Donald Trump: ಗಾಜಾ ಪಟ್ಟಿ ವಶಕ್ಕೆ ಟ್ರಂಪ್ ಮುಂದಾದರೆ ಕಾದಿದೆ ಕಂಟಕ

ಗಾಜಾ ಪಟ್ಟಿ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಎಲ್ಲಾ ರೀತಿಯ ಪ್ರಯತ್ನ ಮಾಡಿ, ಹೊಸ ಸ್ಕೆಚ್ ಹಾಕಿದೆ. ಆದರೆ ಈ ರೀತಿ ಟ್ರಂಪ್ ಆಡಳಿತ ಗಾಜಾ ಪಟ್ಟಿ ವಿಚಾರದಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ ಎಂಬ ಎಚ್ಚರಿಕೆಯನ್ನು ಪದೇ ಪದೇ ನೀಡಲಾಗುತ್ತಿದೆ. ಇಷ್ಟಾದರೂ ತಮ್ಮ ನಿಲುವು ಬದಲಾಗಿಲ್ಲ ಎನ್ನುವಂತೆ ಟ್ರಂಪ್ ವಾರ್ನಿಂಗ್ ಕೊಡುತ್ತಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವ ಆತಂಕ ಕಾಡುತ್ತಿದೆ.

ಅರಬ್ ಹಿರಿಯ ಅಧಿಕಾರಿಗಳು ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ಈ ರೀತಿಯಾಗಿ ಡೊನಾಲ್ಡ್ ಟ್ರಂಪ್ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸಲು ಮುಂದಾದರೆ ಭವಿಷ್ಯದಲ್ಲಿ ಮಧ್ಯಪ್ರಾಚ್ಯ ಮತ್ತಷ್ಟು ಸೂಕ್ಷ್ಮ ಪರಿಸ್ಥಿತಿಗೆ ತಲುಪಲಿದೆ ಎಂದು ಎಚ್ಚರಿಸಲಾಗಿದೆ. ಈಗಾಗಲೇ ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದ ಬಹುತೇಕ ಎಲ್ಲಾ ದೇಶಗಳು ಯುದ್ಧ ಸಾರಿವೆ. ಹೀಗಿದ್ದಾಗ ಅಮೆರಿಕ ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರುವ ಸಾಧ್ಯತೆ ದಟ್ಟವಾಗಿದೆ.

Senior Arab Officials Warn Trump s Gaza Plan Could Escalate Tensions

ಇಸ್ರೇಲ್ ಕೈಯಿಂದ ಅಮೆರಿಕ ಕೈಗೆ ಗಾಜಾ?

ಈಗಾಗಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ಸಂಪೂರ್ಣ ಹಿಡಿತ ಸಾಧಿಸಿದೆ. ಆದರೆ ಕದನ ವಿರಾಮ ಒಪ್ಪಂದದ ಪ್ರಕಾರ ಹಮಾಸ್ ನಾಯಕರು ಷರತ್ತು ಒಂದನ್ನ ಇಟ್ಟಿದ್ದಾರೆ. ಒಪ್ಪಂದ ಹೇಳುವಂತೆ ಇಸ್ರೇಲ್ ಸೇನೆ ಗಾಜಾ ಬಿಟ್ಟು ಹೋಗಬೇಕಿದೆ. ಆದರೆ ಇದೇ ಸಮಯದಲ್ಲಿ ಟ್ರಂಪ್ ಹೊಸ ವರಸೆ ಶುರು ಮಾಡಿದ್ದು, ಇಸ್ರೇಲ್ ನೇರವಾಗಿ ನಮ್ಮ ಕೈಗೆ ಗಾಜಾ ಪಟ್ಟಿ ಒಪ್ಪಿಸಲಿ ಅಂತಾ ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದು ಮಧ್ಯಪ್ರಾಚ್ಯ ದೇಶಗಳ ನೆಮ್ಮದಿ ಕೆಡಿಸುತ್ತಿದೆ.

ಇರಾನ್ ವಿರುದ್ಧ ಇಸ್ರೇಲ್ ದಾಳಿ?

ಒಂದು ಕಡೆ ಗಾಜಾ ಪಟ್ಟಿ ವಿಚಾರದಲ್ಲಿ ಕಿರಿಕ್ ಆಗುವಾಗಲೇ, ಇನ್ನೊಂದು ಕಡೆ ಇರಾನ್‌ನ ಮೇಲೆ ಕೂಡ ಇಸ್ರೇಲ್ ದಾಳಿ ಮಾಡಲಿದೆ ಎಂಬ ಸುದ್ದಿ ಇದೀಗ ಸಂಚಲನ ಸೃಷ್ಟಿಮಾಡಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ತನಗೆ ಇರುವ ಒಬ್ಬೊಬ್ಬರೇ ಶತ್ರುಗಳ ಕಥೆಯನ್ನು ಮುಗಿಸುತ್ತಿರುವ ಇಸ್ರೇಲ್, ಈಗಾಗಲೇ ಸಿರಿಯಾ & ಗಾಜಾ ಸೇರಿದಂತೆ ಲೆಬನಾನ್ ಮೇಲೆ ಕೂಡ ಹಿಡಿತವನ್ನು ಸಾಧಿಸಿದೆ.

ಇಂತಹ ಸಮಯದಲ್ಲೇ ಇಸ್ರೇಲ್ ಮತ್ತೊಂದು ಯುದ್ಧಕ್ಕೂ ಸನ್ನದ್ಧವಾಗಿದೆ ಎಂಬ ಸ್ಫೋಟಕ ಸಂಗತಿ ಬಯಲಾಗಿದೆ. ಇರಾನ್ ಎಂಬ ನ್ಯೂಕ್ಲಿಯರ್ ಪವರ್ ದೇಶದ ವಿರುದ್ಧವೇ ಡೆಡ್ಲಿ ದಾಳಿಗೆ ಸಿದ್ಧವಾಗಿದೆಯಂತೆ ಇಸ್ರೇಲ್ ಸೇನೆ. ಈ ಬಗ್ಗೆ ಅಮೆರಿಕದ ಗುಪ್ತ ಮಾಹಿತಿ ಆಧರಿಸಿ ವರದಿಯು ಪ್ರಕಟವಾಗಿದ್ದು, ಮಧ್ಯಪ್ರಾಚ್ಯ ಭಾಗದ ಭವಿಷ್ಯದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+