ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳಿಗೆ ಪುಟಿನ್ ಜವಾಬ್ದಾರಿ ಎಂದ ಕೆನಡಾ

ಕೀವ್, ಮೇ 9: "ಉಕ್ರೇನ್ ನೆಲದಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧ ಅಪರಾಧಗಳಿಗೆ ರಷ್ಯಾ ಅಧ್ಯಕ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ನೇರ ಜವಾಬ್ದಾರರು" ಎಂದು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಆರೋಪಿಸಿದರು.

ಭಾನುವಾರ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಭೇಟಿ ನೀಡಿದ ಅವರು, ಅಧ್ಯಕ್ಷ ವೊಲೊಡಿಮಿರ್ ಝೆಲೆೆನ್ಸ್ಕಿ ಜೊತೆಗೆ ಚರ್ಚೆ ನಡೆಸಿದರು. "ಘೋರ ಯುದ್ಧಾಪರಾಧಗಳಿಗೆ ವ್ಲಾಡಿಮಿರ್ ಪುಟಿನ್ ಹೊಣೆಗಾರರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ" ಎಂದು ಉಕ್ರೇನಿಯನ್ ನಾಯಕನೊಂದಿಗಿನ ಸುದ್ದಿಗೋಷ್ಠಿಯಲ್ಲಿ ಟ್ರುಡೊ ಹೇಳಿದರು.

ಕೀವ್‌ನ ಹೊರವಲಯದ ಇರ್ಪಿನ್‌ಗೆ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಭೇಟಿ ನೀಡಿದರು. ಮಾರ್ಚ್‌ನಲ್ಲಿ ಮಾಸ್ಕೋದ ಆಕ್ರಮಣಕ್ಕೂ ಮೊದಲು ಉಕ್ರೇನಿಯನ್ ಮತ್ತು ರಷ್ಯಾದ ಪಡೆಗಳ ನಡುವಿನ ಭೀಕರ ಹೋರಾಟದಿಂದ ನಗರವೇ ಧ್ವಂಸಗೊಂಡಿದೆ ಎಂದು ನಗರದ ಮೇಯರ್ ಹೇಳಿದರು.

Russian President Vladimir Putin was responsible for war crimes Canadian PM Justin Trudeau

ವಾಸ್ತವ ಸ್ಥಿತಿ ಅರಿಯಲು ಭೇಟಿ: "ರಷ್ಯಾದ ಅಕ್ರಮ ಯುದ್ಧದ ಕ್ರೂರತೆಯನ್ನು ನಾನು ನೇರವಾಗಿ ನೋಡಿದ್ದೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರಷ್ಯಾದ ಆಕ್ರಮಣಕಾರರು ನಮ್ಮ ನಗರಕ್ಕೆ ಮಾಡಿದ ಎಲ್ಲಾ ಕೃತ್ಯಗಳನ್ನು ತಮ್ಮ ಕಣ್ಣುಗಳಿಂದ ನೋಡಲು ಇರ್ಪಿನ್‌ಗೆ ಅವರು ಬಂದಿದ್ದಾರೆ" ಎಂದು ಟ್ರುಡೊ ಚಿತ್ರಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಅಮೆರಿಕದ ಮೊದಲ ಮಹಿಳೆ ಜಿಲ್ ಬಿಡೆನ್ ಉಕ್ರೇನ್‌ಗೆ ಅಘೋಷಿತ ಪ್ರವಾಸ ಮಾಡಿದ ದಿನವೇ ಕೆನಡಾ ಪ್ರಧಾನಮಂತ್ರಿ ಜಸ್ಟಿಸ್ ಟ್ರುಡೋ ಕೂಡ ಭೇಟಿ ನೀಡಿದರು. ಇಂದು ಉಕ್ರೇನ್‌ಗೆ ಕೆನಡಾ ತೋರಿಸಿದ ಬೆಂಬಲಕ್ಕಾಗಿ ಮಾರ್ಕುಶಿನ್ ಪ್ರಧಾನ ಮಂತ್ರಿಗೆ ಧನ್ಯವಾದ ಅರ್ಪಿಸಿದರು.

Russian President Vladimir Putin was responsible for war crimes Canadian PM Justin Trudeau

"ನಮ್ಮ ವಿಜಯದ ನಂತರ ಉಕ್ರೇನಿಯನ್ ನಗರಗಳ ಪುನರ್ ನಿರ್ಮಾಣಕ್ಕಾಗಿ ನಮ್ಮ ದೇಶಗಳ ನಡುವೆ ನಿರಂತರ ಸಹಕಾರವನ್ನು ಬಯಸುತ್ತೇವೆ," ಎಂದು ಅವರು ಹೇಳಿದರು.

ಕಳೆದ ಫೆಬ್ರವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ಮಾಡುವ ಮೊದಲು ಇರ್ಪಿನ್ ಸುಮಾರು 60,000 ಜನಸಂಖ್ಯೆಯನ್ನು ಹೊಂದಿತ್ತು ಎಂದು ತಿಳಿದು ಬಂದಿದೆ.

ಝೆಲೆನ್ಸ್ಕಿಗೆ ಭರವಸೆ ನೀಡಿದ ಜಿ7 ರಾಷ್ಟ್ರಗಳು: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವೀಡಿಯೊ ಕಾನ್ಫರೆನ್ಸ್ ಮೂಲಕ G7 ವರ್ಷದ ಮೂರನೇ ಸಭೆಯಲ್ಲಿ ಭಾಗವಹಿಸಿದ್ದರು. ಉಕ್ರೇನ್ ತನ್ನ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಲು ಮತ್ತಷ್ಟು ಬದ್ಧತೆಗಳನ್ನು ಕೈಗೊಳ್ಳಲು ಗುಂಪಿನ ಮುಂದುವರಿದ ಸಿದ್ಧತೆಯ ಬಗ್ಗೆ ಝೆಲೆನ್ಸ್ಕಿಯವರಿಗೆ ಜಿ7 ರಾಷ್ಟ್ರಗಳು ಭರವಸೆ ನೀಡಿದವು. ಉಕ್ರೇನ್ ಈಗ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಮತ್ತು ಭವಿಷ್ಯದ ಆಕ್ರಮಣಕಾರಿ ಕೃತ್ಯಗಳನ್ನು ತಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+