• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಬಿಯಾದ ಭಾರತೀಯರ ಅಪಹರಣ, ಉತ್ತರ ಪ್ರದೇಶದಲ್ಲಿ ದೂರು

|

ಲಕ್ನೋ/ತ್ರಿಪೋಲಿ, ಅ.4: ಯುದ್ಧಪೀಡಿತ ರಾಷ್ಟ್ರ ಲಿಬಿಯಾದಲ್ಲಿ ಭಾರತೀಯ ಮೂಲದ ಏಳು ಮಂದಿ ಅಪಹರಣವಾಗಿದೆ. ಈ ಅಪಹರಣ ಕುರಿತಂತೆ ಉತ್ತರ ಪ್ರದೇಶದ ಕುಶಿನಗರ್ ಎಂಬಲ್ಲಿ ದೂರು ದಾಖಲಾಗಿದೆ. ಕಿಡ್ನಾಪ್ ಆದವರ ಪೈಕಿ ಕುಶಿನಗರದ ನಿವಾಸಿಯಿದ್ದು, ಅವರ ದೆಹಲಿಯಲ್ಲಿರುವ ಕಸಿನ್ ಆನ್ ಲೈನ್ ಮೂಲಕ ದೂರು ದಾಖಲಾಗಿಸಿದ್ದಾರೆ.

ಲಿಬಿಯಾದಲ್ಲಿ ಸ್ಥಳೀಯ ಬಂಡಾಯಕೋರರ ಗುಂಪೊಂದು ಭಾರತೀಯ ಮೂಲದ 7 ಜನರನ್ನು ಅಪಹರಿಸಿದೆ. ಅವರನ್ನು ಬಿಡುಗಡೆ ಮಾಡಬೇಕಾದರೆ 20 ಸಾವಿರ ಡಾಲರ್‌ಗೆ ನೀಡುವಂತೆ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಉಗ್ರರಿಂದ ಬಚಾವಾದ ಶಿಕ್ಷಕ ವಿಜಯ್ ಹೇಳಿದ ಕಿಡ್ನಾಪ್ ಕಥೆ

ಅಪಹರಣವಾದವರನ್ನು ಬಿಹಾರ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಮಹಾರಾಜ ಗಂಜ್, ಕುಶಿನಗರ , ದಿಯೋರಿಯಾ, ಗುಜರಾತಿನ ಅಮ್ರೇಲಿ ನಿವಾಸಿಗಳು ಎಂದು ಗುರುತಿಸಲಾಗಿದೆ.

ಗಡಾಫಿ ಯುಗ ಅಂತ್ಯ, ಸೆಕ್ಸ್ ಸೀಕ್ರೇಟ್ಸ್ ಜೀವಂತ

ಈ ಎಲ್ಲಾ 7 ಭಾರತೀಯರ ವೀಸಾ ಅವಧಿ ಕಳೆದ ತಿಂಗಳೇ ಮುಗಿದಿದೆ. ಭಾರತಕ್ಕೆ ವಾಪಸ್ಸಾಗಿರಲಿಲ್ಲ, ಈ ನಡುವೆ ಕಿಡ್ನಾಪ್ ಆಗಿದೆ. ನಮ್ಮವರನ್ನು ಬಿಡುಗಡೆಗೊಳಿಸಿ ಎಂದು ಭಾರತದ ವಿದೇಶಾಂಗ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಕುಶಿನಗರ ಜಿಲ್ಲೆಯಲ್ಲಿ ದೂರು ದಾಖಲು

ಕುಶಿನಗರ ಜಿಲ್ಲೆಯಲ್ಲಿ ದೂರು ದಾಖಲು

ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಯಾ ಬಸಂತ್ಪುರ ಗ್ರಾಮದ ನಿವಾಸಿ ಮುನ್ನಾ ಚೌಹಾಣ್ ಅವರ ಕಸಿನ್ ಲಲ್ಲನ್ ಪ್ರಸಾದ್ ಎಂಬುವರು ಆನ್ ಲೈನ್ ನಲ್ಲಿ ದೂರು ನೀಡಿದ್ದಾರೆ.

ದೆಹಲಿ ಮೂಲದ ಟ್ರಾವೆಲ್ ಏಜೆನ್ಸಿ ಮೂಲಕ ಪಯಣ

ದೆಹಲಿ ಮೂಲದ ಟ್ರಾವೆಲ್ ಏಜೆನ್ಸಿ ಮೂಲಕ ಪಯಣ

'' ನನ್ನ ಕಸಿನ್ ಮುನ್ನಾ ಸೇರಿದಂತೆ 6 ಮಂದಿ ದೆಹಲಿ ಮೂಲದ ಎನ್‌ಡಿ ಎಂಟರ್‌ಪ್ರೈಸಸ್ ಟ್ರಾವೆಲ್ ಏಜೆನ್ಸಿ ಮೂಲಕ 2019ರ ಸೆಪ್ಟೆಂಬರ್‌ನಲ್ಲಿ ಕಬ್ಬಿಣದ ವೆಲ್ಡರ್ ಆಗಿ ಲಿಬಿಯಾಕ್ಕೆ ತೆರಳಿದ್ದರು. ಎಲ್ಲರ ವೀಸಾ ಅವಧಿ 2020ರ ಸೆಪ್ಟೆಂಬರ್ 13ರಂದು ಮುಕ್ತಾಯಗೊಂಡಿದೆ. ಅವರು ಭಾರತಕ್ಕೆ ಮರಳಲು ಸಿದ್ಧರಾಗಿದ್ದರು. ಈ ನಡುವೆ ಅಪಹರಣವಾಗಿದೆ. ಒತ್ತೆಹಣವನ್ನು ನೀಡಲು ಲಿಬಿಯಾ ಕಂಪನಿ ಸಿದ್ಧವಾಗಿದೆ'' ಎಂದು ಲಲ್ಲನ್ ಪ್ರಸಾದ್ ಹೇಳಿದ್ದಾರೆ.

ಅಪಹರಣವಾದವರ ಹೆಸರು ಮಾಹಿತಿ ಪತ್ತೆ

ಅಪಹರಣವಾದವರ ಹೆಸರು ಮಾಹಿತಿ ಪತ್ತೆ

ಅಪಹರಣವಾದವರನ್ನು ಮಹೇಂದ್ರ ಸಿಂಗ್, ವೆಂಕಟರಾವ್ ಬತ್ಚಲ, ಶಾ ಅಜಯ್, ಉಮೆದಿರಹಿಂಭಾಯಿ ಮುಲ್ತಾನಿ, ದನ್ಯಾ ಬೊಡ್ಡು, ಜೊಗಾರಾವ್ ಬತ್ಚಲ ಎಂದು ಗುರುತಿಸಲಾಗಿದೆ, ಅಪಹರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕುಶಿ ನಗರ್ ಎಸ್ಪಿ ವಿನೋದ್ ಸಿಂಗ್ ಹೇಳಿದ್ದಾರೆ.

ಎಫ್ಐಆರ್ ದಾಖಲಾಗಿಲ್ಲ

ಎಫ್ಐಆರ್ ದಾಖಲಾಗಿಲ್ಲ

ದೆಹಲಿಯ ರಾಜೇಂದ್ರ ನಗರ ಠಾಣೆ ಪೊಲೀಸರು ಆನ್ ಲೈನ್ ದೂರು ಸ್ವೀಕರಿಸಿದ್ದರೂ ಎಫ್ಐಆರ್ ಹಾಕಿಲ್ಲ, ವಿದೇಶಾಂಗ ಸಚಿವಾಲಯದ ಸಲಹೆ ಪಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

2015ರಲ್ಲಿ ಲಿಬಿಯಾದಲ್ಲಿ ಇರಾಕಿ ಉಗ್ರ ಪಡೆ ಐಎಸ್ಐಎಸ್ ನಿಂದ ಅಪಹರಣಕ್ಕೊಳಗಾಗಿದ್ದ ನಾಲ್ವರು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Seven Indians abducted in Libya, Ransom amount 20,000 USD demanded reports Kushinagar resident and kin of one of the abducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X