ಸೌದಿಯಲ್ಲಿ 'ಕುಬೇರ' ತಲಾಲ್ ಸೇರಿ ಹಲವರ ಬಂಧನ
ರಿಯಾದ್, ನವೆಂಬರ್ 05 : ವಿಶ್ವದ ಕುಬೇರ ಉದ್ಯಮಿ ಪ್ರಿನ್ಸ್ ಅಲ್ವಲೀದ್ ಬಿನ್ ತಲಾಲ್, 10 ರಾಜಕುವರರು, ನಾಲ್ವರು ಮಂತ್ರಿಗಳು ಮತ್ತು ಹತ್ತಾರು ಸಚಿವರುಗಳನ್ನು ಬಂಧಿಸಿರುವುದಾಗಿ ಸೌದಿ ಅರೇಬಿಯಾ ಪ್ರಕಟಿಸಿದೆ.
ರಾಜ ಸಲ್ಮಾನ್ ಬಿನ್ ಅಬ್ದುಲ್ಲಾಜಿಜ್ ಅಲ್-ಸೌದ್ ಅವರು ಭ್ರಷ್ಟವಿರೋಧಿ ಸಮಿತಿಯನ್ನು ರಚಿಸಿದ ಕೆಲವೇ ಗಂಟೆಗಳಲ್ಲಿ ರಾಜಮನೆತನದವರ ಮೇಲೆ ಮುಗಿಬಿದ್ದಿದ್ದು, ಇದು ವಿಶ್ವದ ಪ್ರಮುಖ ಹಣಕಾಸು ಕೇಂದ್ರಗಳಲ್ಲಿ ತಲ್ಲಣ ಸೃಷ್ಟಿಸಬಹುದು ಎಂದು ಅಲ್ ಅರೇಬಿಯಾ ವರದಿ ಮಾಡಿದೆ.

ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಂದಾಗಿರುವ ಅಲ್ವಲೀದ್ ಬಿನ್ ತಲಾಲ್ ಅವರು, ಕಿಂಗಡಂ ಹೋಲ್ಡಿಂಗ್ ಮೇಲೆ ನಿಯಂತ್ರಣ ಹೊಂದಿದ್ದು, ನ್ಯೂಸ್ ಕಾರ್ಪ್, ಸಿಟಿಗ್ರೂಪ್, ಟ್ವಿಟ್ಟರ್ ಮತ್ತಿತರ ಖ್ಯಾತನಾಮ ಸಂಸ್ಥೆಗಳಲ್ಲಿ ತಲಾಲ್ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಅರಬ್ ರಾಷ್ಟ್ರಗಳಲ್ಲಿ ಸೆಟಲೈಟ್ ಟೆಲಿವಿಷನ್ ನೆಟ್ವರ್ಕ್ ಮೇಲೆಯೂ ನಿಯಂತ್ರಣ ಹೊಂದಿದ್ದಾರೆ.
ಕಳೆದೊಂದು ದಶಕದಿಂದ ಸೌದಿ ಅರೇಬಿಯಾದಲ್ಲಿ ಅಭಿವೃದ್ಧಿ ಕುಂಠಿತೊಂಡಿದ್ದು, ಕೆಲವರು ವೈಯಕ್ತಿಕ ಹಿತಾಸಕ್ತಿಯಿಂದ ಅಧಿಕಾರಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಹಣವನ್ನು ಲಪಟಾಯಿಸುತ್ತಿರುವ ಹಿನ್ನೆಲೆಯಲ್ಲಿ ಕಿಂಗ್ ಸಲ್ಮಾನ್ ಭ್ರಷ್ಟವಿರೋಧಿ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಭ್ರಷ್ಟವಿರೋಧಿ ಸಮಿತಿಯ ನೇತೃತ್ವವನ್ನು ಕೇವಲ 32 ವರ್ಷದವರಾಗಿರುವ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವಹಿಸಿಕೊಂಡಿದ್ದಾರೆ. ಅವರಾಗಲೆ ಸೌದಿಯ ಸೇನೆ, ವಿದೇಶಾಂಗ ಖಾತೆ, ಆರ್ಥಿಕ ಮತ್ತು ಸಾಮಾಜಿಕ ನೀತಿ ರೂಪಿಸುವಲ್ಲಿ ತಮ್ಮ ಕೈಚಳಕ ತೋರಲು ಆರಂಭಿಸಿದ್ದಾರೆ.
ದೇಶವನ್ನು ಅಮೂಲಾಗ್ರವಾಗಿ ಪರಿವರ್ತಿಸಲು ಪಣತೊಟ್ಟಿರುವ ರಾಜಕುವರ ಸಲ್ಮಾನ್, ಮಹಿಳೆಯರಿಗೆ ವಾಹನ ಚಾಲನೆ ಅವಕಾಶ ನೀಡುವುದರ ಜೊತೆಗೆ ಈಗಾಗಲೆ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಅದರ ಮುಂದುವರಿದ ಭಾಗವಾಗಿ ಭ್ರಷ್ಟ ರಾಜಮನೆತನದವರನ್ನು ಹೆಡೆಮುರಿ ಕಟ್ಟಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications