ಉಕ್ರೇನ್‌ನ ಐದು ಊರುಗಳ ಮೇಲೆ ರಷ್ಯಾ ಹಿಡಿತ: ಅಮೆರಿಕದಿಂದ ಸಿಗುತ್ತಿಲ್ಲ ಶಸ್ತ್ರಾಸ್ತ್ರ
ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ.. ರಷ್ಯಾ ಹಲವು ಲೆಕ್ಕಾಚಾರ ಹಾಕಿಕೊಂಡು ಉಕ್ರೇನ್ ನ್ನು ಮಣಿಸಿ ಬೀಗುವ ಕನಸು ಹೊಂದಿದೆ. ಅದರಂತೆ ಉಕ್ರೇನ್ ಮೇಲೆ ಸತತ ದಾಳಿಯನ್ನು ನಡೆಸುತ್ತಿದೆ.
ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಈಗ ರಷ್ಯಾದ ರಕ್ಷಣಾ ಸಚಿವಾಲಯವು ಈಶಾನ್ಯ ಉಕ್ರೇನ್‌ನ ಐದು ಹಳ್ಳಿಗಳ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ನಿಯಂತ್ರಣ ಸಾಧಿಸಿದೆ ಎಂದು ಹೇಳಿಕೊಂಡಿದೆ. ಪ್ರಸ್ತುತ ಪರಿಸ್ಥಿತಿಯಿಂದ, ಅಮೇರಿಕನ್ ಶಸ್ತ್ರಾಸ್ತ್ರಗಳು ಉಕ್ರೇನ್‌ಗೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ. ಉಕ್ರೇನಿಯನ್ ಪತ್ರಕರ್ತರ ಪಡೆದ ಮಾಹಿತಿಯ ಪ್ರಕಾರ, ರಷ್ಯಾದ ಪಡೆಗಳು ಬೋರಿಸಿವ್ಕಾ, ಓಹ್ರಿಟ್ಸೆವ್, ಪಿಲ್ನಾ ಮತ್ತು ಸ್ಟ್ರೈಲೆಚಾ ಗ್ರಾಮಗಳನ್ನು ವಶಪಡಿಸಿಕೊಂಡಿವೆ ಮತ್ತು ಈ ಎಲ್ಲಾ ಹಳ್ಳಿಗಳು ಉಕ್ರೇನ್‌ನ ಖಾರ್ಕಿವ್ ಪ್ರದೇಶದಲ್ಲಿವೆ. ಮತ್ತು ರಷ್ಯಾ ನಿರಂತರವಾಗಿ ಯುದ್ಧದಲ್ಲಿ ಮೇಲುಗೈ ಸಾಧಿಸುತ್ತಿದೆ ಎಂದು ತೋರುತ್ತದೆ.

ರಷ್ಯಾದ ಪಡೆಗಳು ವೊವ್ಚಾನ್ಸ್ಕ್ ನಗರದ ಕಡೆಗೆ ಕನಿಷ್ಠ ಒಂದು ಕಿಲೋಮೀಟರ್ ಮುಂದುವರೆದಿವೆ ಎಂದು ಉಕ್ರೇನಿಯನ್ ಮಾಧ್ಯಮಗಳು ವರದಿ ಮಾಡಿದೆ. ರಷ್ಯಾ 10 ಕಿಮೀ ಒಳಗೆ ಬಫರ್ ವಲಯವನ್ನು ರಚಿಸಿದೆ, ಇದರಿಂದಾಗಿ ಯುದ್ಧದ ಸಮಯದಲ್ಲಿ ರಷ್ಯಾದ ಪ್ರದೇಶಗಳನ್ನು ಸುರಕ್ಷಿತವಾಗಿರಿಸಬಹುದು. ವೊವ್ಚಾನ್ಸ್ಕ್ ನಗರದಿಂದ 75 ಕಿಮೀ ದೂರದಲ್ಲಿರುವ ಕ್ರಾಸ್ನೆ ಗ್ರಾಮಕ್ಕೆ ಸೇನೆಯು 5 ಕಿ.ಮೀ ಮುಂದುವರಿದಿದೆ ಎಂದು ಇನ್ನೊಂದು ಮೂಲ ತಿಳಿಸಿದೆ.
ರಷ್ಯಾದ ಮಿಲಿಟರಿ ಅಧಿಕಾರಿಗಳು ಪ್ರಾಂತ್ಯದ ಮೇಲಿನ ಇತ್ತೀಚಿನ ಆಕ್ರಮಣದಲ್ಲಿ ಪ್ಲೆಟೆನಿವ್ಕಾ ಎಂಬ ಮತ್ತೊಂದು ಗ್ರಾಮವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಷ್ಯಾದ ಪಡೆಗಳ ದಾಳಿಯಿಂದಾಗಿ ಸುಮಾರು 1,700 ಕ್ಕೂ ಹೆಚ್ಚು ನಾಗರಿಕರು ಪಲಾಯಾನ ಮಾಡಬೇಕಾಯಿತು ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಗಳ ನೇರ ಪರಿಣಾಮ ಸಾಮಾನ್ಯ ಜನರ ಮೇಲೆ ಬಿದ್ದಿದೆ. ರಷ್ಯಾದಿಂದ ನಿರಂತರವಾಗಿ ದಾಳಿಗಳು ನಡೆಯುತ್ತಿವೆ.

ದಾಳಿಯ ಸುಳಿವು ಇತ್ತು
ಖಾರ್ಕಿವ್ ಮತ್ತು ಸುಮಿ ಪ್ರದೇಶಗಳ ಬಳಿ ತನ್ನ ಈಶಾನ್ಯ ಗಡಿಯಲ್ಲಿ ರಷ್ಯಾ ಸಾವಿರಾರು ಸೈನಿಕರನ್ನು ಒಟ್ಟುಗೂಡಿಸುತ್ತಿದೆ ಎಂದು ಉಕ್ರೇನ್ ಹಿಂದೆ ಹೇಳಿತ್ತು. ಕ್ರೆಮ್ಲಿನ್ ಪಡೆಗಳು ಪೂರ್ವ ಉಕ್ರೇನ್‌ನಲ್ಲಿ ಇತ್ತೀಚೆಗೆ ದಾಳಿಯನ್ನು ಪ್ರಾರಂಭಿಸಿದವು ಎಂದು ಉಕ್ರೇನಿಯನ್ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಕ್ರೆಮ್ಲಿನ್ ಪಡೆಗಳು ಈಶಾನ್ಯದಲ್ಲಿಯೂ ದಾಳಿ ಮಾಡಬಹುದೆಂದು ಅವರು ನಿರೀಕ್ಷಿಸುತ್ತಾರೆ.
ಉಕ್ರೇನ್ ಕೂಡ ದಾಳಿ ಮಾಡಿದೆ
ಶನಿವಾರ ರಾತ್ರಿ ಉಕ್ರೇನಿಯನ್ ಪಡೆಗಳು ಡ್ರೋನ್ ಮತ್ತು ಕ್ಷಿಪಣಿಗಳೊಂದಿಗೆ ದಾಳಿ ನಡೆಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಬೆಲ್ಗೊರೊಡ್, ಕುರ್ಸ್ಕ್ ಮತ್ತು ವೋಲ್ಗೊಗ್ರಾಡ್ ಪ್ರಾಂತ್ಯಗಳಲ್ಲಿ ಹಾರಿಸಲಾದ 21 ರಾಕೆಟ್‌ಗಳು ಮತ್ತು 16 ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಯು ನಾಶಪಡಿಸಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications