ಸೌದಿಯಲ್ಲಿರುವ 30 ಲಕ್ಷ ಭಾರತೀಯರಿಗೆ ಭೀತಿ ಶುರು!
Recommended Video

ಸೌದಿ ಅರೇಬಿಯಾದಲ್ಲಿ 30 ಲಕ್ಷದಷ್ಟು ಭಾರತೀಯರಿಗೆ ಭೀತಿ ಶುರುವಾಗಿದೆ | Oneindia Kannada
ಸೌದಿ, ಫೆಬ್ರವರಿ 06: ಸೌದಿ ಅರೆಬಿಯದಲ್ಲಿ ಕೆಲಸ ಮಾಡುತ್ತಿರುವ 30 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಭೀತಿ ಆರಂಭವಾಗಿದೆ. ಸೌದಿ ನಾಗರಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವ ದೃಷ್ಟಿಯಿಂದ 12 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ನೀಡದಿರಲು ಸೌದಿ ಸರ್ಕಾರ ತೀರ್ಮಾನಿಸಿದೆ.
ಸುಮಾರು 12 ದಶಲಕ್ಷಕ್ಕೂ ಹೆಚ್ಚು ವಿದೇಶಿಯರು ಸೌದಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅದರಲ್ಲಿ 30 ಲಕ್ಷದಷ್ಟು ಭಾರತೀಯರಿದ್ದಾರೆ. 12 ಕ್ಷೇತ್ರಗಳಲ್ಲಿ ಈ ಎಲ್ಲ ವಿದೇಶಿಯರಿಗೆ ಸೌದಿಯಲ್ಲಿ ಉದ್ಯೋಗಾವಕಾಶವಿಲ್ಲ ಎಂದು ಇಲ್ಲಿನ ಕಾರ್ಮಿಕ ಸಚಿವ ಅಲಿ ಬಿನ್ ಅಸ್ಸರ್ ಅಲ್-ಗಾಫಿಸ್ ತಿಳಿಸಿದ್ದಾರೆ.

ಕಾರ್ ಮತ್ತು ಮೋಟಾರ್ ಬೈಕ್ ಶೋರೂಮ್, ಸಿದ್ಧ ಉಡುಪುಗಳ ಅಂಗಡಿ, ಗ್ರಹ ಮತ್ತು ಕಚೇರಿ ಪೀಠೋಪಕರಣಗಳು, ಗ್ರಹೋಪಯೋಗಿ ವಸ್ತುಗಳು ಮತ್ತು ಅಡುಗೆ ಮನೆಯ ಸರಕುಗಳ ಅಂಗಡಿ ಸೇರಿದಂತೆ 12 ಕ್ಷೇತ್ರಗಳಲ್ಲಿ ವಿದೇಶಿಯರಿಗೆ ಉದ್ಯೋಗ ನೀಡದಿರಲು ಇಲ್ಲಿಸ ಸರ್ಕಾರ ತೀರ್ಮಾನಿಸಿದೆ.












Click it and Unblock the Notifications