‘ವಿಜಯ ದಿವಸ’ಕ್ಕೂ ಮುನ್ನ ಶತ್ರುಗಳಿಗೆ ರಷ್ಯಾ ಮಾರಿಹಬ್ಬ?

ಮಾಸ್ಕೋ: ಶತ್ರುವಿನ ಹುಟ್ಟಡಗಿಸಲು ರಷ್ಯಾ ಸೇನೆ ಪಣತೊಟ್ಟಿದ್ದು, ರಷ್ಯಾ ಮೇಲಿನ ದಾಳಿಗೆ ಪ್ರತಿಕಾರ ಈಗ ಶುರುವಾಗಿದೆ. ಈ ಮೂಲಕ 'ವಿಜಯ ದಿವಸ'ಕ್ಕೂ ಮುನ್ನವೇ ಶತ್ರುಗಳಿಗೆ ರಷ್ಯಾ ಮಾರಿಹಬ್ಬ ಮಾಡುತ್ತಿದ್ದು, ರಷ್ಯಾ & ಉಕ್ರೇನ್ ಕದನ (Russia Ukraine War) ಮತ್ತಷ್ಟು ಉಗ್ರವಾಗಿದೆ. ತನ್ನಲ್ಲಿರುವ ಹತ್ಯಾರಗಳನ್ನೆಲ್ಲಾ ಉಕ್ರೇನ್ ಮೇಲೆ ಉಡಾಯಿಸುತ್ತಿದೆ ಪುಟಿನ್ ಪಡೆ.

ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದ ನಂತರ ಭಯ ಆವರಿಸಿಬಿಟ್ಟಿದೆ. ಅತ್ತ ಗಡಿ ಭಾಗದಲ್ಲಿ ಉಕ್ರೇನ್ ಕೂಡ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ನಡುವೆ ರಷ್ಯಾ ಒಳಗೇ ನುಗ್ಗಿ ಪುಟಿನ್ ಹತ್ಯೆಗೂ ಪ್ರಯತ್ನ ಪಟ್ಟಿದ್ದಾರೆ ಆಗಂತುಕರು. ಇನ್ನೊಂದ್ಕಡೆ 'ವಿಜಯ ದಿವಸ' ಆಚರಣೆ ವೇಳೆ ದಾಳಿ ನಡೆಯುವ ಭೀತಿ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ 'ವಿಜಯ ದಿವಸ' ಆಚರಣೆ ಕ್ಯಾನ್ಸಲ್ ಮಾಡಲು ರಷ್ಯಾ ಸೇನಾಧಿಕಾರಿಗಳು ಚಿಂತಿಸುತ್ತಿದ್ದರು. ಆದರೆ ಈಗ ಶತ್ರಗಳನ್ನ ಬಗ್ಗುಬಡಿದು, 'ವಿಜಯ ದಿವಸ'ದ ಸಂಭ್ರಮವನ್ನ ಡಬಲ್ ಮಾಡುತ್ತಿದೆ ರಷ್ಯಾ ಮಿಲಿಟರಿ.

Russian military

ಏನಿದು ರಷ್ಯಾ 'ವಿಜಯ ದಿವಸ'?

ಅದು 1945 ಮೇ 8, ನಾಜಿ ಜರ್ಮನಿ ಸಂಪೂರ್ಣ ನಾಶವಾಗಿ ರಷ್ಯಾ ಮುಂದೆ ಮಂಡಿ ಊರಿತ್ತು. ಸೋವಿಯತ್ ರಷ್ಯಾ ಹಿಟ್ಲರ್ ಸೇನೆ ಬಗ್ಗುಬಡಿದು ಸಂಭ್ರಮಿಸಿದ ದಿನವದು. ಹೀಗೆ ನಾಜಿ ಜರ್ಮನಿ ವಿರುದ್ಧ ದಿಗ್ವಿಜಯದ ನೆನಪಿಗೆ ವಿಜಯ ದಿವಸ ಆಚರಿಸುತ್ತದೆ ರಷ್ಯಾ. ಆದ್ರೆ ಈ ಬಾರಿ ವಿಜಯ ದಿವಸ ಆಚರಣೆಗೂ ಕಾರ್ಮೋಡ ಆವರಿಸಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಸರ್ಕಾರಿ ನಿವಾಸದ ಮೇಲೆ ಡ್ರೋನ್ ಮೂಲಕ ನಡೆಸಲಾಗಿರುವ ಬಾಂಬ್ ದಾಳಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿತ್ತು. ಇದೀಗ ಪರಿಸ್ಥಿತಿ ಉಕ್ರೇನ್‌ಗೆ ಉಲ್ಟಾ ಆಗಿಬಿಟ್ಟಿದೆ.

ಉಕ್ರೇನ್ ಮೇಲೆ ಯದ್ವಾತದ್ವ ಅಟ್ಯಾಕ್!

ಹೌದು, ಸುಮ್ಮನಿದ್ದ ರಷ್ಯಾ ಸೇನೆಯನ್ನು ಕೆಣಕಿ ಉಕ್ರೇನ್ ತಪ್ಪು ಮಾಡಿದಂತೆ ಕಾಣುತ್ತಿದೆ. ಇದೀಗ ಅದೇ ಕಾರಣಕ್ಕೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಹಿಗ್ಗಾಮುಗ್ಗಾ ದಾಳಿ ಆರಂಭಿಸಿದೆ. 50ಕ್ಕೂ ಹೆಚ್ಚು ಡ್ರೋನ್‌ಗಳು ಸೇರಿದಂತೆ, ಅಪಾರ ಸಂಖ್ಯೆಯ ಮಿಸೈಲ್‌ಗಳನ್ನ ಉಕ್ರೇನ್ ಕಡೆಗೆ ಉಡಾಯಿಸಿದೆ ರಷ್ಯಾ. ಈ ಮೂಲಕ ಮೇ 9ರ ವಿಜಯ ದಿವಸ ಆಚರಣೆಗೆ ಮತ್ತೆ ಸಿದ್ಧತೆಯಲ್ಲಿ ತೊಡಗಿದೆ. ಮತ್ತೊಂದ್ಕಡೆ ಉಕ್ರೇನ್ ಮಾತ್ರ ರಷ್ಯಾ ಸೇನೆ ನಡೆಸುತ್ತಿರುವ ದಾಳಿಯಿಂದ ಬೆಚ್ಚಿಬಿದ್ದಿದೆ.

ಪರಮಾಣು ಬಾಂಬ್ ಬಳಸುತ್ತಾ ರಷ್ಯಾ?

ಯಾವ ಕ್ಷಣದಲ್ಲೂ ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ಪರಮಾಣು ದಾಳಿ ನಡೆಸಬಹುದೆಂಬ ಭೀತಿ ಶುರುವಾಗಿದೆ. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಕೂಡ ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇಲ್ಲಿ ಪರಮಾಣು ಬಳಕೆ ಅಥವಾ ಅಪಘಾತದ ಬಗ್ಗೆ ಭೀತಿ ಆವರಿಸಿದ್ದು, ಎಚ್ಚರಿಕೆ ವಹಿಸುವಂತೆ ಮೆಸೇಜ್ ಕೊಟ್ಟಿದೆ. ಅದರಲ್ಲೂ ಉಕ್ರೇನ್‌ನ ಜಪೋರಿಝಿಯಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲೂ ವಾಸವಿದ್ದ ಜನರನ್ನ ರಷ್ಯಾ ಸೇನೆ ಅಲ್ಲಿಂದ ಖಾಲಿ ಮಾಡಿಸಿದ ಬಳಿಕ ನ್ಯೂಕ್ಲಿಯರ್ ದಾಳಿ ಭೀತಿ ಡಬಲ್ ಆಗಿದೆ.

Russian military

ಉಕ್ರೇನ್ ಭಯಕ್ಕೆ ಕಾರಣ ಏನು?

ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಸುತ್ತಮುತ್ತಲೂ ವಾಸ ಇರುವ ಜನರನ್ನ ಅಲ್ಲಿಂದ ಒಕ್ಕಲೆಬ್ಬಿಸುತ್ತಿದೆ ರಷ್ಯಾ ಸೇನೆ. ಈ ಮೂಲಕ ಭೀಕರ ಅಣು ಯುದ್ಧಕ್ಕೆ ರಷ್ಯಾ ಸೇನೆ ತಯಾರಿ ನಡೆಸಿತಾ? ಎಂಬ ಅನುಮಾನ ಮೂಡಿದೆ. ಸುಮಾರು 1 ವರ್ಷದಿಂದ ಜಪೋರಿಝಿಯಾ ಅಣುಸ್ಥಾವರ ರಷ್ಯಾ ಕಂಟ್ರೋಲ್‌ಗೆ ಬಂದಿದ್ದು, ಉಕ್ರೇನ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಈ ಅಣು ವಿದ್ಯುತ್ ಸ್ಥಾವರ ಬಳಸಿಕೊಳ್ಳಬಹುದು ಎಂಬ ಆರೋಪ ಕೇಳಿಬರುತ್ತಿದೆ. ಜನರು ಎದ್ದುಬಿದ್ದು ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ.

ತಂಟೆಗೆ ಬಂದವರಿಗೆ ತಕ್ಕ ಶಾಸ್ತಿ?

ರಷ್ಯಾ ಯಾರ ಸಹವಾಸಕ್ಕೂ ಹೋಗೋದಿಲ್ಲ ಆದ್ರೆ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಸಂದೇಶವನ್ನ ರಷ್ಯಾ ಸೇನೆ & ರಷ್ಯಾ ಅಧ್ಯಕ್ಷರು ಆಗಾಗ ನೀಡುತ್ತ ಬಂದಿದ್ದರು. ಉಕ್ರೇನ್ ನ್ಯಾಟೋ ಪಡೆ ಜೊತೆ ಕೈಜೋಡಿಸುತ್ತಿದೆ ಎಂಬ ಆರೋಪದ ಹಿನ್ನೆಲೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿತ್ತು. ಇದು ಮುಗಿದು ಶಾಂತಿ ಮಾತುಕತೆಯನ್ನ ನಡೆಸಬಹುದಿತ್ತು. ಆದರೂ ಉಕ್ರೇನ್ ಅಧ್ಯಕ್ಷರ ಎಡವಟ್ಟು ಪರಿಸ್ಥಿತಿಯನ್ನ ಕಠಿಣ ಮಾಡಿದೆ. ರಷ್ಯಾ ಇದೀಗ ತನ್ನ ಶತ್ರು ಉಕ್ರೇನ್ ನಾಶಕ್ಕೆ ಮೈಕೊಡವಿ ನಿಂತಂತೆ ಕಾಣುತ್ತಿದೆ.

ಇರುವೆಯಂತೆ ನಿಂತ ಕಾರುಗಳ ಸಾಲು!

ರಷ್ಯಾ ಸೇನೆ ಎಚ್ಚರಿಕೆ ನೀಡಿದ ಬಳಿಕ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಸುತ್ತಮುತ್ತ ಜನ ಜೀವ ಭಯದಲ್ಲೇ ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಇಲ್ಲಿನ 18 ಪಟ್ಟಣಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದ್ದು, ಈ ಪ್ರದೇಶದಿಂದ ಜನರನ್ನ ಖಾಲಿ ಮಾಡಿಸುತ್ತಿದೆ. ಇಲ್ಲಿಂದ ಜನ ಹೇಗೆ ಮನೆ ಖಾಲಿ ಮಾಡಿ ಹೋಗುತ್ತಿದ್ದಾರೆ ಅಂದ್ರೆ ರಸ್ತೆಗಳಲ್ಲಿ ಕಾರುಗಳು ಇರುವೆಯಂತೆ ಸಾಲಾಗಿ ನಿಂತಿವೆ. ಸುಮಾರು 5 ಗಂಟೆಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿದ್ದವು ಎಂದು ಉಕ್ರೇನ್ ಮೇಯರ್ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷರ ಜೀವ ಅಪಾಯದಲ್ಲಿ?

ಮೊನ್ನೆ ಮೊನ್ನೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಕ್ರೆಮ್ಲಿನ್ ನಿವಾಸದ ಮೇಲೆ ನಡೆದಿರುವ ದಾಳಿ ಎಂತಹವರನ್ನೂ ಬೆಚ್ಚಿ ಬೀಳುವಂತೆ ಮಾಡುತ್ತದೆ. ಎಲ್ಲಾ ಭದ್ರತೆ ಸೀಳಿ, ಒಳ ನುಸುಳಿದ 2 ಡ್ರೋನ್‌ಗಳು ಪುಟಿನ್ ನಿವಾಸದ ಮೇಲೆ ಆ ರೀತಿ ಭೀಕರ ದಾಳಿ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ಪ್ರಶ್ನೆಗಳು ರಷ್ಯಾ ಸೇನೆ ಮತ್ತು ರಷ್ಯನ್ನರ ಕಾಡಿವೆ. ಮತ್ತೊಂದು ಕಡೆ 'ವಿಜಯ ದಿವಸ' ಆಚರಣೆ ರದ್ದು ಮಾಡುವ ಬಗ್ಗೆ ಇಂದೇ ಅಂತಿಮ ನಿರ್ಧಾರ ಹೊರಬೀಳುತ್ತೆ ಎನ್ನಲಾಗಿದೆ. ಹಾಗೇ ರಷ್ಯಾ ಸೇನೆ ರಾಜಧಾನಿ ಮಾಸ್ಕೋ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಒಟ್ನಲ್ಲಿ ರಷ್ಯಾ-ಉಕ್ರೇನ್ ಯುದ್ಧ ಈಗ ಮತ್ತಷ್ಟು ಭೀಕರವಾಗಿದೆ. ನಾಳೆ ಅಂದರೆ ಮೇ 9ರಂದು ರಷ್ಯಾದಲ್ಲಿ ವಿಜಯ ದಿವಸ ಆಚರಣೆ ನಡೆಯಲಿದೆ. ಅಕಸ್ಮಾತ್ ಇಲ್ಲಿ ದಾಳಿ ನಡೆದರೆ ಪರಿಸ್ಥಿತಿ ಇನ್ನಷ್ಟು ಕೈಮೀರುವುದು ಪಕ್ಕಾ. ಹೀಗಾಗಿ ರಷ್ಯಾದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಪುಟಿನ್ ಕೂಡ ವಿಜಯ ದಿವಸದ ಆಚರಣೆಗೆ ಸಕಲ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಗೆದ್ದಿದ್ದು ಮೇ 8, ಆಚರಣೆ ಮೇ 9ಕ್ಕೆ!

ಅಂದಹಾಗೆ, ಹಿಟ್ಲರ್‌ನ ಜರ್ಮನಿ ಸೇನೆ ವಿರುದ್ಧ ರಷ್ಯಾ ಸೇನೆ ಐತಿಹಾಸಿಕ ಜಯ ಸಾಧಿಸಿದ್ದು 1945ರ ಮೇ 8ರಂದು. ಆದ್ರೆ ರಷ್ಯಾದಲ್ಲಿ ಆಚರಣೆ ನಡೆಯುವುದು ಮೇ 9ಕ್ಕೆ! ಇದಕ್ಕೆ ಕಾರಣ ರಷ್ಯಾದ ಟೈಂ. ಅಂದಹಾಗೆ ನಾಜಿ ಜರ್ಮನಿ ರಷ್ಯಾ ಎದುರು ಶರಣಾಗಿ ಮಂಡಿಯೂರಿದ ಸಮಯ ಮೇ 8, ಆದರೆ ಅದೇ ಹೊತ್ತಲ್ಲಿ ರಷ್ಯಾ ಟೈಮಿಂಗ್ಸ್ ಮೇ 9ನ್ನು ತಲುಪಿತ್ತು. ಈ ಕಾರಣಕ್ಕೆ ರಷ್ಯಾದಲ್ಲಿ ನಾಜಿ ಜರ್ಮನಿ ವಿರುದ್ಧದ ಗೆಲುವಿನ 'ವಿಜಯ ದಿವಸ' ಆಚರಣೆ ಮೇ 9ಕ್ಕೆ ನಡೆಯುತ್ತಾ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+