Ukraine War: ಉಕ್ರೇನ್ ಅಧ್ಯಕ್ಷನಿಗೆ ಎಚ್ಚರಿಕೆ ಸಂದೇಶ ನೀಡಿದ ವ್ಲಾದಿಮಿರ್ ಪುಟಿನ್!

ಉಕ್ರೇನ್ ಮಾಡುತ್ತಿರುವ ಕೆಲಸಕ್ಕೆ ರಷ್ಯಾ ಕೊತ ಕೊತ ಕುದಿಯುತ್ತಿದ್ದು, ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಶುರುವಾಗುವ ಭಯ ಕಾಡುತ್ತಿದೆ. ಉಕ್ರೇನ್ & ರಷ್ಯಾ ಯುದ್ಧ ಇದೀಗ ನೋಡುತ್ತಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಯುದ್ಧದಲ್ಲಿ ನ್ಯೂಕ್ಲಿಯರ್ ಅಂದ್ರೆ ಪರಮಾಣು ಬಾಂಬ್ ಬಳಕೆ ಆಗಲಿದೆ ಎಂಬ ಭಯ ಕಾಡ್ತಾ ಇದೆ. ಯಾಕಂದ್ರೆ ಉಕ್ರೇನ್ ರೊಚ್ಚಿಗೆದ್ದು ರಷ್ಯಾ ಮೇಲೆ ದಾಳಿ ಮಾಡ್ತಿರುವ ರೀತಿ ನೋಡಿ ಸ್ವತಃ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರೇ ಪರಮಾಣು ಬಾಂಬ್ ಬಳಕೆಗೆ ಆದೇಶ ನೀಡುತ್ತಾರಾ? ಅನ್ನೋ ಅನುಮಾನ ಮೂಡಿದೆ.

ಉಕ್ರೇನ್ ರೊಚ್ಚಿಗೆದ್ದಿದೆ, ಹೀಗೆ ರೊಚ್ಚಿಗೆದ್ದು ಸುಖಾಸುಮ್ಮನೆ ಇಲ್ಲದ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದೆ. ರಷ್ಯಾ ತನ್ನ ವಿರುದ್ಧ ದಾಳಿ ಮಾಡಿದ ನಂತರ ಉಕ್ರೇನ್ ಕೂಡ ಹೀಗೆ ಸೇಡಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿತ್ತು. ಆದ್ರೆ ಕೆಲವು ದಿನಗಳಿಂದ ಡೆಡ್ಲಿ ಅಟ್ಯಾಕ್ ಮಾಡ್ತಾ ಇರುವ ಉಕ್ರೇನ್ ಸೈನಿಕರು ರಷ್ಯಾಗೆ ತೀವ್ರ ಆಘಾತ ನೀಡುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಷ್ಯಾ ತೈಲ ಸಂಗ್ರಹ ಘಟಕಗಳ ಮೇಲೂ ದಾಳಿ ಮಾಡಲು ಸ್ಕೆಚ್ ಹಾಕಿದೆ ಉಕ್ರೇನ್ ಸೇನೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ದಾಳಿಗೆ ಚಿಂತನೆ ನಡೆಸುತ್ತಿದ್ದಾರಾ?

Russian President Putin Is Said This To Ukraine Now

ಪುಟಿನ್ ಮಾಡಿರುವ ಪ್ಲಾನ್ ಏನು?

ರಷ್ಯಾ & ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ಮತ್ತೊಂದು ಮಹಾಯುದ್ಧವೇ ಆಗುತ್ತಿದೆ. ಇದೀಗ ಹೊರಬಿದ್ದ ಮಾಹಿತಿಗಳ ಪ್ರಕಾರ, ಉಕ್ರೇನ್ ಸೇನೆ ತುಂಬಾ ದೊಡ್ಡ ಮಟ್ಟದಲ್ಲಿ ರಷ್ಯಾ ತೈಲ ಸಂಗ್ರಹದ ಮೇಲೆ ದಾಳಿ ಮಾಡಲು ಸಜ್ಜಾಗಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ ಮತ್ತು ಉಕ್ರೇನ್ ಯುದ್ಧ ಇನ್ನಷ್ಟು ಘೋರವಾಗುತ್ತಿದೆ. ಹಾಗೇ ಯುರೋಪ್ ಸೇರಿ ಇಡೀ ಜಗತ್ತಿನಲ್ಲೇ ಯುದ್ಧ ಭಯ ಹೆಚ್ಚಾಗುವಂತೆ ಮಾಡುತ್ತಿದೆ. ರಷ್ಯಾ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರ ಹೊರಗೆ ತೆಗೆಯಲು ಚಿಂತಿಸುತ್ತಿರುವ ಸಮಯದಲ್ಲೇ ಉಕ್ರೇನ್ ಈ ರೀತಿ ವರ್ತಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಒಂದು ಕಡೆ ಸಂಧಾನ ಪ್ರಕ್ರಿಯೆ ನಡೆಯುವಾಗಲೇ ಈ ರೀತಿಯ ಘಟನೆಗಳು ಕೂಡ ವರದಿ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+