Putin & PM Modi: ಪ್ರಧಾನಿ ನರೇಂದ್ರ ಮೋದಿಗೆ ಬಿಗ್ ಥ್ಯಾಂಕ್ಸ್ ಎಂದ ರಷ್ಯಾ ಅಧ್ಯಕ್ಷ ಪುಟಿನ್!
Putin & PM Modi: ಭಾರತದ ಪ್ರಭಾವು ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತದ ಪ್ರಭಾವ ಇನ್ನಷ್ಟು ಹೆಚ್ಚಾಗಿದೆ. ಇನ್ನು ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತದ ವಿದೇಶಾಂಗ ಇಲಾಖೆಯು ಅತ್ಯಂತ ಜಾಣ್ಮೆಯಿಂದ ನಡೆದುಕೊಂಡಿದ್ದನ್ನು ನೋಡಿ ಅಮೆರಿಕದಂತಹ ಅಮೆರಿಕ ದೇಶಗಳಿಗೆ ಅಚ್ಚರಿ ಮತ್ತು ಶಾಕ್ ಎದುರಾಗಿತ್ತು. ರಷ್ಯಾ ದೇಶವನ್ನು ಇಡೀ ವಿಶ್ವದ ರಾಷ್ಟ್ರಗಳು ಕೈಬಿಟ್ಟಿದ್ದರೂ ಆ ದೇಶದ ಬೆಂಬಲಕ್ಕೆ ನಿಂತಿದ್ದು ಭಾರತ ಮಾತ್ರ. ಇದೀಗ ಭಾರತಕ್ಕೆ ವಿಶೇಷ ಕಾರಣಕ್ಕೆ ರಷ್ಯಾ ಥ್ಯಾಂಕ್ಸ್ ಅಂತ ಹೇಳಿದೆ. ಅದೇನು ಅಂತ ನೋಡೋಣ.
ರಷ್ಯಾ ಹಾಗೂ ಭಾರತದ ನಡುವೆ ಉತ್ತಮ ಸಂಬಂಧವು ಹಲವು ದಶಕಗಳಿಂದ ಇದೆ. ಪಾಕಿಸ್ತಾನ್ - ಭಾರತ, ಚೀನಾ - ಭಾರತದ ನಡುವೆ ಯುದ್ಧ ನಡೆದಾಗ. ಅಮೆರಿಕ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶನ ಮಾಡಿದೆ. ಆದರೆ, ಭಾರತದ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿರುವುದು ರಷ್ಯಾ ದೇಶ. ಇದೀಗ ರಷ್ಯಾ - ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ರಷ್ಯಾದೊಂದಿಗೆ ವ್ಯವಹಾರ ನಡೆಸಿತ್ತು. ಅಲ್ಲದೆ ಉಕ್ರೇನ್‌ಗೆ ಆಹಾರ ಸೇರಿದಂತೆ ಅಗತ್ಯ ನೆರವು ನೀಡಿತ್ತು. ಇದೀಗ ಉಕ್ರೇನ್ - ರಷ್ಯಾ ಯುದ್ಧ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿದ್ದು. ಜಗತ್ತಿನಲ್ಲಿ ಕೊನೆಗೂ ಶಾಂತಿ ನೆಲೆಸುವ ಕಾಲ ಬಂದಿದೆ.

ಕಳೆದ ಮೂರು ವರ್ಷಗಳಿಂದ ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಎರಡೂ ದೇಶಗಳಿಗೂ ಅಪಾರ ನಷ್ಟವಾಗಿದೆ. ಎರಡೂ ದೇಶಗಳಲ್ಲಿ ಜನ ಹಾಗೂ ಸೈನಿಕರು ಸಾವನ್ನಪ್ಪಿದ್ದಾರೆ. ಇದೀಗ ಈ ಯುದ್ಧವನ್ನು ಅಂತ್ಯಗೊಳಿಸುತ್ತಿರುವ ಭಾರತ ಹಾಗೂ ಅಮೆರಿಕ ದೇಶಗಳಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು ಅಂತ ಹೇಳಿದ್ದಾರೆ.
ಜಗತ್ತಿನ ನಾಯಕರಿಗೆಲ್ಲವೂ ಅವರದ್ದೇ ದೇಶದ ಸವಾಲುಗಳು ಇವೆ. ಇದರ ಹೊರತಾಗಿಯೂ ಪ್ರಮುಖ ರಾಷ್ಟ್ರಗಳಾದ ಭಾರತದ ಪ್ರಧಾನಿ, ಅಮೆರಿಕದ ಅಧ್ಯಕ್ಷ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ ದೇಶಗಳ ಅಧ್ಯಕ್ಷರು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಕ್ತಾಯ ಮಾಡುವುದಕ್ಕೆ ಶ್ರಮಿಸಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದ ಅಂತ ರಷ್ಯಾದ ಅಧ್ಯಕ್ಷರು ಹೇಳಿದ್ದಾರೆ.

ಕದನ ವಿರಾಮದ ಚರ್ಚೆ: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಸುದೀರ್ಘ 3 ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಈ ಯುದ್ಧದಿಂದಾಗಿ ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಅಪಾರ ಸಂಪತ್ತು ನಾಶವಾಗಿದೆ. ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧಕ್ಕೆ ಬ್ರೇಕ್ ಹಾಕುವುದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ಕರ್ನಾಟಕದ ಒಬ್ಬ ವೈದ್ಯಕೀಯ ವಿದ್ಯಾರ್ಥಿಯೂ ಈ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಇದೀಗ ಈ ಎರಡೂ ದೇಶಗಳ ನಡುವಿನ ಯುದ್ಧವು ತಾರ್ಕಿಕ ಅಂತ್ಯವನ್ನು ಕಾಣುವ ಹಂತಕ್ಕೆ ಬಂದಿದೆ. ಆದರೆ, ಈ ಹಂತದಲ್ಲೂ ರಷ್ಯಾ ತನ್ನ ಪಟ್ಟು ಸಡಿಲ ಮಾಡುತ್ತಿಲ್ಲ.












Click it and Unblock the Notifications