ಜಾಗತಿಕವಾಗಿ ಸದ್ದು ಮಾಡಿದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ
ಬೆಂಗಳೂರು, ಸೆಪ್ಟೆಂಬರ್ 6: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಕರ್ನಾಟಕ, ಭಾರತ ಮಾತ್ರವಲ್ಲ ಜಾಗತಿಕವಾಗಿಯೂ ಸದ್ದು ಮಾಡಿದೆ. ಪಾಕಿಸ್ತಾನದ 'ಡಾನ್' ಪತ್ರಿಕೆಯಿಂದ ನಿಂದ ಹಿಡಿದು 'ದಿ ಗಾರ್ಡಿಯನ್' ವರೆಗೆ ಹಲವು ಪ್ರಖ್ಯಾತ, ಜಾಗತಿಕ ಸುದ್ದಿ ಸಂಸ್ಥೆಗಳು ಗೌರಿ ಲಂಕೇಶ್ ಹತ್ಯೆಯ ಸುದ್ದಿಯನ್ನು ವರದಿ ಮಾಡಿವೆ.
ಅಮೆರಿಕಾದ ಪ್ರಖ್ಯಾತ ಪತ್ರಿಕೆ 'ದಿ ನ್ಯೂಯಾರ್ಕ್ ಟೈಮ್ಸ್' 'Indian Journalist Gunned Down Outside Her Home' ಹೆಸರಿನಲ್ಲಿ ಗೌರಿ ಲಂಕೇಶ್ ಹತ್ಯೆ ವಾರ್ತೆಯನ್ನು ವರದಿ ಮಾಡಿದೆ.
ಅಮೆರಿಕಾದ ಇನ್ನೊಂದು ಪತ್ರಿಕೆ ವಾಷಿಂಗ್ಟನ್ ಪೋಸ್ಟ್, Indian journalist gunned down outside her home, ಮತ್ತು Indian journalist shot, killed by unknown assailants ಹೆಸರಿನಲ್ಲಿ ನಿನ್ನೆ ಮತ್ತು ಇಂದು ಎರಡು ಸುದ್ದಿಗಳನ್ನು ಕ್ಯಾರಿ ಮಾಡಿದೆ. ವರದಿಯಲ್ಲಿ ಕನ್ನಡದ ಲಂಕೇಶ್ ಪತ್ರಿಕೆಯ ಸಂಪಾದಕಿ ಎಂದು ಉಲ್ಲೇಖಿಸಿರುವ ವಾಷಿಂಗ್ಟನ್ ಪೋಸ್ಟ್, ಎಂಎಂ ಕಲಬುರ್ಗಿ, ಗೋವಿಂದ್ ಪನ್ಸಾರೆ ಮತ್ತು ನರೇಂದ್ರ ಧಾಬೋಲ್ಕರ್ ರಂಥ ವಿಚಾರವಾದಿಗಳ ಹತ್ಯೆಯನ್ನೂ ವರದಿಯಲ್ಲಿ ಪಟ್ಟಿ ಮಾಡಿದೆ.

ಅಲ್ ಜಝೀರಾ
'Grief and outrage as top Indian journalist shot dead' ಹೆಸರಿನಲ್ಲಿ ಗೌರಿ ಲಂಕೇಶ್ ಹತ್ಯೆಯನ್ನು ವರದಿ ಮಾಡಿರುವ ಕತಾರ್ ಮೂಲದ ಸುದ್ದಿ ಸಂಸ್ಥೆ ಅಲ್ ಜಝೀರಾ, ಕೊಲೆ ಒಂದು 'ಘೋರ ಅಪರಾಧ' ಎಂದು ಸಾಮಾಜಿಕ ಜಾಲತಾಣಗಲ್ಲಿ ನಡೆದಿರುವ ಚರ್ಚೆಯನ್ನೂ ಪ್ರಸ್ತಾಪಿಸಿದೆ.

ಜರ್ಮನಿಯ ಡಟ್ಶೆ ವೆಲ್ಲೆ
'Journalist Gauri Lankesh shot dead in India's IT hub Bangalore' ಎಂದು ಜರ್ಮನಿಯ ಸರಕಾರಿ ಸುದ್ದಿ ಸಂಸ್ಥೆ 'ಡಿಡಬ್ಲ್ಯೂ' (ಡಟ್ಶೆ ವೆಲ್ಲೆ) ವರದಿ ಮಾಡಿದೆ. ಭಾರತ ಏಷ್ಯಾದಲ್ಲೇ ಪತ್ರಕರ್ತರಿಗೆ ಅತ್ಯಂತ ಹೆಚ್ಚು ಬೆದರಿಕೆ ಇರುವ ದೇಶ ಎಂಬ 'ರಿಪೋರ್ಟರ್ ವಿತೌಟ್ ಬಾರ್ಡರ್' ವರದಿಯನ್ನು ತನ್ನ ವರದಿಯಲ್ಲಿ ಅದು ಪ್ರಸ್ತಾಪಿಸಿದೆ.

ಬಿಬಿಸಿ
Gauri Lankesh: Indian journalist shot dead in Bangalore ಎಂಬ ವರದಿಯಲ್ಲಿ ಗೌರಿ ಲಂಕೇಶ್ ಹತ್ಯೆಯನ್ನು ಪ್ರಕಟಿಸಿರುವ ಬ್ರಿಟನ್ ಸುದ್ದಿ ಸಂಸ್ಥೆ 'ಬಿಬಿಸಿ', Gauri Lankesh: Murdered Indian journalist in her own words ಎಂಬ ವಿಶೇಷ ವರದಿಯನ್ನೂ ಮತ್ತು ಸೌತಿಕ್ ಬಿಸ್ವಾಸ್ ವರೆದಿರುವ ಶ್ರದ್ಧಾಂಜಲಿ 'Obituary: The fearless journalist-activist Gauri Lankesh' ಯನ್ನು ಪ್ರಕಟಿಸಿದೆ.

ಡೈಲಿ ಮೇಲ್
Indian journalist gunned down outside her home, Outspoken journalist's murder sparks outcry in India ಎಂಬ ಎರಡು ವರದಿಗಳನ್ನು ಗೌರಿ ಲಂಕೇಶ್ ಹತ್ಯೆ ಕುರಿತಂತೆ ಬ್ರಿಟನಿನ ಇನ್ನೊಂದು ಪ್ರಖ್ಯಾತ ಮಾಧ್ಯಮ ಸಂಸ್ಥೆ ಡೈಲಿ ಮೇಲ್ ವರದಿ ಮಾಡಿದೆ.

ದಿ ಗಾರ್ಡಿಯನ್
ಇನ್ನು ಆಗಾಗ ತನಿಖಾ ಪತ್ರಿಕೋದ್ಯಮದ ಮೂಲಕ ಸದ್ದು ಮಾಡುವ ಬ್ರಿಟನ್ನಿನ ಜಗದ್ವಿಖ್ಯಾತ ಮಾಧ್ಯಮ ಸಂಸ್ಥೆ 'ದಿ ಗಾರ್ಡಿಯನ್' 'Indian journalist critical of Hindu extremists is shot dead in Bangalore' ಎನ್ನುವ ವರದಿಯನ್ನು ಪ್ರಕಟಿಸಿದ್ದು ಹಿಂದು ತೀವ್ರವಾದಿಗಳ ವಿಮರ್ಶಕಿ ಎಂಬುದನ್ನು ತನ್ನ ತಲೆಬರಹದಲ್ಲೇ ಉಲ್ಲೇಖಿಸಿದೆ.

ಪಾಕಿಸ್ತಾನದ 'ಡಾನ್'
ಇನ್ನು ಮಹಮ್ಮದ್ ಅಲಿ ಜಿನ್ಹಾ ಹುಟ್ಟು ಹಾಕಿದ ಪಾಕಿಸ್ತಾನದ ಖ್ಯಾತ ಪತ್ರಿಕ್ 'ಡಾನ್' 'Indian journalist, critic of Hindutva, shot dead' ಎನ್ನುವ ತಲೆ ಬರಹದಲ್ಲಿ ಗೌರಿ ಲಂಕೇಶ್ ಸಾವಿನ ಸುದ್ದಿಯನ್ನು ಪ್ರಸಾರ ಮಾಡಿದೆ.

ಚಾನಲ್ ನ್ಯೂಸ್ ಏಷ್ಯಾ
ಚಾನಲ್ ನ್ಯೂಸ್ ಏಷ್ಯಾ Indian journalist shot dead at her residence ಎನ್ನುವ ಸಾವಿನ ಸುದ್ದಿಯ ವರದಿಯನ್ನು, ಸಾವಿನ ಬೆನ್ನಿಗೆ ಆರಂಭವಾಗಿರುವ ಪ್ರತಿಭಟನೆಯನ್ನು Outspoken journalist's murder sparks outcry in India ಎನ್ನುವ ಹೆಡ್ಲೈನ್ ನೀಡಿ ಪ್ರಕಟಿಸಿದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications