ಇಸ್ರೇಲ್ & ಇರಾನ್ ಯುದ್ಧದ ನಡುವೆ ಪ್ರವಾಸಿಗರಿಗೆ ಮಹತ್ವದ ಸಂದೇಶ! Israel And Iran
ಇರಾನ್ & ಇಸ್ರೇಲ್ ಬಡಿದಾಟ ಜೋರಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಅಂತಾ ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಯಾಕಂದ್ರೆ ಇರಾನ್ & ಇಸ್ರೇಲ್ ಎರಡೂ ಸೇನೆಗಳ ಬಳಿ ಭಾರಿ ಭರ್ಜರಿ ಅಸ್ತ್ರ, ವೆಪನ್ಸ್ ಇದ್ದು ಯಾವುದೇ ಕ್ಷಣದಲ್ಲಿ ಘೋರ ದುರಂತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲೇ, ಇಸ್ರೇಲ್ & ಇರಾನ್ ಯುದ್ಧದ ನಡುವೆ ಪ್ರವಾಸಿಗರಿಗೆ ಮಹತ್ವದ ಸಂದೇಶ ರವಾನೆ ಆಗಿದೆ.
ನೋಡ ನೋಡುತ್ತಲೇ ಯುದ್ಧದ ರೂಪ ಪಡೆದಿರುವ ಇರಾನ್ & ಇಸ್ರೇಲ್ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದ್ದು, ಇಬ್ಬರ ಈ ತಿಕ್ಕಾಟದಲ್ಲಿ ಕೋಟಿ ಕೋಟಿ ಜೀವಗಳು ಬಲಿಯಾಗುವ ಭಯ ಕೂಡ ಕಾಡುತ್ತಿದೆ. ಇಸ್ರೇಲ್ & ಇರಾನ್ ಯುದ್ಧದ ತಿರುವು ನೋಡುತ್ತಿದ್ದರೆ 2ನೇ ಮಹಾಯುದ್ಧದ ನಂತರ ಮತ್ತೊಮ್ಮೆ ಪರಮಾಣು ಬಾಂಬ್ ಬಳಕೆ ಆಗುವ ಭಯ ಕೂಡ ಆವರಿಸಿದೆ. ಇದೇ ಕಾರಣಕ್ಕೆ ಇದೀಗ ಹಲವು ದೇಶಗಳು ಇಸ್ರೇಲ್ & ಇರಾನ್ ಕಡೆಗೆ ಹೋಗದಂತೆ ತಮ್ಮ ತಮ್ಮ ದೇಶಗಳ ಪ್ರವಾಸಿಗರಿಗೆ ಸೂಚನೆ ನೀಡಿವೆ.

ಪ್ರವಾಸಿಗರೇ ಗಮನಿಸಿ, ಇಲ್ಲಿದೆ ಮಹತ್ವದ ಸುದ್ದಿ!
ಇಸ್ರೇಲ್ & ಇರಾನ್ ಬಡಿದಾಟ ನೋಡುತ್ತಿದ್ದರೆ ಸದ್ಯಕ್ಕೆ ಇಬ್ಬರ ತಿಕ್ಕಾಟ ನಿಲ್ಲುವ ಯಾವುದೇ ಲಕ್ಷಣ ಕೂಡ ಕಾಣುತ್ತಿಲ್ಲ. ಯಾಕಂದ್ರೆ ಅಮೆರಿಕ & ಇರಾನ್ ನಡುವೆ ಅರ್ಧ ಶತಮಾನದಿಂದ ಫೈಟಿಂಗ್ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ & ಇಸ್ರೇಲ್ ದೇಶಕ್ಕೆ ಇರುವ ಏಕೈಕ ದೊಡ್ಡ ಶತ್ರು ರಾಷ್ಟ್ರ ಅಂದ್ರೆ ಅದು ಇರಾನ್. ಹೀಗಾಗಿಯೇ, ಪದೇ ಪದೇ ಇರಾನ್ ಜೊತೆಗೆ ಅಮೆರಿಕ & ಸ್ನೇಹಿತರ ಬಡಿದಾಟ ನಡೆಯುತ್ತಲೇ ಇರುತ್ತದೆ. ಇಂತಹ ಸಮಯಲ್ಲೇ ಇಸ್ರೇಲ್ & ಇರಾನ್ ನೇರ ಯುದ್ಧವನ್ನೂ ಆರಂಭ ಮಾಡಿದ್ದು ಭಯ ಹೆಚ್ಚು ಮಾಡಿದೆ. ಅಲ್ಲದೆ ಇದೇ ಕಾರಣಕ್ಕೆ ಈಗ ಹಲವು ದೇಶಗಳು ಮಹತ್ವದ ಸೂಚನೆಯನ್ನ ನೀಡಿವೆ.












Click it and Unblock the Notifications