ಪಾಕಿಸ್ತಾನವೆಂದರೆ ಲವ್ವೋ ಲವ್ವು ಎಂದ ಸೌದಿ ದೊರೆ

ಇಸ್ಲಾಮಾಬಾದ್, ಫೆಬ್ರವರಿ 18: 'ಪಾಕಿಸ್ತಾನ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಪಾಕಿಸ್ತಾನವೆಂದರೆ ಸೌದಿ ಜನರಿಗೆ ತುಂಬಾನೇ ಪ್ರೀತಿ.ಅದರಲ್ಲೂ ಪಾಕ್ ನ ಹೊಸ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಮಗೆ ಗೌರವ ಹೆಚ್ಚು ಜಾಸ್ತಿ' ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಪಾಕಿಸ್ತಾನ ಪ್ರವಾಸದಲ್ಲಿರುವ ಸಲ್ಮಾನ್ ಅವರನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಕಾರಿನಲ್ಲಿ, ತಾವೇ ಡ್ರೈವ್ ಮಾಡಿಕೊಂಡು, ಅವರನ್ನು ಭರಮಾಡಿಕೊಂಡರು.

"ಎರಡು ದೇಶಗಳೂ ಸಂಕಷ್ಟದ ಸನ್ನಿವೇಶದಲ್ಲಿ ಒಟ್ಟಿಗೇ ಹೆಜ್ಜೆ ಇಟ್ಟಿವೆ. ಪಾಕಿಸ್ತಾನ ಭವಿಷ್ಯದಲ್ಲಿ ಅತ್ಯಂತ ಮಹತ್ವದ ದೇಶವಾಗಲಿದೆ ಎಂಬ ನಂಬಿಕೆ ನಮಗಿದೆ. ನಾವು ಅದರ ಭಾಗವಾಗಲು ಬಯಸುತ್ತೇವೆ. ಉತ್ತಮ ನಾಯಕತ್ವದ ವಿಷಯದಲ್ಲೂ ಪಾಕಿಸ್ತಾನ ಮುಂಚೂಣಿಯಲ್ಲಿ ನಿಲ್ಲಲಿದೆ" ಎಂದು ಸಲ್ಮಾನ್ ಹೇಳಿದರು.

Saudi Crown Prince Mohammed bin Salman praises Pakistan

ನಾನು ರಾಜನಾದ ಮೇಲೆ ಪೂರ್ವ ದೇಶಗಳಿಗೆ ಇದು ನನ್ನ ಮೊದಲ ಪ್ರಯಾಣ. ನಾನು ಮೊದಲ ಭೇಟಿ ನೀಡಿದ್ದೇ ಪಾಕಿಸ್ತಾನಕ್ಕೆ ಎಂದು ಅವರು ಹೇಳಿದರು.

ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಇಡೀ ಜಗತ್ತೂ ಪಾಕಿಸ್ತಾನವನ್ನು ಹಳಿಯುತ್ತಿದ್ದರೆ ಸೌದಿ ರಾಜ ಮಾತ್ರ ಪಾಕಿಸ್ತಾನವನ್ನು ಬಾಯ್ತುಂಬ ಹೊಗಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+