Russia & Ukraine: ಪ್ರಧಾನಿ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೆಮ್ಮೆಯ ಮಾತುಗಳು!
ರಷ್ಯಾ & ಭಾರತದ ನಡುವೆ ಅತ್ಯುತ್ತಮವಾದ ಬಾಂಧವ್ಯ ಇದ್ದು, ಎರಡೂ ದೇಶಗಳು ಉತ್ತಮ ಸಂಬಂಧ ಹೊಂದಿವೆ. ಅದರಲ್ಲೂ, ಪ್ರಧಾನಿ ಮೋದಿ ಅವರು & ರಷ್ಯಾದ ಅಧ್ಯಕ್ಷ ಪುಟಿನ್ ಅವರ ನಡುವೆ ತುಂಬಾ ಗಟ್ಟಿಯಾದ ಸಂಬಂಧ ಇದೆ. ಹೀಗಾಗಿ ಪದೇ, ಪದೇ ಪ್ರಧಾನಿ ಮೋದಿ ಅವರನ್ನು ಹೊಗಳುತ್ತಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು.
ಈಗಲೂ ಭಾರತದ ಉತ್ಪಾದನಾ ಸಾಮರ್ಥ್ಯದ ಕುರಿತು & ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಾಡಿರುವ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆಗೆ ಭಾರತ ಇದೀಗ ರಷ್ಯಾಗೆ ಮಾಡಿರುವ ಸಹಾಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋ ಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪೂರಕ ವಾತಾವರಣ ನಿರ್ಮಿಸಲು ಸಹಾಯ ಮಾಡಿದ್ದಕ್ಕೆ ಅಂತಾನೆ ಇದೀಗ ಪುಟಿನ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಹಾಗೇ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಪುಟಿನ್ ಅವರು.

ಭಾರತದ ಸಹಾಯಕ್ಕೆ ರಷ್ಯಾ ಋಣಿ!
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಶುರು ಮಾಡಿದ ನಂತರ, ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ಬ್ಯುಸಿನೆಸ್‌ಮ್ಯಾನ್‌ಗಳು ರಷ್ಯಾ ಕೈಗಾರಿಕೆಗಳನ್ನು ಬಿಟ್ಟು ಹೊರಗೆ ಬಂದಿದ್ದರು. ಆ ಸಮಯದಲ್ಲಿ ರಷ್ಯಾ ಬೆನ್ನಿಗೆ ನಿಂತು ಭಾರತ ದೊಡ್ಡ ಸಹಾಯ ಮಾಡಿತ್ತು. ಅದನ್ನೇ ಇದೀಗ ಪ್ರಸ್ತಾಪ ಮಾಡಿ ಹೊಗಳಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಭಾರತದಿಂದ ಆಗಿರುವ ಸಹಾಯ ನೆನೆಪು ಮಾಡಿಕೊಂಡಿದ್ದಾರೆ.
ರಷ್ಯಾ ಮಾರುಕಟ್ಟೆಯಿಂದ ಕೆಲವು ಪಾಶ್ಚಿಮಾತ್ಯ ಬ್ಯಾಂಡ್‌ಗಳು ಹೊರ ಹೋದವು. ಆ ನಂತರ ಅದಕ್ಕೆ ಪರ್ಯಾಯವಾಗಿ ಸ್ವದೇಶಿ ಬ್ರಾಂಡ್‌ಗಳು ಮುನ್ನೆಲೆಗೆ ಬಂದಿದ್ದು, ಈ ರೀತಿ ಅಭಿವೃದ್ಧಿ ಸಾಧಿಸಲು, ಭಾರತದ ಸಹಾಯ ತುಂಬಾ ಮುಖ್ಯವಾಗಿದೆ ಎಂದು ಪುಟಿನ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications