Russia & Ukraine War: ರಷ್ಯಾ ಸೇನೆಯ ಭೀಕರ ದಾಳಿಯಲ್ಲಿ 22 ಜನ...

ಒಡೆಸಾ: ಉಕ್ರೇನ್‌ನ ಕರವಾಳಿ ನಗರಗಳ ಮೇಲೆ ರಷ್ಯಾ ಭೀಕರ ದಾಳಿ ಮುಂದುವರಿಸಿದ್ದು, ಕಣ್ಣಿಗೆ ಕಾಣಿಸಿದ ಜಾಗಗಳನ್ನು ಪುಡಿ ಪುಡಿ ಮಾಡುತ್ತಿದೆ. ಅದರಲ್ಲೂ ಉಕ್ರೇನಿನ ಕಪ್ಪು ಸಮುದ್ರದ ಕರಾವಳಿ ಒಡೆಸಾ ಮೇಲೆ ಕ್ಷಿಪಣಿಗಳ ಮಳೆ ಸುರಿಸಲಾಗಿದೆ. ಹೀಗೆ ಬೆಳ್ಳಂಬೆಳಗ್ಗೆ ಬಿದ್ದ ರಷ್ಯಾ ಸೇನೆಯ ಮಿಸೈಲ್‌ಗಳಿಂದ ಘೋರ ದುರಂತ ಕೂಡ ಸಂಭವಿಸಿಬಿಟ್ಟಿದೆ.

ಕಳೆದ ಕೆಲ ದಿನಗಳಿಂದ ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗ್ತಿದೆ. ರಷ್ಯಾ ಇದೇ ನಗರವನ್ನ ಟಾರ್ಗೆಟ್ ಮಾಡಿದ್ದು, ಉಕ್ರೇನ್‌ನಿಂದ ಕಪ್ಪು ಸಮುದ್ರದ ಮಾರ್ಗವಾಗಿ ಹಡುಗುಗಳ ಮೂಲಕವೇ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಸೇರಿ ಏಷ್ಯಾ ದೇಶಗಳಿಗೆ ಆಹಾರ ಧಾನ್ಯ ಸಾಗಾಟ ಇಲ್ಲಿಂದ ನಡೆಯುತ್ತಾ ಬಂದಿದೆ. ಆದರೆ ಎರಡೂ ದೇಶಗಳ ನಡುವೆ ಒಪ್ಪಂದ ರದ್ದುಗೊಂಡ ಬೆನ್ನಲ್ಲೇ ರಷ್ಯಾ ಈ ರೀತಿ ದಾಳಿ ಆರಂಭಿಸಿದೆ. ಉಕ್ರೇನ್‌ನ ಪ್ರತಿಯೊಂದು ಪೋರ್ಟ್‌ ಪುಡಿ ಪುಡಿ ಮಾಡಿದೆ ರಷ್ಯಾ. ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಒಬ್ಬರು ಮೃತಪಟ್ಟು, 22 ಜನ ಗಾಯಗೊಂಡಿದ್ದಾರೆ.

Russian forces continue attack on Ukraine harbors

ಐತಿಹಾಸಿಕ ಸ್ಮಾರಕಗಳು ಕೂಡ ಉಡೀಸ್!

ತನ್ನ ಶತ್ರು ರಾಷ್ಟ್ರವನ್ನು ಹಣಿಯಬೇಕು ಅನ್ನೋದು ಮಾತ್ರ ರಷ್ಯಾದ ಈಗಿನ ಒನ್‌ಲೈನ್ ಅಜೆಂಡಾ. ಹೀಗಾಗಿ ಮನಸ್ಸಿಗೆ ಬಂದಂತೆ ಉಕ್ರೇನ್ ಮೇಲೆ ದಾಳಿ ಮಾಡ್ತಿದೆ ರಷ್ಯಾ ಸೇನೆ. ಇದೇ ರೀತಿ ದಾಳಿ ನಡೆಸುವಾಗ ಐತಿಹಾಸಿಕ ಟ್ರಾನ್ಸ್‌ಫಿಗರೇಷನ್‌ ಕ್ಯಾಥೆಡ್ರಲ್‌ ಸೇರಿ ಹಲವಾರು ಸ್ಮಾರಕಗಳು ಹಾನಿಗೊಳಗಾಗಿವೆ ಎನ್ನಲಾಗಿದೆ. ಜೊತೆಗೆ ಆರು ವಸತಿ ಕಟ್ಟಡಗಳ ಮೇಲೆ ದಾಳಿ ನಡೆದಿದೆ. ಕೆಲವರು ಅಪಾರ್ಟ್‌ಮೆಂಟ್‌ ಒಳಗೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಕೂಡ ಭರದಿಂದ ಸಾಗಿದೆ. ಆದರೆ ರಷ್ಯಾ ಮಾತ್ರ ತನ್ನ ದಾಳಿಯನ್ನು ನಿಲ್ಲಿಸಲು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಾ ಸಾಗಿದೆ.

ಬೆಲಾರಸ್ ಪರ ನಿಂತ ರಷ್ಯಾ ಅಧ್ಯಕ್ಷರು

ಭೀಕರ ಯುದ್ಧಕ್ಕೆ ರಷ್ಯಾ ಈಗಾಗಲೇ ಅದೆಷ್ಟು ತಯಾರಿ ನಡೆಸಿದೆ ಅಂದ್ರೆ, ಬೆಲಾರಸ್ ಗಡಿ ಭಾಗದಲ್ಲಿ ತನ್ನ ಪರಮಾಣು ಅಸ್ತ್ರಗಳನ್ನ ಸಿದ್ಧವಾಗಿ ನಿಲ್ಲಿಸಿದೆ ರಷ್ಯಾ. ಈ ಕಾರಣಕ್ಕೆ ಈಗ ಯುರೋಪ್ ಒಕ್ಕೂಟಕ್ಕೆ ಆತಂಕ ಬಂದಿದೆ. ಅದ್ರಲ್ಲೂ ರಷ್ಯಾ ಶತ್ರುಗಳು ನಡುಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೋಲ್ಯಾಂಡ್ ಕೂಡ ತಿರುಗಿಬಿದ್ದಿದ್ದು, ತನ್ನ ಗಡಿಯ ಸಮೀಪದಲ್ಲೇ ಇರುವ ಬೆಲಾರಸ್ ಗಡಿಗೆ ಸೇನೆ ಕಳುಹಿಸುತ್ತಿದೆ ಎನ್ನಲಾಗಿದೆ. ಆದರೆ ಇದರಿಂದ ಬೆಲಾರಸ್ ಭಯಗೊಂಡಿದ್ದು, ರಷ್ಯಾ ಖಡಕ್ ರಿಯಾಕ್ಷನ್ ಕೊಟ್ಟಿದೆ. ಅಕಸ್ಮಾತ್ ಬೆಲಾರಸ್‌ನ ತಂಟೆಗೆ ಹೋದರೆ ನಮ್ಮಿಂದ ಉತ್ತರ ಸಿಗಲಿದೆ ಎಂದಿದೆ ರಷ್ಯಾ.

ಯುದ್ಧದ ಪರಿಸ್ಥಿತಿ ಮುಂದೆ ಏನಾಗಬಹುದು?

ಉಕ್ರೇನ್ ಹಾಗೂ ರಷ್ಯಾ ನಡುವಿನ ಜಗಳ ಸಣ್ಣದಾಗಿ ಆರಂಭವಾಗಿ ಈಗ ದೊಡ್ಡದಾಗಿದೆ. 1ನೇ ಮಹಾಯುದ್ಧ & 2ನೇ ಮಹಾಯುದ್ಧ ಶುರುವಾಗಿದ್ದು ಕೂಡ ಹೀಗೆ. ಆದರೆ ಈ ಎರಡೂ ಯುದ್ಧಗಳಲ್ಲಿ ಕೋಟಿ ಕೋಟಿ ಜನರು ಪ್ರಾಣಬಿಟ್ಟರು. 2ನೇ ಮಹಾಯುದ್ಧ ವಿನಾಶದಲ್ಲೇ ಅತಿ ವಿನಾಶಕ ಎನಿಸಿಕೊಂಡಿತು. ಹೀಗಾಗಿ ಮುಂದೆ ಮತ್ತೆಂದೂ ಮಹಾಯುದ್ಧ ನಡೆಯಲ್ಲ ಎಂಬ ನಂಬಿಕೆ ಇರುವಾಗಲೇ, ಸಣ್ಣ ಜಗಳವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಭೀಕರವಾಗುತ್ತಿದೆ. ಅದರಲ್ಲೂ ಒಂದು ಕಡೆ ಪಾಶ್ಚಿಮಾತ್ಯರು ಹಾಗೇ ಇನ್ನೊಂದು ಕಡೆ ರಷ್ಯಾ ನಡುವೆ ಘನಘೋರ ಕಾಳಗ ಸದ್ದೇ ಇಲ್ಲದೆ ಶುರುವಾಗಿಬಿಟ್ಟಿದೆ.

Russian forces continue attack on Ukraine harbors

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ರಷ್ಯಾ ಹಾಗೂ ಉಕ್ರೇನ್ ಜಗಳ ನಿಧಾನವಾಗಿ ಮೂರನೇ ಮಹಾಯುದ್ಧದ ಕಡೆ ತಿರುಗುತ್ತಿರುವ ರೀತಿ ಕಾಣುತ್ತಿದೆ. ಅದರಲ್ಲೂ ರಷ್ಯಾ ತನ್ನ ಖಾಸಗಿ ಸೇನೆ ಬಂಡಾಯದ ಬಳಿಕ ಮೈಕೊಡವಿ ನಿಂತಿದೆ. ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಾ ಉಕ್ರೇನ್‌ಗೆ ಎಚ್ಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಉಕ್ರೇನ್ ಕೂಡ ಪ್ರತಿದಾಳಿ ನಡೆಸುತ್ತಾ, ತನ್ನ ತಾಕತ್ತು ತೋರಿಸುತ್ತಿದೆ. ಆದ್ರೆ ಅಮಾಯಕರು ಮಾತ್ರ ಜೀವ ಕಳೆದುಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+