Donald Trump: ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ಯಾವ ಯಾವ ವಸ್ತುಗಳಿಗೆ ನಿಷೇಧ?
ಟಿಕ್.. ಟಿಕ್.. ಟಿಕ್.. ಬರುತಿದೆ ಕಾಲ! ಹಿಂಗೆ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಇದೀಗ ಇಂಗ್ಲಿಷ್‌ನಲ್ಲಿ ಹಾಡು ಹೇಳುತ್ತಿರುತ್ತಾರೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಲಿ ಅಂತಾ ಹಗಲು ರಾತ್ರಿ ಕೆಲಸ ಮಾಡಿದ್ದರು ಅವರ ಬೆಂಬಲಿಗರು. ನಾಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಕನಸು ನನಸಾಗುತ್ತಿದೆ. ಆದರೆ ಇದೇ ಸಮಯದಲ್ಲಿ ಭಾರಿ ಆತಂಕ ಕೂಡ ಎದುರಾಗಿದೆ.
ಡೊನಾಲ್ಡ್ ಟ್ರಂಪ್ ಅವರಿಗೆ ಜೀವ ಭಯ ಕಾಡುತ್ತಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಪ್ರಚಾರ ಸಭೆಯಲ್ಲಿ ಟ್ರಂಪ್ ಅವರ ಹತ್ಯೆಗೆ ಹಲವು ಬಾರಿ ಪ್ರಯತ್ನ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೆಲ್ಲವನ್ನೂ ಮೀರಿ ಡೊನಾಲ್ಡ್ ಟ್ರಂಪ್ ಚುನಾವಣೆಯ ಅಖಾಡದಲ್ಲಿ ಗೆದ್ದು ಬೀಗಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ಹಿಂಸಾಚಾರ ಭಯ ಆವರಿಸಿ, ಅಮೆರಿಕದ ಭದ್ರತಾ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸಣ್ಣ ತಪ್ಪು ನಡೆಯದಂತೆ ಇದೀಗ ಕ್ರಮ ಕೈಗೊಳ್ಳಲಾಗಿದೆ.

ಟ್ರಂಪ್ ಕಾರ್ಯಕ್ರಮಕ್ಕೆ ಏನೆಲ್ಲಾ ನಿಷೇಧ?
ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ಬರುತ್ತಿದ್ದಾರೆ. ಹೀಗೆ ಬರುವ ಗಣ್ಯರಿಗೆ ಸೂಕ್ತ ಭದ್ರತೆ ಒದಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಮೆರವಣಿಗೆ ಮೂಲಕ ವೈಟ್‌ಹೌಸ್‌ಗೆ ಹೋಗುವ ನಿರೀಕ್ಷೆ ಇದೆ. ಹೀಗಾಗಿ ಹಲವು ವಸ್ತುಗಳಿಗೆ ಇದೀಗ ನಿಷೇಧ ಹೇರಲಾಗಿದೆ.
ಡೊನಾಲ್ಡ್ ಟ್ರಂಪ್ ಪದಗ್ರಹಣ ಕಾರ್ಯಕ್ರಮಕ್ಕೆ ಬರುವ ವ್ಯಕ್ತಿಗಳು ಯಾವುದೇ ರೀತಿ ಸ್ಫೋಟಕ ವಸ್ತು ಅಥವಾ ಗನ್ & ಬುಲೆಟ್ ತೆಗೆದುಕೊಂಡು ಬರುವಂತೆ ಇಲ್ಲ. ಇದರ ಜೊತೆಗೆ ಚಾಕು & ಮಚ್ಚಿನ ರೀತಿಯ ಮೊನಚಾದ ವಸ್ತುಗಳನ್ನು ಕೂಡ ತೆಗೆದುಕೊಂಡು ಬರುವಂತಿಲ್ಲ ಎಂಬ ನಿಯಮ ಹೇರಲಾಗಿದೆ. ಹಾಗೇ ದೊಡ್ಡ ಕ್ಯಾಮೆರಾಗಳಿಗೆ ಕೂಡ ನಿಷೇಧ ಹೇರಲಾಗಿದ್ದು, ಈ ಸಮಯದಲ್ಲಿ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಎತ್ತಾಕ್ಕೊಂಡು ಹೋಗಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಗತ್ತಿನಾದ್ಯಂತ ಟ್ರಂಪ್ ಸುದ್ದಿಯೇ ಟ್ರೆಂಡ್!
ಅಮೆರಿಕದ ನೂತನ ಅಧ್ಯಕ್ಷರಾಗಿ, ಅಧಿಕಾರ ಸ್ವೀಕರಿಸುತ್ತಿರುವ ಟ್ರಂಪ್ ಅವರಿಗೆ ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು & ಗಣ್ಯರು ಶುಭ ಕೋರಿದ್ದಾರೆ. ಇದರ ಜೊತೆಗೆ ಟ್ರಂಪ್ ಅವರ ಎಂಟ್ರಿ ನಂತರ ದೊಡ್ಡ ಮಟ್ಟಿಗೆ ಬದಲಾವಣೆ ಆಗುವ ನಿರೀಕ್ಷೆ ಕೂಡ ಇದೆ. ಹೀಗಾಗಿ ಇಡೀ ಜಗತ್ತಿನ ಗಮನ ಇದೀಗ ಅಮೆರಿಕದ ಮೇಲೆ ಕೇಂದ್ರಿಕೃತವಾಗಿದೆ. ಹೀಗಾಗಿಯೇ, ಜಗತ್ತಿನಾದ್ಯಂತ ಟ್ರಂಪ್ ಅವರ ಸುದ್ದಿಯೇ ಟ್ರೆಂಡ್ ಆಗಿದೆ!












Click it and Unblock the Notifications