Vladimir Putin: ಪುಟಿನ್ ಹತ್ಯೆಗೆ ಸ್ಕೆಚ್ ಆರೋಪ, ರಷ್ಯಾದ ರಾಜಧಾನಿಯಲ್ಲಿ ಹೈಅಲರ್ಟ್
ರಷ್ಯಾ ಈಗ ಬೂದಿ ಮುಚ್ಚಿದ ಕೆಂಡವಾಗಿದ್ದು, ಒಂದು ಕಡೆ ಉಕ್ರೇನ್ ವಿರುದ್ಧ ಯುದ್ಧವು ನಡೆಯುವ ಸಮಯದಲ್ಲೇ ಇನ್ನೊಂದು ಕಡೆ ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೀವ ಕೂಡ ಆಪತ್ತಿಗೆ ಸಿಲುಕಿದ್ದು, ಇತ್ತೀಚೆಗೆ ವ್ಲಾದಿಮಿರ್ ಪುಟಿನ್ ಅವರ ಬೆಂಗಾವಲು ಕಾರು ಸ್ಫೋಟದ ಆರೋಪ ಕೇಳಿ ಬಂದಿತ್ತು. ಈ ಘಟನೆ ಬಳಿಕ ರಷ್ಯಾದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ? ಬನ್ನಿ ತಿಳಿಯೋಣ.
ಉಕ್ರೇನ್ ವಿರುದ್ಧ ಯುದ್ಧ ಸಾರಿ ಬರೋಬ್ಬರಿ 3 ವರ್ಷಗಳಿಂದ ಬಡಿದಾಡುತ್ತಿರುವ ರಷ್ಯಾದ ಸೇನೆಗೆ ಇನ್ನೂ ಯುದ್ಧ ನಿಲ್ಲಿಸುವ ಮನಸ್ಸಾಗಿಲ್ಲ. ಲಕ್ಷಾಂತರ ಸೈನಿಕರನ್ನು ಕಳೆದುಕೊಂಡು ನರಳಾಡುತ್ತಿದೆ ರಷ್ಯಾ ಸೇನೆ. ಹೀಗಿದ್ದಾಗ ರಷ್ಯಾ ರಾಜಧಾನಿ ಮಾಸ್ಕೋಗೆ ಕೂಡ ಎಂಟ್ರಿಯನ್ನ ಕೊಟ್ಟಿರುವ ಶತ್ರುಗಳು, ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಾರು ಬ್ಲಾಸ್ಟ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪದ ಬೆನ್ನಲ್ಲೇ ಇದೀಗ ರಷ್ಯಾದ ರಾಜಧಾನಿ ಹೈಅಲರ್ಟ್ ಆಗಿದೆ.

ಲುಬಿಯಾಂಕದಲ್ಲಿ ಭೀಕರ ಕಾರು ಸ್ಫೋಟ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಾರು ಸ್ಫೋಟದ ಬಗ್ಗೆ ಹಲವು ರೀತಿಯ ಚರ್ಚೆ ಶುರುವಾಗಿದ್ದು, ಭಯ ಮೂಡಿಸಿದೆ. ಲುಬಿಯಾಂಕದಲ್ಲಿ ಇರುವ ಮಾಸ್ಕೋದ ಎಫ್‌ಎಸ್‌ಬಿ ರಹಸ್ಯ ಸೇವೆ ಪ್ರಧಾನ ಕಚೇರಿ ಬಳಿಯೇ ಈ ಸ್ಫೋಟ ಸಂಭವಿಸಿತ್ತು. ಮಾರ್ಚ್ 29 ರಂದು ಈ ರೀತಿ ರಷ್ಯಾ ಅಧ್ಯಕ್ಷರ ಕಾರು ಸ್ಫೋಟವಾಗಿದ್ದು, ದಿಢೀರ್ ಈ ರೀತಿ ಕಾರು ಸ್ಫೋಟಕ್ಕೆ ಕಾರಣ ಏನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಆಗಿಲ್ಲ & ಈ ಬಗ್ಗೆ ತನಿಖೆ ಆರಂಭವಾಗಿದೆ. ಇಷ್ಟೆಲ್ಲದರ ನಡುವೆ ಮಾಸ್ಕೋದಲ್ಲಿ ಮತ್ತಷ್ಟು ಹಿಂಸೆ ನಡೆಯುವ ವಾಸನೆಯು ಬಡಿದಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಉಕ್ರೇನ್ ಸೇನೆ ಕೂಡ ಮತ್ತಷ್ಟು ಘೋರ ದಾಳಿ ನಡೆಸಲು ಸ್ಕೆಚ್ ಹಾಕಿ ಕುಳಿತಿದೆಯಾ? ಎಂಬ ಅನುಮಾನ ಕೂಡ ಮೂಡಿದೆ.
2023ರಲ್ಲೂ ಹತ್ಯೆಗೆ ಪ್ರಯತ್ನ ನಡೆದಿತ್ತು
ರಷ್ಯಾ & ಉಕ್ರೇನ್ ಯುದ್ಧವು ನಡೆಯುತ್ತಿರುವ ಸಮಯದಲ್ಲಿ, ಪದೇ ಪದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೀವಕ್ಕೆ ಕಂಟಕ ಎದುರಾಗುತ್ತಿದೆ. ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮೇಲೆ ಕೂಡ, 2023ರ ಸಮಯದಲ್ಲಿ ಡೆಡ್ಲಿ ಡ್ರೋನ್ ಅಟ್ಯಾಕ್ ಮಾಡಲಾಗಿತ್ತು. ಉಕ್ರೇನ್ ಈ ರೀತಿಯ ಕುತಂತ್ರ ಮಾಡಿದೆ ಎಂಬ ಆರೋಪ ಆಗಿನ ಸಮಯದಲ್ಲಿ ಕಿಚ್ಚು ಹೊತ್ತಿಸಿತ್ತು. ಹೀಗಿದ್ದಾಗ ಇಂದು ಮತ್ತೊಮ್ಮೆ ವ್ಲಾದಿಮಿರ್ ಪುಟಿನ್‌ರ ಕೊಲೆಗೆ ಸ್ಕೆಚ್ ಹಾಕಿ ವಿಫಲ ಯತ್ನ ಮಾಡಿರುವ ಆರೋಪ ಕೇಳಿಬಂದಿದೆ.












Click it and Unblock the Notifications