ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್
Recommended Video
ಮಾಸ್ಕೋ, ಆಗಸ್ಟ್ 15: 233 ಪ್ರಯಾಣಿಕರನ್ನು ಹೊತ್ತಿದ್ದ ಉರಲ್ ಏರೈಲೈನ್ಸ್ ಏರ್ ಬಸ್ 321 ಎಂಬ ವಿಮಾನವನ್ನು ಜೋಳದ ಗದ್ದೆಯೊಂದರಲ್ಲಿ ಲ್ಯಾಂಡ್ ಮಾಡುವ ಮೂಲಕ ಪೈಲಟ್ ಸಮಯಪ್ರಜ್ಞೆ ಮೆರೆದು ಎಲ್ಲ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ.
ವಿಮಾನ ಟೇಕ್ ಆಫ್ ಆಗಿ ಕೆಲವೇ ಸಮಯದ ನಂತರ ಹಕ್ಕಿಗಳ ಹಿಂಡೊಂದು ಏಕಾಏಕಿ ಬಂದು ವಿಮಾನ ಪ್ರಯಾಣಕ್ಕೆ ಅಡ್ಡಿ ಉಂಟು ಮಾಡಿದ್ದರಿಂದ ವಿಮಾನ ದಿಕ್ಕಾಪಾಲಾಗಿ ಹಾರಲು ಆರಂಭಿಸಿತ್ತು. ಆದರೆ ಧೈರ್ಯ ಕಳೆದುಕೊಳ್ಳದ ಪೈಲಟ್, ಜೋಳದ ಗದ್ದೆಯೊಂದರಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಜರ ಪ್ರಾಣ ಕಾಪಾಡಿದ್ದಾರೆ.
ಈ ವಿಮಾನ ಮಾಸ್ಕೋದ ಝುಕೊವ್ಸಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1 ಕಿ.ಮೀ.ದೂರದಲ್ಲಿ ಲ್ಯಾಂಡ್ ಆಗಿತ್ತು. ಈ ಘಟನೆಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೈಲಟ್ ಸಮಯಪ್ರಜ್ಞೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ವಿಮಾನದಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಬಹುತೇಕ ಪ್ರಯಾಣಿಕರು ಆಘಾತದಲ್ಲಿದ್ದಾರೆ. "ಇದು ಪವಾಡವೇ ಸರಿ. ನಾವು ಬದುಕುತ್ತೇವೆ ಎಂದು ನಾವು ಅಂದುಕೊಂಡೇ ಇರಲಿಲ್ಲ. ಪೈಲಟ್ ಡಾಮಿರ್ ಯುಸುಪೋವ್ ಅವರು ನಮ್ಮೆಲ್ಲರ ಜೀವ ಉಳಿಸಿದ್ದಾರೆ. ಅವರಿಗೆ ನಾವೆಲ್ಲ ಋಣಿಯಾಗಿರುತ್ತೇವೆ" ಪ್ರಯಾಣಿಕರು ಧನ್ಯವಾದ ಕೋರಿದ್ದಾರೆ.











Click it and Unblock the Notifications