Russia & Ukraine: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೀಗೆ ಹೇಳಿದ್ರಾ?

ರಷ್ಯಾ & ಭಾರತದ ನಡುವೆ ಅತ್ಯುತ್ತಮ ಸಂಬಂಧ ಇದ್ದು, ಎರಡೂ ದೇಶಗಳು ಈ ವಿಚಾರ ಬಂದಾಗ ಅತ್ಯುತ್ತಮ ಬಾಂಧವ್ಯ & ಸಂಬಂಧ ಕಾಪಾಡಿಕೊಂಡು ಬಂದಿವೆ. ಹೀಗಿದ್ದಾಗ ಕಳೆದ 2.5 ವರ್ಷಗಳಿಂದ ಉಕ್ರೇನ್ & ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಆದರೆ ಈ ಯುದ್ಧ ನಿಲ್ಲಿಸಲು ಭಾರತ ನಡೆಸುತ್ತಿರುವ ಪ್ರಯತ್ನದ ಬಗ್ಗೆ ಇದೀಗ ರಷ್ಯಾ ಅಧ್ಯಕ್ಷರು ಏನು ಹೇಳಿದ್ದಾರೆ ಗೊತ್ತೆ? ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಷ್ಯಾ ಅಧ್ಯಕ್ಷರಾದ ಪುಟಿನ್ ಹೇಳಿದ್ದು ಏನು? ಬನ್ನಿ ತಿಳಿಯೋಣ.

ಅಂದಹಾಗೆ ಭಾರತ & ರಷ್ಯಾ ನಡುವೆ ಗಟ್ಟಿಯಾದ ಸಂಬಂಧ ಇರುವುದನ್ನು ನೋಡಿ ಇಡೀ ಜಗತ್ತೇ ಉರ್ಕೊಳ್ತಿದೆ. ಯಾಕಂದ್ರೆ ಉಕ್ರೇನ್ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾದ ಮೇಲೆ ಇದೀಗ ಪಾಶ್ಚಿಮಾತ್ಯ ದೇಶಗಳು ಹಲವು ರೀತಿ ನಿರ್ಬಂಧ ಹೇರಿವೆ. ಸ್ಥಿತಿ ಹೀಗಿದ್ದಾಗ ಭಾರತ ಮಾತ್ರ ರಷ್ಯಾ ನೆರವಿಗೆ ಬಂದಿದೆ. ಅದು ಹೇಗೆ ಅಂದ್ರೆ ರಷ್ಯಾದ ಕಚ್ಚಾ ತೈಲ ಖರೀದಿಯಿಂದ ಹಿಡಿದು, ರಷ್ಯಾಗೆ ಕಚ್ಚಾ ವಸ್ತುಗಳ ಪೂರೈಕೆ ತನಕ ಭಾರತವೇ ಬೆನ್ನೆಲುಬಾಗಿ ನಿಂತಿದೆ. ಈ ಸಮಯದಲ್ಲೇ ಉಕ್ರೇನ್ & ರಷ್ಯಾ ಯುದ್ಧದ ಬಗ್ಗೆ ಭಾರತದ ನಿಲುವು ಏನು? ಎಂಬುದನ್ನ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಾಯಿ ಬಿಟ್ಟಿದ್ದಾರೆ.

Russian President Putin Said This About India

ಪ್ರಧಾನಿ ಮೋದಿ ಬಗ್ಗೆ ಪುಟಿನ್...

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೀಗ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಎದುರು ಹಾಕಿಕೊಂಡಿದ್ದಾರೆ. ಹೀಗಿದ್ದಾಗ ಭಾರತದ ಪ್ರಧಾನಿ ಮೋದಿ ಅವರು ವ್ಲಾದಿಮಿರ್ ಪುಟಿನ್ & ರಷ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹತ್ವದ ಹೇಳಿಕೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಯುದ್ಧದ ಬಗ್ಗೆ ಭಾರತ, ಚೀನಾ, ಬ್ರೆಜಿಲ್‌ನ ನಾಯಕರ ಜೊತೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ. ಭಾರತ, ಚೀನಾ, ಬ್ರೆಜಿಲ್ ಇದೀಗ ಯುದ್ಧ ನಿಲ್ಲಿಸಲು ಪ್ರಮಾಣಿಕ ಪ್ರಯತ್ನ ನಡೆಸುತ್ತಿವೆ ಎಂದಿದ್ದಾರೆ. ಈ ಮೂಲಕ ಭಾರತಕ್ಕೆ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಸಪೋರ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+