ಉಕ್ರೇನ್‌ನ ಶಾಲೆ, ಸಾಂಸ್ಕೃತಿಕ ಕೇಂದ್ರಗಳ ಮೇಲಿನ ಶೆಲ್ ದಾಳಿಗೆ 21 ಮಂದಿ ಸಾವು!

ಕೀವ್, ಮಾರ್ಚ್ 17: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 22ನೇ ದಿನಕ್ಕೆ ಕಾಲಿಟ್ಟಿದೆ. ಪೂರ್ವ ಉಕ್ರೇನ್‌ನಲ್ಲಿರುವ ಪಟ್ಟಣದಲ್ಲಿ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿದ್ದು, ಘಟನೆಯಲ್ಲಿ 21ಕ್ಕೂ ಹೆಚ್ಚು ನಾಗರಿಕರು ಪ್ರಾಣ ಬಿಟ್ಟಿದ್ದಾರೆ. 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್‌ಗಳು ಸುದ್ದಿ ಸಂಸ್ಥೆ AFP ಗೆ ತಿಳಿಸಿದ್ದಾರೆ.

ಖಾರ್ಕಿವ್ ನಗರದ ಹೊರಗಿನ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರಗಳ ಮೇಲೆ ರಷ್ಯಾ ಫಿರಂಗಿ ಗುಂಡಿನ ದಾಳಿ ನಡೆಸಿದೆ ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್‌ಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೇಳೆ 10 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ

ಗುರುವಾರ ಬೆಳಗಿನ ಜಾವದ ಮೊದಲು ದಾಳಿ ಸಂಭವಿಸಿದೆ, ಎಂದು ಮೆರೆಫಾ ಮೇಯರ್ ವೆನಿಯಾಮಿನ್ ಸಿಟೋವ್ ಎಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಖಾರ್ಕಿವ್ ಪ್ರದೇಶದಲ್ಲಿ ಭಾರೀ ಬಾಂಬ್ ದಾಳಿ ನಡೆದಿದೆ. ಏಕೆಂದರೆ ಈಗಾಗಲೇ ಒಂದು ಕಡೆಗೆ ನಿಂತಿರುವ ರಷ್ಯಾದ ಪಡೆಗಳು ಈ ಪ್ರದೇಶದಲ್ಲಿ ಮುಂದೆ ಸಾಗಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.

Russian Shelling Strike on School, Cultural Centre In Ukraine; 21 Death, 25 Others Injured

3 ವರ್ಷದ ಅವಳಿ ಮಕ್ಕಳ ಸಾವು:

ಕೀವ್‌ನ ಈಶಾನ್ಯದಲ್ಲಿರುವ ಚೆರ್ನಿಹಿವ್ ನಗರದ ಹಾಸ್ಟೆಲ್‌ಗೆ ಶೆಲ್ ದಾಳಿ ನಡೆಸಲಾಗಿದೆ. ಈ ವೇಳೆ ಅದರಲ್ಲಿದ್ದ ತಂದೆ ಮತ್ತು ತಾಯಿ ಜೊತೆಗೆ 3 ವರ್ಷದ ಅವಳಿ ಮಕ್ಕಳು ಸಾವನ್ನಪ್ಪಿವೆ ಎಂದು ಉಕ್ರೇನ್‌ನ ತುರ್ತು ಸೇವೆ ಹೇಳಿದೆ.

ಉಕ್ರೇನ್‌ನ ರಷ್ಯಾದ ಆಕ್ರಮಣವು ಗುರುವಾರ ನಾಲ್ಕನೇ ವಾರಕ್ಕೆ ಪ್ರವೇಶಿಸಿದೆ. ರಷ್ಯಾದ ಪಡೆಗಳು ಪ್ರಮುಖ ನಗರಗಳ ಹೊರಗೆ ಹೆಚ್ಚಾಗಿ ಸಿಲುಕಿದ್ದು, ದೂರದಿಂದ ಶೆಲ್ ದಾಳಿ ಮಾಡುತ್ತಿವೆ. ಇದರಿಂದ ನಾಗರಿಕರ ಜೀವಕ್ಕೆ ಹಾನಿಯ ಉಂಟಾಗುತ್ತಿದೆ.

ಈ ಮಧ್ಯೆ, ಉತ್ತರದ ನಗರವಾದ ಚೆರ್ನಿಹಿವ್‌ನ ಗವರ್ನರ್ ರಷ್ಯಾದ ಫಿರಂಗಿ ಮತ್ತು ವಾಯುದಾಳಿಗಳಿಂದ ಭಾರಿ ನಷ್ಟ ಮತ್ತು ವಿನಾಶವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಗರದ ಶವಾಗಾರಗಳಿಗೆ 53 ಜನರ ಶವಗಳು ಬಂದಿವೆ ಎಂದು ವಿಯಾಚೆಸ್ಲಾವ್ ಚೌಸ್ ಗುರುವಾರ ಉಕ್ರೇನಿಯನ್ ಟಿವಿಗೆ ತಿಳಿಸಿದ್ದಾರೆ.
ನೂರಾರು ಜನರು ಆಶ್ರಯ ಪಡೆದಿದ್ದ ಮಾರಿಯುಪೋಲ್‌ನ ಥಿಯೇಟರ್‌ಗೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ. ಅದಾಗ್ಯೂ, ಕಟ್ಟಡವು ಅದರ ಪ್ರಭಾವವನ್ನು ತಡೆದುಕೊಂಡಿದೆ. ಆದರೆ ಪ್ರವೇಶದ್ವಾರವನ್ನು ಕಲ್ಲುಮಣ್ಣುಗಳಿಂದ ನಿರ್ಬಂಧಿಸಲಾಗಿದ್ದು, ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣಹಾನಿಯಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+