ಅಪ್ರಾಪ್ತೆ ಜತೆ ಮದ್ವೆ, ಮಾಜಿ ವೇಗಿ ಅಖ್ತರ್ ಹೇಳಿದ್ದೇನು?

ಇಸ್ಲಾಮಾಬಾದ್, ಜೂ.8: ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಗಳಿಸಿರುವ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಮದುವೆ ಸುದ್ದಿ ಚರ್ಚೆಗೆ ಕಾರಣವಾಗಿದೆ. 39 ವರ್ಷದ ಪ್ರಾಯದ ಮಾಜಿ ಕ್ರಿಕೆಟಿಗ ಅಖ್ತರ್, ತಮಗಿಂತಲೂ ಚಿಕ್ಕ ವಯಸ್ಸಿನ ಅದರಲ್ಲಿಯೂ 17 ವರ್ಷ ಅಪ್ರಾಪ್ತೆಯನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯ ಬಗ್ಗೆ ಸ್ವತಃ ಅಖ್ತರ್ ಅವರೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, 17 ವರ್ಷದ ಬಾಲಕಿಯನ್ನು ಮದುವೆಯಾಗಲಿದ್ದಾರೆ ಎಂದು ಖ್ಯಾತ ಪತ್ರಿಕೆಯೊಂದು ವರದಿ ಮಾಡಿದೆ. ಅಪ್ತಾಪ್ತೆಯನ್ನು ಶೋಯೆಬ್ ಮದುವೆಯಾಗುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿತ್ತು.

ತಮ್ಮ ದೂರದ ಸಂಬಂಧಿಯೊಬ್ಬರ 17 ವರ್ಷದ ರುಬಾಬ್ ಎಂಬ ಬಾಲಕಿಯನ್ನು ಮದುವೆಯಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಖ್ಯಾತ ದೈನಿಕ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು. ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಉಭಯ ಕುಟುಂಬಗಳ ನಡುವೆ ಎಲ್ಲ ರೀತಿಯ ಮಾತುಕತೆ ಮುಕ್ತಾಯವಾಗಿದ್ದು, 'ನಿಖಾ' ದಿನಾಂಕ ಕೂಡ ನಿಗದಿಯಾಗಿದೆ ಎನ್ನಲಾಗಿತ್ತು.

ಹರಿಪುರದಲ್ಲಿ ವಾಸವಾಗಿರುವ ಉದ್ಯಮಿ ಮುಷ್ತಾಖ್ ಖಾನ್ ಅವರು ಹಜ್ ಯಾತ್ರೆಗೆ ತೆರಳಿದ್ದ ವೇಳೆ ಅಖ್ತರ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪರಸ್ಪರ ಮದುವೆ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಪತ್ರಿಕೆ ಹೇಳಿತ್ತು. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು ನಾನು ಅಪ್ರಾಪ್ತ ಹುಡುಗಿಯನ್ನು ಮದುವೆಯಾಗುತ್ತಿಲ್ಲ. ನನ್ನ ಮದುವೆ ಬಗ್ಗೆ ಬಂದಿರುವ ವರದಿಗಳೆಲ್ಲವೂ ಸುಳ್ಳು ಎಂದು ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ಮದುವೆ ದಿನಾಂಕ ಫಿಕ್ಸ್ ಆಗಿದೆ ಎಂದು ವರದಿ

ಮದುವೆ ದಿನಾಂಕ ಫಿಕ್ಸ್ ಆಗಿದೆ ಎಂದು ವರದಿ

ಇದೇ ಜೂನ್ 12ಕ್ಕೆ ಅಖ್ತರ್ ತಮ್ಮ ತವರು ಜಿಲ್ಲೆ ರಾವಲ್ಪಿಂಡಿಗೆ ಆಗಮಿಸಲಿದ್ದು, ಜೂನ್ 3ನೇ ವಾರದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಜೂನ್ 19ರಂದು ಮೆಹಂದಿ ಕಾರ್ಯಕ್ರಮ, ಜೂನ್ 20ರಂದು ರುಖ್ಸಾತಿ ಕಾರ್ಯಕ್ರಮ ಮತ್ತು ರಾವಲ್ಪಿಂಡಿಯ ಹರಿಪುರದಲ್ಲಿರುವ ಬಿಲಾವಲ್ ಹಾಲ್ ನಲ್ಲಿ ಜೂನ್ 22ರಂದು ವಲೀಮಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿತ್ತು.

ಮಾಧ್ಯಮ ವರದಿಗಳ ಬಗ್ಗೆ ಕಿಡಿಕಾರಿದ ಅಖ್ತರ್

ಗಾಳಿಸುದ್ದಿ ಹಬ್ಬುವುದು ಸಹಜ ಆದರೆ, ಈ ರೀತಿ ಸುದ್ದಿ ಹಬ್ಬಿರುವುದು ಬೇಸರ ತಂದಿದೆ ಎಂದಿರುವ ಶೋಯೆಬ್ ಅಖ್ತರ್

ಸಂದೇಶಗಳಿಗೆ ಉತ್ತರಿಸುವುದೇ ಕಾಯಕವಾಗಿದೆ

ಮಾಧ್ಯಮಗಳಲ್ಲಿ ಮದುವೆ ಸುದ್ದಿ ಬಂದ ಮೇಲೆ ಗೆಳೆಯರು, ಆಪ್ತರಿಂದ ಸಂದೇಶಗಳು, ಸಂದೇಹಗಳು ಬಂದಿವೆ, ಸಂದೇಶಗಳಿಗೆ ಉತ್ತರಿಸುವುದೇ ಕಾಯಕವಾಗಿದೆ

ಮದುವೆ ಬಗ್ಗೆ ನಾನು ಸ್ಪಷ್ಟಪಡಿಸುತ್ತಿದ್ದೇನೆ

ಮದುವೆ ಬಗ್ಗೆ ನಾನು ಸ್ಪಷ್ಟಪಡಿಸುತ್ತಿದ್ದೇನೆ ನಾನು 17 ವರ್ಷದ ಯುವತಿಯನ್ನು ಮದುವೆಯಾಗುತ್ತಿಲ್ಲ : ಶೋಯೆಬ್ ಅಖ್ತರ್

ಗಾಳಿಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ

ಗಾಳಿಸುದ್ದಿ ಹಬ್ಬಿಸುವ ಮುನ್ನ ಯೋಚಿಸಿ...ನನ್ನ ಬಗ್ಗೆ ಅಲ್ಲದಿದ್ದರೂ ಆ ಹುಡುಗಿ ಬಗ್ಗೆ ಕನಿಷ್ಠ ಒಳ್ಳೆ ಯೋಚಿಸಬಾರದಿತ್ತೆ

ಟ್ವಿಟ್ಟರ್ ನಲ್ಲಿ ಶೋಯೆಬ್ ಅಖ್ತರ್ ಮದುವೆಯದ್ದೇ ಸುದ್ದಿ

ಟ್ವಿಟ್ಟರ್ ನಲ್ಲಿ ಶೋಯೆಬ್ ಅಖ್ತರ್ ಮದುವೆಯದ್ದೇ ಸುದ್ದಿ

ಟ್ವಿಟ್ಟರ್ ನಲ್ಲಿ ಶೋಯೆಬ್ ಟಾಪ್ ಟ್ರೆಂಡಿಂಗ್

ಟ್ವಿಟ್ಟರ್ ನಲ್ಲಿ #ShoaibAkhtar ಹ್ಯಾಶ್ ಟ್ಯಾಗ್ ಭಾನುವಾರ ಟಾಪ್ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಈ ಬಗ್ಗೆ ಚರ್ಚೆ, ಸ್ಪಷ್ಟನೆ, ಮಾಧ್ಯಮ ವರದಿಗಳ ಲಿಂಕ್, ಜೋಕುಗಳು ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+