ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!

ಭೂಮಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಒಂದು ಕಡೆ ಭೂಮಿ ಮೇಲೆ ಪ್ರಕೃತಿ ವಿಕೋಪ ಎದುರಾದರೆ, ಮತ್ತೊಂದು ಕಡೆ ಹೊರಗಿನಿಂದ ಕೂಡ ಭೂಮಿಗೆ ಸಾಕಷ್ಟು ಆಪತ್ತು ಎದುರಾಗುತ್ತಿದೆ. ಇದರಲ್ಲಿ ಆಕಾಶ ಕಾಯಗಳ ಅಪಾಯ ದೊಡ್ಡದು. ಕ್ಷುದ್ರಗ್ರಹ, ಧೂಮಕೇತು ಭೂಮಿಯನ್ನ ಕಾಡಿದ್ದವು. ಆದರೆ ಈಗ ಹೊಸ ಆತಂಕ ಶುರುವಾಗಿದ್ದು, ಭೂಮಿ ಮೇಲೆ ವಿಚಿತ್ರ ಸಿಗ್ನಲ್ ಕಂಡುಹಿಡಿದಿದ್ದಾರೆ ವಿಜ್ಞಾನಿಗಳು.

Recommended Video

      Black Hole ನಿಂದಾಗಿ ಭೂಮಿಗೆ ಕಾದಿದೆ ಭಾರೀ ಆಪತ್ತು | Oneindia Kannada

      ಅಂದಹಾಗೆ ಜಗತ್ತಿನ ಶ್ರೇಷ್ಠ ವಿಜ್ಞಾನಿ 'ಅಲ್ಬರ್ಟ್ ಐನ್‌ಸ್ಟೈನ್' ಸೂತ್ರದ ಆಧಾರದಲ್ಲಿ ಸ್ಥಾಪಿಸಿದ್ದ 'ಕಪ್ಪು ಕುಳಿ' ಆಲೆಗಳನ್ನು ಕಂಡು ಹಿಡಿಯುವ ಮಾಪಕ ವಿಚಿತ್ರವಾದ ಸಿಗ್ನಲ್‌ಗಳನ್ನ ಪತ್ತೆ ಮಾಡಿದೆ. ಇದನ್ನ ವಿಜ್ಞಾನಿಗಳು ಪರಿಶೀಲಿಸಿದ ಬಳಿಕ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಈ ಸಿಗ್ನಲ್ ಕಪ್ಪು ಕುಳಿಗಳಿಂದ ಬಂದಿದೆ ಎಂದು ತಿಳಿಸಿದ್ದಾರೆ. ಅಲೆಗಳ ಪ್ರಭಾವ ಎಷ್ಟಿತ್ತು ಎಂದರೆ, ಎರಡು ಬೃಹತ್ ನಕ್ಷತ್ರಗಳನ್ನ ಕಪ್ಪು ಕುಳಿ ನುಂಗಿ ಹಾಕಿದೆ ಎನ್ನಲಾಗಿದೆ. ಇದರಿಂದ ಭೂಮಿಗೆ ಅಪಾಯ ಇದೆಯಾ ಎಂದು ಪರಿಶೀಲಿಸಿದಾಗ, ಈ ಘಟನೆ 100 ಮಿಲಿಯನ್ ಲೈಟ್ ಇಯರ್ಸ್ ದೂರದಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ.

      ‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

      ‘ಬ್ಲ್ಯಾಕ್ ಹೋಲ್’ ಬಂದರೆ ಉಡೀಸ್

      ಈ ಬ್ರಹ್ಮಾಂಡದಲ್ಲಿ ಮನುಕುಲ ಅತಿಹೆಚ್ಚು ಭಯಪಟ್ಟ ವಿಚಾರವೆಂದರೆ ‘ಕಪ್ಪು ಕುಳಿ'. ‘ಬ್ಲ್ಯಾಕ್ ಹೋಲ್' ಬಗ್ಗೆ ಒಂದು ಕಾಲದಲ್ಲಿ ಇಡೀ ಬಾಹ್ಯಾಕಾಶ ವಿಜ್ಞಾನ ಲೋಕವೇ ತಲೆಕೆಡಿಸಿಕೊಂಡಿತ್ತು. ಮಾನವನ ವಿನಾಶ ಹೀಗೆ ಆಗುತ್ತದೆ ಎಂಬ ಸಿದ್ಧಾಂತಗಳೂ ಮಂಡನೆಯಾಗಿದ್ದವು. ಆದರೆ ನಮ್ಮ ಅದೃಷ್ಟ, ಭೂಮಿಗೆ ಸಮೀಪದಲ್ಲಿ ಅಷ್ಟು ಭಯಾನಕ ‘ಬ್ಲ್ಯಾಕ್ ಹೋಲ್' ಎಲ್ಲೂ ಇಲ್ಲ. ಇದ್ದರೂ ಅದು ತುಂಬಾ ದೂರದಲ್ಲಿ ತನ್ನ ಪಾಡಿಗೆ ತಾನು ಸಿಕ್ಕ ಸಿಕ್ಕ ವಸ್ತುಗಳನ್ನ ನುಂಗಿ ಹಾಕುತ್ತಿದೆ. ಅಕಸ್ಮಾತ್ ರಾಕ್ಷಸ ಗಾತ್ರದ ‘ಬ್ಲ್ಯಾಕ್ ಹೋಲ್' ಭೂಮಿಗೆ ಸಮೀಪವೇ ಬಂದರೆ ಕತೆ ಏನು ಎಂಬ ಪ್ರಶ್ನೆಗಳು ಮೂಡಿದಾಗ, ಅದಕ್ಕಿರುವ ಒಂದೇ ಪದದ ಉತ್ತರ ಸರ್ವನಾಶ..!

      ‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

      ‘ಬ್ಲ್ಯಾಕ್ ಹೋಲ್’ ಫೋಟೋ ತೆಗೆದಿದ್ದರು

      ಕಳೆದ ವರ್ಷ ವಿಸ್ಮಯವೊಂದು ನಡೆದಿತ್ತು. ಅಂತಾರಾಷ್ಟ್ರೀಯ ಟೆಲಿಸ್ಕೋಪ್ ಮಹತ್ತರದ ಸಾಧನೆ ಮಾಡಿತ್ತು. ಕಪ್ಪು ಕುಳಿ ಫೋಟೋ ಕ್ಲಿಕ್ಕಿಸುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದರು. ಮೊದಲ ಬಾರಿಗೆ ಕಪ್ಪು ಕುಳಿ ಮತ್ತು ಅದರ ನೆರಳಿನ ಚಿತ್ರ ಸೆರೆಹಿಡಿಯಲಾಗಿತ್ತು. ಇವೆಂಟ್ ಹಾರಿಜಾನ್ ಟೆಲಿಸ್ಕೋಪ್ ಇದನ್ನು ಸಾಧಿಸಿತ್ತು. ಅರೆ ಫೋಟೋ ತೆಗೆಯುವುದರಲ್ಲಿ ಏನಿದೆ ಎಂದು ನೀವು ಪ್ರಶ್ನಿಸಬಹುದು. ಆದರೆ ಕಪ್ಪು ಕುಳಿ ಫೋಟೋ ಕ್ಲಿಕ್ ಮಾಡುವುದು ಸುಲಭವಲ್ಲ. ಕಪ್ಪು ಕುಳಿ ಅತ್ಯಂತ ಸಾಂದ್ರವಾದ ವಸ್ತು. ಎಷ್ಟು ಪ್ರಬಲ ಎಂದರೆ ಬೆಳಕು ಕೂಡ ಎಸ್ಕೇಪ್ ಆಗಲಾರದು. ಅದನ್ನು ಕಪ್ಪು ಕುಳಿಯೇ ನುಂಗಿಬಿಡುತ್ತದೆ ಹಾಗೂ ಪುನಃ ಕಾಣಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿಯನ್ನ ಕಪ್ಪು ಕುಳಿ ಹೊಂದಿರುತ್ತದೆ.

      ‘ಬ್ಲ್ಯಾಕ್ ಹೋಲ್’ ಮೂಲವೇ ನಿಗೂಢ

      ‘ಬ್ಲ್ಯಾಕ್ ಹೋಲ್’ ಮೂಲವೇ ನಿಗೂಢ

      ಕಪ್ಪು ಕುಳಿ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಸುತ್ತ ವೃತ್ತಾಕಾರದ ಹೊರವಲಯ ಬಿಂಬವು ಪ್ರಖರವಾಗಿ ಪ್ರಜ್ವಲಿಸುತ್ತದೆ. ಪ್ರಖರ ಹಿನ್ನೆಲೆಗೆ ವಿರುದ್ಧವಾಗಿ ಬಿಂಬದಂತೆ ಕಪ್ಪು ಕುಳಿ ನೆರಳು ಚೆಲ್ಲುವಂತೆ ಗೋಚರಿಸುತ್ತದೆ. ಸಣ್ಣ ಪ್ರಮಾಣದ ಕಪ್ಪು ರಂಧ್ರಗಳಾದರೆ ಪತನವಾಗುವ ನಕ್ಷತ್ರದಿಂದ ಬರುತ್ತದೆ. ಆದರೆ ದೊಡ್ಡ ಪ್ರಮಾಣದ ಕಪ್ಪು ಕುಳಿಯ ಮೂಲ ನಿಗೂಢವಾಗಿದೆ. ಬೆಳಕು ಹೀರಿಕೊಳ್ಳುವ ಈ ದೈತ್ಯದ ಬಗ್ಗೆ ಶತಮಾನದ ಹಿಂದೆಯೇ ಐನ್‍ಸ್ಟೈನ್ ತಿಳಿಸಿದ್ದರು. ದಶಕಗಳ ಕಾಲ ಇದನ್ನು ಅಧ್ಯಯನ ನಡೆಸಿ ಖಾತರಿ ಪಡಿಸಲಾಗಿದೆ. ಈ ಕಪ್ಪು ಕುಳಿ ನೋಡಲು ಉರಿಯುವ ಕಿತ್ತಳೆ, ಹಳದಿ ಹಾಗೂ ಕಪ್ಪು ಉಂಗುರದಂತೆ ಕಂಡುಬರುತ್ತದೆ.

      ‘ನಾಸಾ’ ಕೂಡ ಕಷ್ಟಪಟ್ಟಿತ್ತು

      ‘ನಾಸಾ’ ಕೂಡ ಕಷ್ಟಪಟ್ಟಿತ್ತು

      ಬೆಳಕಿನ ವಿಭಿನ್ನ ತರಂಗಾಂತರ ಬಳಸಿ ಕಪ್ಪು ರಂಧ್ರವನ್ನು ಅಧ್ಯಯನ ಮಾಡಲು ನಾಸಾದ ಅನೇಕ ಬಾಹ್ಯಾಕಾಶ ನೌಕೆಗಳು ಶ್ರಮವಹಿಸಿವೆ. ಅಲ್ಲದೆ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸಿದ್ಧಾಂತ ಬಳಸಿಕೊಂಡು ಅನೇಕ ಪ್ರಯತ್ನಗಳನ್ನು ನಡೆಸಿದೆ. ಆದರೆ ಇದರಲ್ಲಿ ನಾಸಾ ಯಶಸ್ಸಿಗಿಂತ ಸಾಕಷ್ಟು ಸೋಲುಗಳನ್ನೇ ಕಂಡಿದೆ. ಈಗಾಗಲೇ ಸೌರ ಮಂಡಲದ ಗೆರೆಯನ್ನೂ ದಾಟಿರುವ ನಾಸಾ ನೌಕೆಗಳಿಗೆ ಕಪ್ಪು ಕುಳಿ ಬಗೆಗಿನ ಅಧ್ಯಯನವು ದೊಡ್ಡ ಸವಾಲಾಗಿದೆ. ಅಲ್ಲದೆ ಕಪ್ಪು ಕುಳಿ ಎಂಬ ರಹಸ್ಯ ಇಡೀ ಬಾಹ್ಯಾಕಾಶ ವಿಜ್ಞಾನ ಲೋಕಕ್ಕೆ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+