ಅವರನ್ನು ಬಿಟ್ಟು..! ಇವರನ್ನು ಬಿಟ್ಟು..! ಅವರ್ಯಾರು.?
ಕಳೆದ ಶುಕ್ರವಾರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮತದಾನ ನಡೆದಿದ್ದು, ಆ ದಿನ ಸಂಜೆಯೇ ಮತ ಎಣಿಕೆ ಕೂಡ ಶುರುವಾಗಿತ್ತು. ಹೀಗೆ ಚುನಾವಣೆ ಮುಗಿದು, ಮತ ಎಣಿಕೆ ಕೂಡ ಪೂರ್ತಿ ಆಗಿದ್ದರೂ ಪಾಕಿಸ್ತಾನದಲ್ಲಿ ನೆಮ್ಮದಿ ಇಲ್ಲವಾಗಿದೆ. ಇದಕ್ಕೆಲ್ಲಾ ಕಾರಣ ಅಲ್ಲಿನ ರಾಜಕೀಯ ವ್ಯವಸ್ಥೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗಲೇ, ಪಾಕಿಸ್ತಾನದ ಮುಂದಿನ ಪ್ರಧಾನಿ ಬಗ್ಗೆ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ.
ಇಮ್ರಾನ್ ಖಾನ್ ಪಾಕಿಸ್ತಾನ ಸೇನೆಯನ್ನು ಎದುರು ಹಾಕಿಕೊಂಡ ಕಾರಣಕ್ಕೆ ಬೇಕು ಅಂತಾ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗ ಇಮ್ರಾನ್ ಪಕ್ಷವೇ, ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದೆ. ಆದರೂ ಇಮ್ರಾನ್ ಖಾನ್ ಅವರನ್ನು ಪ್ರಧಾನಿಯ ಪಟ್ಟಕ್ಕೆ ಕೂರಲು ಬಿಡದೆ ಆಟ ಆಡಲಾಗುತ್ತಿದೆ, ಇದರ ಹಿಂದೆ ಪಾಕಿಸ್ತಾನ ಸೇನೆ ಕೈವಾಡ ಇದೆ ಎಂಬ ಆರೋಪ ಬಲವಾಗಿದೆ. ಪರಿಸ್ಥಿತಿ ಹೀಗಿದ್ದಾಗ, ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು ಅನ್ನೋ ಪ್ರಶ್ನೆಗೆ ಸ್ಫೋಟಕ ಉತ್ತರ ಸಿಗುತ್ತಿದೆ.

ನವಾಜ್ ತಮ್ಮನಿಗೆ ಪ್ರಧಾನಿ ಪಟ್ಟ?
ಹೌದು, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಪಾಕಿಸ್ತಾನ ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಇತ್ತಿಚೆಗೆ ನಡೆದಿದ್ದ ಪಾಕ್ ಸಂಸತ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಹೀಗಾಗಿ ನವಾಜ್ ಷರೀಫ್‌ಗೆ ಮತ್ತೊಮ್ಮೆ ಪ್ರಧಾನಿ ಪಟ್ಟ ಗ್ಯಾರಂಟಿ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಆಗಿರುವುದೇ ಬೇರೆ, ಇದೀಗ ನವಾಜ್ ತಮ್ಮನಿಗೆ ಪಟ್ಟ ಕಟ್ಟಲು ಪ್ರಯತ್ನ ಸಾಗಿದೆ ಎನ್ನಲಾಗುತ್ತಿದೆ. ಹೀಗೆ ನವಾಜ್ ತಮ್ಮನಿಗೆ ಮತ್ತೊಮ್ಮೆ ಪಾಕಿಸ್ತಾನ ಪ್ರಧಾನಿ ಪಟ್ಟ ಕಟ್ಟಲು ಸಿದ್ಧತೆಗಳು ಸಾಗಿದ್ದು, ಇನ್ನೇನು ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಸುದ್ದಿ ಪಾಕಿಸ್ತಾನದಲ್ಲಿ ಹಬ್ಬಿದೆ.
ಪಾಕಿಸ್ತಾನದಲ್ಲಿ ಭಾರಿ ಹಿಂಸಾಚಾರ
ಅಚ್ಚರಿ ಬೆಳವಣಿಗೆಯಲ್ಲಿ ಮೂರು ಬಾರಿ ಪ್ರಧಾನಿ, ನವಾಜ್ ಷರೀಫ್ ಅವರನ್ನು ಬಿಟ್ಟು ಅವರ ಸಹೋದರ ಶೆಹಬಾಜ್‌ಗೆ ಪಟ್ಟ ಕಟ್ಟುವ ಪ್ರಯತ್ನ ಸಾಗಿದೆ. ಈಗ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದಿಂದ ಪ್ರಧಾನಿ ಪಟ್ಟಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಶೆಹಬಾಜ್ ಷರೀಫ್. ಈ ಮೂಲಕ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು, ಈ ಬಾರಿ ಪಾಕಿಸ್ತಾನ ಎಲೆಕ್ಷನ್ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದರೂ ಉಪಯೋಗ ಇಲ್ಲ ಎನ್ನುವಂತಾಗಿದೆ. ಇದು ಸಾಲದು ಎನ್ನುವಂತೆ ಪಾಕ್‌ನಲ್ಲಿ ಇದೀಗ ಪಾಕಿಸ್ತಾನದಲ್ಲಿ ಹಿಂಸೆ ಕೂಡ ಜೋರಾಗಿದೆ.

ಜೈಲಿನಲ್ಲೇ ನರಳುತ್ತಿರುವ ಇಮ್ರಾನ್ ಖಾನ್
ಇದು ಪಾಕಿಸ್ತಾನದ ಹೊರಗೆ ನಡೆಯುತ್ತಿರುವ ಘಟನೆಯಾದರೆ, ಇನ್ನು ಪಾಕಿಸ್ತಾನದ ಜೈಲು ಊಟ ತಿನ್ನುತ್ತಾ ಇಮ್ರಾನ್ ಖಾನ್ ನರಳುವಂತಾಗಿದೆ. ಅದ್ರಲ್ಲೂ ತಮ್ಮನ್ನು ಬೆಂಬಲಿಸುವ ಅಭ್ಯರ್ಥಿಗಳು ಹೆಚ್ಚಾಗಿ ಇದ್ದರೂ ಇಮ್ರಾನ್ ಖಾನ್ ಇದೀಗ ಸರ್ಕಾರ ರಚಿಸೋಕೆ ಸಾಧ್ಯವೇ ಆಗುತ್ತಿಲ್ಲ. ಪಾಕಿಸ್ತಾನದ ಮತದಾರ ಇಮ್ರಾನ್ ಖಾನ್‌ಗೆ ಬೆಂಬಲ ಸೂಚಿಸಿದ್ದರೂ ಅದೆಲ್ಲಾ ಗಾಳಿಯಲ್ಲಿ ಗುಂಡು ಹೊಡೆದಂತಾಗಿದೆ.












Click it and Unblock the Notifications