ್ಬ ಪೋಷಕ "ಇದು ಆಘಾತಕಾರಿ ಅಲ್ಲ. ಏಕೆಂದರೆ ಜನರು ಇದನ್ನು ನೋಡುತ್ತಾರೆ ಮತ್ತು ಜಗತ್ತಿನಲ್ಲಿ ಅನಾರೋಗ್ಯ ಪೀಡಿತರು ಇದ್ದಾರೆ. ಅವರನ್ನು ನಾವು ನೋಡುವುದಿಲ್ಲವೇ' ಎಂದು ಹೇಳಿದ್ದಾರೆ. ಮತ್ತೊಂದೆಡೆ ಆರೋಪಿ ಶಿಕ್ಷಕ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಜಿಲ್ಲೆಯ ಅಧಿಕಾರಿಯೊಬ್ಬರು, "ಎಫ್‌ಐಆರ್ ದಾಖಲಾಗಿದೆ" ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಿಂದ ಎಲ್ಲಾ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಲಾಗಿದೆ ಎಂದಿದ್ದಾರೆ.












Click it and Unblock the Notifications