ಕೊರೊನಾ ವೈರಸ್‌ನ 8 ತಳಿಗಳನ್ನು ಗುರುತಿಸಿದ ವಿಜ್ಞಾನಿಗಳು

ನ್ಯೂಯಾರ್ಕ್, ಏಪ್ರಿಲ್ 2: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ನ 8 ತಳಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಓಪನ್ ಸೋರ್ಸ್ ಯೋಜನೆಯಾಗಿರುವ Nextstrain.org ಗೆ ವಿಶ್ವಾದ್ಯಂತ ಇರುವ ಪ್ರಯೋಗಾಲಯಗಳಿಂದ ಸಲ್ಲಿಕೆಯಾಗಿರುವ 2,000 ಕ್ಕೂ ಹೆಚ್ಚು ಜೆನೆಟಿಕ್ ಸೀಕ್ವೆನ್ಸ್ ಗಳ ಪ್ರಕಾರ ವೈರಾಣು ರೂಪಾಂತರ ಹೊಂದುತ್ತಿರುವುದು ತಿಳಿದುಬಂದಿದೆ.

ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ತಳಿಗಳನ್ನು ಗುರುತಿಸಿದ್ದಾರೆ.

Scientists Identify Atleast 8 Strains Of Coronavirus

ರೂಪಾಂತರ ಹೊಂದುತ್ತದೆ ಎಂಬ ಕಾರಣಕ್ಕೆ ವೈರಾಣು ಅಪಾಯಕಾರಿಯಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ರೂಪಾಂತರಗಳು ವಿಜ್ಞಾನಿಗಳಿಗೆ ಆ ವೈರಾಣುವಿನ ಮೂಲ ಹಾಗೂ ಚರ್ಯೆಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನ ವರದಿಯ ಪ್ರಕಾರ, ಅಂಟಾರ್ಟಿಕ ಹೊರತುಪಡಿಸಿ ಎಲ್ಲಾ ಖಂಡಗಳಿಂದಲೂ ಸ್ಯಾಂಪಲ್ ಗಳನ್ನು ತರಿಸಿಕೊಳ್ಳಲಾಗಿದ್ದು, ರೂಪಾಂತರ ಹೊಂದುವುದಕ್ಕೆ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+