Russia & Ukraine: ಟ್ರಂಪ್ ಜೊತೆ ಮಾತನಾಡಲು ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್!
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವು ರೀತಿ ಬದಲಾವಣೆ ಆಗುತ್ತಿದ್ದು, ಇನ್ನೇನು ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಳ್ಳಲು ಕೆಲವೇ ಕೆಲ ದಿನಗಳು ಬಾಕಿ ಇರುವ ಸಮಯದಲ್ಲೇ ರಷ್ಯಾ ಕೂಡ ಸಂಚಲನ ಸೃಷ್ಟಿ ಮಾಡುವ ಹೇಳಿಕೆ ನೀಡಿದೆ. ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ನೆಮ್ಮದಿ ಇಲ್ಲದೆ ಒದ್ದಾಡಿದ್ದ ಜಗತ್ತಿಗೆ ಇದೀಗ ರಷ್ಯಾ ಅಧ್ಯಕ್ಷರ ಹೇಳಿಕೆ ಹೊಸ ಭರವಸೆ ಮೂಡುವಂತೆ ಮಾಡಿದೆ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಉಕ್ರೇನ್ & ರಷ್ಯಾ ಯುದ್ಧ ವಿರೋಧ ಮಾಡುತ್ತಲೇ ಬಂದಿದ್ದಾರೆ. ಅಲ್ಲದೆ ಉಕ್ರೇನ್ & ರಷ್ಯಾ ಬಡಿದಾಟ ನಿಲ್ಲಬೇಕು ಎಂಬುದಾಗಿ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಹೀಗಿದ್ದಾಗಲೇ ದಿಢೀರ್ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೀಗ ಟ್ರಂಪ್ ಅವರ ಜೊತೆಗೆ ಮಹತ್ವದ ಮಾತುಕತೆ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ!

ಟ್ರಂಪ್ ಜೊತೆ ಮಾತನಾಡಲು ರೆಡಿ!
ಡೊನಾಲ್ಡ್ ಟ್ರಂಪ್ ಜೊತೆಗೆ ಉಕ್ರೇನ್ ಯುದ್ಧದ ವಿಚಾರ ಪ್ರಸ್ತಾಪ ಮಾಡಿ, ಸಭೆ ನಡೆಸಲು ನಾವು ಸದಾ ಸಿದ್ಧ ಎಂಬ ಮಾತನ್ನ ಇದೀಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಈ ಮೂಲಕ ರಷ್ಯಾ ಅಧ್ಯಕ್ಷರ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ, ಅಮೆರಿಕ ಅಧ್ಯಕ್ಷ ಸ್ಥಾನದಿಂದ ಇನ್ನೇನು ಕೆಲವೇ ದಿನಗಳಲ್ಲಿ ನಿರ್ಗಮಿಸುತ್ತಿರುವ ಜೋ ಬೈಡನ್ ಅವರು ಪುಟಿನ್ ಅವರನ್ನ ಹೆಚ್ಚಾಗಿ ವಿರೋಧಿಸುತ್ತಿದ್ದರು.
ಹೀಗೆ ಜೋ ಬೈಡನ್ ನಿಲುವು & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಹಠ ಜಗತ್ತಿನ ನಿದ್ದೆಗೆಡಿಸಿತ್ತು. ಯಾಕಂದ್ರೆ ಯಾವ ಕ್ಷಣದಲ್ಲಿ ಘೋರ ಯುದ್ಧ ನಡೆದು ಜಗತ್ತಿನಲ್ಲಿ ಮತ್ತೊಮ್ಮೆ ಮಹಾಯುದ್ಧ ಆರಂಭವಾಗುತ್ತೋ? ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ 3ನೇ ಮಹಾಯುದ್ಧ ಭೀತಿಯಲ್ಲಿ ಜಗತ್ತು ನರಳಾಡುತ್ತಿದೆ. ರಷ್ಯಾ & ಉಕ್ರೇನ್ ಯುದ್ಧವು ಈ ಭಯಕ್ಕೆ ಪೆಟ್ರೋಲ್ ಸುರಿದು ಮತ್ತಷ್ಟು ಬೆಂಕಿ ಹಾಕುತ್ತಿತ್ತು. ಆದರೆ ಇದೀಗ ರಷ್ಯಾ ಅಧ್ಯಕ್ಷರು ಖುದ್ದಾಗಿ ನೀಡಿದ ಹೇಳಿಕೆ ಗಮನಿಸಿದರೆ ಇನ್ನೇನು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ಹಿಡಿದ ತಕ್ಷಣವೇ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬಹುದು ಎನ್ನಲಾಗುತ್ತಿದೆ!
ರಷ್ಯಾ ಕೊಟ್ಟ ಏಟಿಗೆ ಉಕ್ರೇನ್ ಶೇಕ್!
ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸದ್ಯಕ್ಕೆ ಯುದ್ಧ ನಿಂತರೆ ಸಾಕಪ್ಪಾ... ಸಾಕು... ಅಂತಿದ್ದಾರೆ ಅಲ್ಲಿನ ಜನರು. ಆದರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು, ಎಡವಟ್ಟು ಆಲೋಚನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಈಗ ಸಂಧಾನ ಮಾತುಕತೆಗೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications