ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಸುರಿಮಳೆ

ವಾಷಿಂಗ್ಟನ್ ಡಿಸಿ, ಡಿಸೆಂಬರ್ 13 : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ ಆರೋಪ ಹೊರಿಸಲಾಗಿದ್ದು, ಜನಪ್ರತಿನಿಧಿಗಳ ಸಮಿತಿಯಿಂದ ತನಿಖೆ ನಡೆಸಬೇಕೆಂದು 100ಕ್ಕೂ ಹೆಚ್ಚು ಡೆಮಾಕ್ರೆಟಿಕ್ ಶಾಸಕರು ಆಗ್ರಹಿಸಿದ್ದಾರೆ.

"ಲೈಂಗಿಕ ದೌರ್ಜನ್ಯ ಆರೋಪದ ಹಿಂದಿನ ಸತ್ಯವೇನೆಂಬುದನ್ನು ಬಹಿರಂಗ ಪಡಿಸಲು ಇದು ಸರಿಯಾದ ಸಮಯ" ಎಂದು ಫ್ಲೋರಿಡಾದ ಶಾಸಕಿ ಮತ್ತು ಡೆಮಾಕ್ರೆಟಿಕ್ ಪಕ್ಷದ ಕಾರ್ಯನಿರತ ಮಹಿಳಾ ತಂಡದ ಅಧ್ಯಕ್ಷೆಯಾಗಿರುವ ಲೂಯಿಸ್ ಫ್ರಾಂಕೆನ್ ಅವರು ಹೇಳಿದ್ದಾರೆ.

ಬೇಡವಾದ ಮುತ್ತು, ಅನವಶ್ಯಕ ಸ್ಪರ್ಶ, ಬಲವಂತವಾಗಿ ತಬ್ಬಿಕೊಳ್ಳುವುದು ಮುಂತಾದ ಚೇಷ್ಟೆಗಳಿಂದ ಡೊನಾಲ್ಡ್ ಟ್ರಂಪ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸುಮಾರು 17 ಮಹಿಳಾಮಣಿಗಳು ಆರೋಪಿಸಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಡೆಮಾಕ್ರೆಟಿಕ್ ವಿಮೆನ್ಸ್ ವರ್ಕಿಂಗ್ ಗ್ರೂಪ್ ಪತ್ರ ಬರೆದಿದೆ.

ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲೈಂಗಿಕ ಚೇಷ್ಟೆಗಳು ನೂರು ದಾಟಿವೆ. ಇನ್ನೂ ಹೆಚ್ಚುತ್ತಲೇ ಇವೆ. #MeToo ಚಳವಳಿ ಆರಂಭವಾಗಿದೆ ಎಂದು ಫ್ರಾಂಕೆನ್ ಆರೋಪಿಸಿದರು. #MeToo ಚಳವಳಿಯ ಮೂಲಕ ನೂರಾರು ಮಹಿಳೆಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದಿದ್ದಾರೆ.

ಟ್ರಂಪ್ ವಿರುದ್ಧ ಕ್ರಮ ಜರುಗಿಸಲೇಬೇಕು

ಟ್ರಂಪ್ ವಿರುದ್ಧ ಕ್ರಮ ಜರುಗಿಸಲೇಬೇಕು

ಹಾಲಿವುಡ್ ನಿರ್ಮಾಪಕನೇ ಆಗಿರಲಿ, ಹೋಟೆಲಿನ ನಳಮಹಾಶಯನೇ ಆಗಿರಲಿ, ಸದನದ ಸದಸ್ಯನೇ ಆಗಿರಲಿ ಅಥವಾ ಅಮೆರಿಕದ ಅಧ್ಯಕ್ಷನೇ ಆಗಿರಲಿ, ಲೈಂಗಿಕ ದೌರ್ಜನ್ಯ ಯಾರೇ ಎಸಗಲಿ ಅದನ್ನು ಸಹಿಸಲು ಸಾಧ್ಯವೇ ಇಲ್ಲ. ಅಂಥವರ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾಯ್ಯಾವ ಮಹಿಳೆಯರು ಆರೋಪಿಸಿದ್ದಾರೆ?

ಯಾಯ್ಯಾವ ಮಹಿಳೆಯರು ಆರೋಪಿಸಿದ್ದಾರೆ?

ಈಗಾಗಲೆ, ಪತ್ರಕರ್ತೆ ನಟಾಶಾ ಸ್ಟಾಯ್ನಾಫ್, ರಿಸೆಪ್ಶನಿಸ್ಟ್ ರಾಚೆಲ್ ಕ್ರೂಕ್ಸ್, ಕ್ಯಾಥಿ ಹೆಲ್ಲರ್, ಕ್ರಿಸ್ಟಿನ್ ಆಂಡರ್ಸನ್, ಸಮ್ಮರ್ ಜೆರ್ವೋಸ್, ಮಿಂಡಿ ಮ್ಯಾಕ್ ಗಿಲಿವ್ರೆ, ಜಿಲ್ ಹರಾತ್, ಜೆಸ್ಸಿಕಾ ಲೀಡ್ಸ್, ಕರೀನಾ ವರ್ಜೀನಿಯಾ, ಟೆಂಪಲ್ ಟಗ್ಗಾರ್ಟ್ ಮ್ಯಾಕ್ ಡೊವೆಲ್, ಜೆನ್ನಿಫರ್ ಮರ್ಫಿ ಮುಂತಾದವರು ಆರೋಪಗಳ ಸುರಿಮಳೆ ಎರಚಿದ್ದಾರೆ.

ಚುಂಬನಕ್ಕೀಡಾದ ಮಹಿಳೆಯರೇ ಹೆಚ್ಚು

ಚುಂಬನಕ್ಕೀಡಾದ ಮಹಿಳೆಯರೇ ಹೆಚ್ಚು

ಈ ಆರೋಪಗಳಲ್ಲಿ ಹಲವಾರು ದಶಕಗಳ ಹಿಂದೆಯೇ ನಡೆದಿವೆ. ಹೆಚ್ಚಿನವರು ತಮ್ಮ ಅನುಮತಿಯಿಲ್ಲದೆ, ಬಲವಂತವಾಗಿ ತಮ್ಮ ತುಟಿಗೆ ಡೊನಾಲ್ಡ್ ಟ್ರಂಪ್ ಚುಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು ತಮ್ಮ ಸ್ಕರ್ಟ್ ಕೆಳಗೆ ಕೂಡ ಟ್ರಂಪ್ ಕೈಹಾಕಿ ಅಶ್ಲೀಲವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಆರೋಪಗಳನ್ನೆಲ್ಲ ತಳ್ಳಿಹಾಕಿದ ಟ್ರಂಪ್

ಆರೋಪಗಳನ್ನೆಲ್ಲ ತಳ್ಳಿಹಾಕಿದ ಟ್ರಂಪ್

ಈ ಆರೋಪಗಳನ್ನೆಲ್ಲ ಟ್ರಂಪ್ ತಳ್ಳಿಹಾಕಿದ್ದಾರೆ. ಚುನಾವಣೆಯ ವೇಳೆ ರಿಪಬ್ಲಿಕನ್ಸ್ ರಷ್ಯಾ ದೇಶದೊಡನೆ ಕೈಜೋಡಿಸಿದೆ ಎಂದು ಸಾಬೀತುಪಡಿಸಲು ಕೋಟ್ಯಂತರ ದುಡ್ಡನ್ನು ದುಂದು ಮಾಡಿದರೂ, ಸಾಬೀತು ಮಾಡಲಾಗಿಲ್ಲ, ಅಂಥವರು ಈಗ ಇಂಥ ಸುಳ್ಳುನುಸುಳ್ಳು ಆರೋಪಗಳ ಹಿಂದೆ ಬಿದ್ದಿದ್ದಾರೆ. ಈ ಯಾವ ಮಹಿಳೆಯರನ್ನೂ ನಾನು ಭೇಟಿ ಆಗಿಯೇ ಇಲ್ಲ ಎಂದು ಟ್ರಂಪ್ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಟ್ರಂಪ್ ಹೇಳುವುದನ್ನು ಹೇಗೆ ನಂಬುವುದು?

ಟ್ರಂಪ್ ಹೇಳುವುದನ್ನು ಹೇಗೆ ನಂಬುವುದು?

ಇಷ್ಟೆಲ್ಲ ಮಹಿಳೆಯರು ತಮಗೆ ಟ್ರಂಪ್ ಅವರಿಂದ ಕಿರುಕುಳವಾಗಿದೆ ಎಂದು ಆರೋಪಿಸುತ್ತಿರುವಾಗ, ಈ ಮಹಿಳೆಯರನ್ನು ನಾನು ಭೇಟಿಯೇ ಆಗಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳುವುದನ್ನು ಹೇಗೆ ನಂಬುವುದು? ಎಂದು ಅರವತ್ತಾರು ಶಾಸಕಿಯರಿರುವ ಡೆಮಾಕ್ರೆಟಿಕ್ ಪಕ್ಷದ ಕಾರ್ಯನಿರತ ಮಹಿಳಾ ಮಂಡಳಿ ತಿರುಗಿಬಿದ್ದಿದೆ.

ಗೋಡೆಗೊತ್ತಿ ತುಟಿಗೆ ಮುತ್ತಿಟ್ಟ ಟ್ರಂಪ್

ಗೋಡೆಗೊತ್ತಿ ತುಟಿಗೆ ಮುತ್ತಿಟ್ಟ ಟ್ರಂಪ್

ಆರೋಪ ಮಾಡಿದವರಲ್ಲಿ, ಪತ್ರಕರ್ತೆಯಾಗಿದ್ದ ನಟಾಶಾ ಸ್ಟಾಯ್ನಾಫ್ ಎಂಬುವವರು, ಸಂದರ್ಶನದ ಬಳಿಕ ಕೋಣೆಯೊಂದಕ್ಕೆ ತಮ್ಮನ್ನು ಕರೆದುಕೊಂಡು ಹೋದ ಡೊನಾಲ್ಡ್ ಟ್ರಂಪ್, ತಮ್ಮನ್ನು ಗೋಡೆಗೊತ್ತಿ, ತುಟಿಗೆ ಮುತ್ತು ಕೊಟ್ಟಿದ್ದಲ್ಲದೆ, ತಮ್ಮ ನಾಲಿಗೆಯನ್ನು ನನ್ನ ಬಾಯಿಯೊಳಗೆ ಹಾಕಿ ಅಸಹ್ಯ ಮೆರೆದರು ಎಂದು ವಿವರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ರಾಜೀನಾಮೆ ನೀಡಲೇಬೇಕು

ಅಮೆರಿಕದ ಅಧ್ಯಕ್ಷ ರಾಜೀನಾಮೆ ನೀಡಲೇಬೇಕು

ಅಧ್ಯಕ್ಷ ರಾಜೀನಾಮೆ ನೀಡಲೇಬೇಕು. ಅವರು ಈ ಆರೋಪಗಳನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಸದನದಲ್ಲಿ ಟ್ರಂಪ್ ವಿರುದ್ಧ ತನಿಖೆ ನಡೆಯಲೇಬೇಕು ಎಂದು ಕರ್ಸ್ಟನ್ ಗಿಲ್ಲಿಬ್ರಾಂಡ್ ಎಂಬುವವರು ಆಗ್ರಹಿಸಿದ್ದಾರೆ. ಈ ಕುರಿತು ಟ್ವಿಟ್ಟರಿನಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್ ರಾಜೀನಾಮೆ ನೀಡಬೇಕಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+