ವರ್ಷಕ್ಕೆ ₹66 ಲಕ್ಷ ಆದಾಯ ತರುವ 'ನಿಧಿ' ಕೊಠಡಿಯ ಮನೆ ಮಾರಾಟಕ್ಕೆ; ಬೆಲೆ, ವಿಶೇಷತೆಗಳ ವಿವರ

ವರ್ಷಕ್ಕೆ ಒಂದಲ್ಲ.. ಎರಡಲ್ಲ.. ಬರೋಬ್ಬರಿ 66,00,000 ರೂಪಾಯಿ ಆದಾಯ ತಂಡುಕೊಡುವ ನಿಧಿ ಕೊಠಡಿಯುಳ್ಳ ಸುಂದರ ಮನೆಯನ್ನು ಮಾರಾಟಕ್ಕೆ ಇಡಲಾಗಿದೆ. ಹಾಗಾದ್ರೆ ಇದರ ವಿಶೇಷತೆ ಹಾಗೂ ಬೆಲೆಯ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಮೆರಿಕದ ಇಡಾಹೋ ರಾಜ್ಯದ ಸಲ್ಮಾನ್ ಪ್ರದೇಶದಲ್ಲಿರುವ ವಿಲಿಯಮ್ಸ್ ಸರೋವರದ ತೀರದಲ್ಲಿ ನಿರ್ಮಿಸಲಾದ ಹಡಗಿನ ಆಕಾರ ಹೊಂದಿರುವ ವಿಶಿಷ್ಟ ಹಾಗೂ ಸುಂದರವಾದ 'ಶಿಪ್ ರೆಕ್ ಹೌಸ್' ಮನೆ ಇದೀಗ ಮಾರಾಟಕ್ಕಿದೆ. ಕೇವಲ ವಾಸ ಸ್ಥಳವಾಗಿ ಅಷ್ಟೇ ಅಲ್ಲದೆ, ಒಂದು ಪ್ರಸಿದ್ಧ ಪ್ರವಾಸಿ ತಾಣ ಮತ್ತು ಹೋಮ್‌ಸ್ಟೇ ಆಗಿ ಯಶಸ್ವಿಯಾಗಿ ನಡೆಯುತ್ತಿರುವ ಇದರ ಪ್ರಸ್ತುತ ಬೆಲೆ $799,000 (ಸುಮಾರು 7,66,71,280.95 ಕೋಟಿ ರೂಪಾಯಿ) ಆಗಿದೆ ಎಂದು ತಿಳಿದುಬಂದಿದೆ.

ಸುಮಾರು 1,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಯನ್ನು 1,900ರ ದಶಕದ ಆರಂಭಿಕ ಕಟ್ಟಡವೊಂದನ್ನು ಮರುನಿರ್ಮಾಣ ಮಾಡಿ, ಪೂರ್ಣಪ್ರಮಾಣದ ಹಡಗಿನ ರೂಪದಲ್ಲಿ ನಿರ್ಮಿಸಲಾಗಿದೆ. ಇದು ಮೂರು ಹಂತಗಳ ಡೆಕ್‌ಗಳನ್ನು ಹೊಂದಿದ್ದು, ನೇರವಾಗಿ ಸರೋವರಕ್ಕೆ ಸಂಪರ್ಕ ಕಲ್ಪಿಸುವ ತೇಲುವ ತೆಪ್ಪದ ವ್ಯವಸ್ಥೆ ಇದೆ.

Ship-Shaped House for Sale in Idaho Unique Airbnb Home Listed for 799 000 Earns 80 000 Annually

ಇದರ ವಿಶೇಷತೆ ಏನು?

ಹಡಗಿನ ಕೊಠಡಿಯ ಮಾದರಿಯಲ್ಲೇ ವಿನ್ಯಾಸಗೊಳಿಸಲಾದ ಸುಸಜ್ಜಿತ ಮಲಗುವ ಕೋಣೆ ಮತ್ತು ಬೆಡ್‌ಗಳಿರುವ ವಿಶೇಷ ವಿಭಾಗಗಳಿವೆ. ಈ ಮನೆಯ ಆಕರ್ಷಣೆ ಅಂದರೆ, ಗೋಡೆಯ ಹಿಂದೆ ಇರುವ ರಹಸ್ಯ ಕೊಠಡಿ. ಪ್ರವಾಸಿಗರು ನಿಧಿ ಹುಡುಕಾಟದ ಮ್ಯಾಪ್ ಮತ್ತು ಸುಳಿವುಗಳನ್ನು ಆಧರಿಸಿ ಈ ರಹಸ್ಯ ಬಾಗಿಲನ್ನು ತೆರೆಯಬಹುದು. ಒಳಗೆ ಅಸ್ಥಿಪಂಜರ ಹಾಗೂ ಚಿನ್ನದ ನಾಣ್ಯಗಳ ನಿಧಿ ಪೆಟ್ಟಿಗೆಯನ್ನು ಇಡಲಾಗಿದ್ದು, ಇದು ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

ಪ್ರತಿವರ್ಷದ ಗಳಿಕೆ ಎಷ್ಟು?

ಈ ಮನೆ ಬರಿ ಪ್ರದರ್ಶನದ ವಸ್ತುವಲ್ಲ, ಇದೊಂದು ಆದಾಯ ತರುವ ಆಸ್ತಿಯಾಗಿದೆ. ಎರ್‌ಬಿಎನ್‌ಬಿ ಬಾಡಿಗೆ ಮೂಲಕ ಈ ಮನೆ ಪ್ರತಿವರ್ಷ ಸುಮಾರು $80,000 (ಅಂದಾಜು 66 ಲಕ್ಷ ರೂಪಾಯಿ) ಆದಾಯ ಗಳಿಸಿಕೊಡುತ್ತದೆ. ಈ ಮನೆಗೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಖಾತೆಯು 30,000ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದು, ಹೆಚ್ಚಿನ ಬುಕಿಂಗ್‌ಗಳು ನೇರವಾಗಿ ಈ ಪ್ರಚಾರದ ಮೂಲಕವೇ ಬರುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೋಯ್ಸೆ ಮೂಲದ ಪ್ರಸಿದ್ಧ ಬಿಲ್ಡರ್ ಮತ್ತು ಡಿಸೈನರ್ ಕ್ರಿಸ್ಟಿ ವುಲ್ಫ್ ಅವರು ಈ ಮನೆಯನ್ನು ನಿರ್ಮಾಣ ಮಾಡಿದವರಾಗಿದ್ದಾರೆ. 2011 ರಿಂದಲೂ ವಿಶಿಷ್ಟ ರೀತಿಯಲ್ಲಿ ಪ್ರವಾಸಿ ಮನೆಗಳನ್ನು ಕಟ್ಟುವಲ್ಲಿ ಹೆಸರುವಾಸಿ ಆಗಿರುವ ಕ್ರಿಸ್ಟಿ ಅವರು, ಈ ಹಿಂದೆ ಹವಾಯಿಯಲ್ಲಿ ಟ್ರೀಹೌಸ್, ವಾಷಿಂಗ್ಟನ್‌ನಲ್ಲಿ 'ಹಾಬಿಟ್ ಹೋಮ್' ಮತ್ತು ಐಡಾಹೋದಲ್ಲಿ ವಿಶ್ವಪ್ರಸಿದ್ಧ 'ಬಿಗ್ ಐಡಾಹೋ ಪೊಟೇಟೋ ಹೊಟೇಲ್' ನಿರ್ಮಿಸಿ ಗಮನ ಸೆಳೆದಿದ್ದರು.

ಈ ಮನೆ ನಿರ್ಮಿಸಿದ ಕ್ರಿಸ್ಟಿ ಹೇಳಿದ್ದೇನು?

ಈ ಕುರಿತು ಮಾತನಾಡಿರುವ ಕ್ರಿಸ್ಟಿ ಅವರು, 'ಯಾವುದೇ ಮನೆಯನ್ನು ನಿರ್ಮಾಣ ಮಾಡುವಾಗ ಅದು ಜನರಿಗೆ ಅದ್ಭುತ ಅನುಭವ ನೀಡುವಂತಿರಬೇಕು ಎಂಬುದು ನನ್ನ ಉದ್ದೇಶ. ಹೊಸದಾಗಿ ಈ ಮನೆ ಖರೀದಿಸುವವರು ಕೂಡ ಇದನ್ನು ಬಾಡಿಗೆಗೆ ನೀಡಿ, ನೂರಾರು ಕುಟುಂಬಗಳು ಇಲ್ಲಿ ನೆನಪುಗಳನ್ನು ರೂಪಿಸಿಕೊಳ್ಳಲು ಅವಕಾಶ ನೀಡುತ್ತಾರೆ ಎಂಬ ಭರವಸೆ ನನಗಿದೆ,' ಎಂದು ತಿಳಿಸಿದ್ದಾರೆ.

ಫ್ರಾಂಕ್ ಚರ್ಚ್-ರಿವರ್ ಆಫ್ ನೋ ರಿಟರ್ನ್ ವೈಲ್ಡರ್ನೆಸ್ ನಿಸರ್ಗಧಾಮದ ಹತ್ತಿರದಲ್ಲೇ ಇರುವ ಈ ಮನೆ, ಪ್ರಕೃತಿ ಪ್ರೇಮಿಗಳು ಮತ್ತು ದೋಣಿ ವಿಹಾರ, ಈಜುಕೂಟ ಇಷ್ಟಪಡುವ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಿಶಿಷ್ಟ ಥೀಮ್ ಆಧಾರಿತ ಮನೆಗಳಿಗೆ ಇರುವ ಭಾರಿ ಬೇಡಿಕೆಗೆ ಈ ಹಡಗಿನ ಮನೆ ಸೂಕ್ತ ಉದಾಹರಣೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+