3ನೇ ಮಹಾಯುದ್ಧ: ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕಿದ ಉಕ್ರೇನ್?
ಮಾಸ್ಕೋ: ಪಾಶ್ಚಿಮಾತ್ಯ ದೇಶಗಳ ಯುದ್ಧ ದಾಹ ಹಾಗೂ ರಷ್ಯಾದ ಸಿಟ್ಟು ಉಕ್ರೇನ್ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಮತ್ತೊಂದ್ಕಡೆ ಉಕ್ರೇನ್ ತನ್ನ ಸೇಡಿನ ಪರ್ವ ಮುಂದುವರಿಸಿದೆ. ಇಷ್ಟುದಿನ ರಷ್ಯಾದ ಗಡಿ ಭಾಗದ ಹಳ್ಳಿಗಳ ಮೇಲೆ ದಾಳಿ ನಡೆಸುತ್ತಿದ್ದ ಉಕ್ರೇನ್, ನೇರ ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕಿದೆ ಎಂಬ ಆರೋಪ ಕೇಳಿಬಂದಿದ್ದು, 3ನೇ ಮಹಾಯುದ್ಧದ ಆತಂಕ ಇನ್ನಷ್ಟು ಹೆಚ್ಚಾಗಿದೆ.
ರಷ್ಯಾ ರಾಜಧಾನಿ ಮಾಸ್ಕೋಗೆ ನುಗ್ಗಿದ ಡ್ರೋನ್ ಒಂದು ನೇರವಾಗಿ ಹಲವು ಕಟ್ಟಡಗಳ ಮೇಲೆ ದಾಳಿ ನಡೆಸಿದೆ. ಸೇನಾ ವಿಚಾರದಲ್ಲಿ ಸಾಕಷ್ಟು ಪವರ್ ಫುಲ್ ಆಗಿರುವ ರಷ್ಯಾ ರಾಜಧಾನಿ ಮಾಸ್ಕೋಗೆ ಈ ರೀತಿ ಡ್ರೋನ್ ನುಗ್ಗಿರುವುದು 2ನೇ ಬಾರಿ. ಕೆಲ ದಿನದ ಹಿಂದಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೂ ದಾಳಿ ನಡೆದಿತ್ತು. ಹೀಗೆ ಮಾಸ್ಕೋ ಮೇಲೆ ಪದೇ ಪದೆ ಮೇಲೆ ದಾಳಿ ನಡೆದಿರುವುದು ರಷ್ಯಾ ಕೋಪ ಡಬಲ್ ಮಾಡಿದೆ. ಮೊದಲೇ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿಗೆ ಇದು ಇನ್ನಷ್ಟು ಕಿಚ್ಚು ಹಚ್ಚಿದಂತಾಗಿದೆ. ಅದರಲ್ಲೂ ಉಕ್ರೇನ್ ಸೇನೆಯೇ ಇದನ್ನ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.

ಮಾಸ್ಕೋ ಕಟ್ಟಡಗಳಿಗೆ ಹಾನಿ, ಜೀವಕ್ಕೆ?
ಹೌದು, ನೆಮ್ಮದಿಯಾಗಿದ್ದ ಮಾಸ್ಕೋ ವಾತಾವರಣಕ್ಕೆ ದಿಢೀರ್ ಎಂಟ್ರಿಕೊಟ್ಟ ಡ್ರೋನ್ ಮನಸೋಯಿಚ್ಛೆ ಬಾಂಬ್‌ನ ಹಾಕಿದೆ. ಈ ವೇಳೆ ಭಯಗೊಂಡು ಜನರು ಕೂಡ ಓಡಿ ಹೋಗಿದ್ದಾರೆ. ಮತ್ತೊಂದ್ಕಡೆ ಈ ಡ್ರೋನ್ ಉಕ್ರೇನ್ ಸೇನೆಯದ್ದೇ ಅನ್ನೋ ಗಂಭೀರ ಆರೋಪ ಕೇಳಿಬರುತ್ತಿದೆ. ಕೂಡಲೇ ಅಲರ್ಟ್ ಆದ ರಷ್ಯಾ ಸೇನೆ, ಮಾಸ್ಕೋ ಒಳಗೆ ನುಗ್ಗಿದ್ದ ಡ್ರೋನ್ ನಾಶ ಮಾಡಿದೆ. ಈ ಬಗ್ಗೆ ತನಿಖೆ ಕೂಡ ಶುರುವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಹೀಗಾಗಿ ಉಕ್ರೇನ್ ವಿರುದ್ಧ ಇನ್ನಷ್ಟು ಭೀಕರ ದಾಳಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಉಕ್ರೇನ್ ಕೂಡ ರಷ್ಯಾದ ದಾಳಿ ಎದುರಿಸಲು ಸಿದ್ಧತೆ ನಡೆಸಿದೆ.
ನಿನ್ನೆ 59 ಕ್ಷಿಪಣಿ ಹಾರಿಸಿದ್ದ ರಷ್ಯಾ
ರಷ್ಯಾ & ಉಕ್ರೇನ್ ಯುದ್ಧ ಹತ್ತಾರು ವರ್ಷ ಮುಂದುವರಿದು ಲಕ್ಷಾಂತರ ಜನರನ್ನ ಬಲಿ ಪಡೆಯುವ ಮುನ್ಸೂಚನೆ ಸಿಕ್ಕಿದೆ. ಸಂಧಾನಕ್ಕೆ ರಷ್ಯಾ ಆಗಲಿ, ಉಕ್ರೇನ್ ಆಗಲಿ ಸಿದ್ಧವಿಲ್ಲ. ಹೀಗೆ ಎರಡೂ ದೇಶಗಳು ಜಿದ್ದಿಗೆ ಬಿದ್ದು ಬಡಿದಾಟ ಶುರುಮಾಡಿವೆ. ಇದೆಲ್ಲವನ್ನ ನೋಡ್ತಿದ್ರೆ ಭವಿಷ್ಯದಲ್ಲಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಪರಮಾಣು ಕ್ಷಿಪಣಿಗಳನ್ನ ಬಳಸಿದ್ರೂ ಅಚ್ಚರಿ ಇಲ್ಲ. ನಿನ್ನೆ ತಾನೆ ದಿಢೀರ್ 59 ಕ್ಷಿಪಣಿ ಹಾರಿಸಿ ರಷ್ಯಾ ಮಿಲಿಟರಿ ಉಕ್ರೇನ್‌ಗೆ ಶಾಕ್ ನೀಡಿದೆ, ಇದೀಗ ರಷ್ಯಾ ರಾಜಧಾನಿಗೆ ಡ್ರೋನ್ ನುಗ್ಗಿದ್ದು ಯುದ್ಧಕ್ಕೆ (Russia Ukraine War) ದೊಡ್ಡ ತಿರುವು ನೀಡಿದೆ.
59 ಕ್ಷಿಪಣಿಯಲ್ಲಿ 58 ಆಕಾಶದಲ್ಲೇ ಉಡೀಸ್!
ರಷ್ಯಾ ಬಳಿ ಸಾಕಷ್ಟು ರಹಸ್ಯ ಅಸ್ತ್ರ ಇವೆ, ಅದರಲ್ಲೂ ರಷ್ಯಾ ತನ್ನಲ್ಲಿ ಸಾವಿರಾರು ರಹಸ್ಯ ಕ್ಷಿಪಣಿಗಳನ್ನ (Russia Secret Weapons) ಇಟ್ಟುಕೊಂಡಿದೆ. ಇದೀಗ ಅವನ್ನೆಲ್ಲಾ ಹೊರತೆಗೆದು, ತನ್ನ ಶತ್ರು ದೇಶದ ಕಡೆ ನುಗ್ಗಿಸುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಕ್ಷಿಪಣಿಗಳು ನಿನ್ನೆ ಉಕ್ರೇನ್ ಕಡೆ ನುಗ್ಗಿಬಂದಿವೆ. ಈ ಪೈಕಿ 58 ಕ್ಷಿಪಣಿಗಳನ್ನ ಆಕಾಶದಲ್ಲೇ ಭಸ್ಮ ಮಾಡಿದ್ದೀವಿ ಅಂತಿದೆ ಉಕ್ರೇನ್ ಸೇನೆ. ಈ ಘಟನೆ ನಡೆದು ಒಂದು ದಿನ ಕಳೆಯುವ ಒಳಗೆ ಉಕ್ರೇನ್ ಸೇನೆಯದ್ದು ಎಂದು ಆರೋಪ ಮಾಡಲಾಗುತ್ತಿರುವ ಡ್ರೋನ್ ರಷ್ಯಾ ರಾಜಧಾನಿಗೆ ನುಗ್ಗಿದೆ.

ಇದನ್ನೆಲ್ಲಾ ನೋಡುತ್ತಿದ್ರೆ ಈ ಯುದ್ಧ ಇಷ್ಟಕ್ಕೇ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅತ್ತ ಅಮೆರಿಕ ಸೇನೆ ಉಕ್ರೇನ್‌ಗೆ ಪರೋಕ್ಷ ಬೆಂಬಲ ನೀಡುತ್ತಾ ಆಟ ಆಡುತ್ತಿದೆ. ಇತ್ತ ರಷ್ಯಾ ತನ್ನ ಸೇಡು ತೀರಿಸಿಕೊಳ್ಳಲು ಪಣತೊಟ್ಟು ನಿಂತಿದೆ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಕೂಡ ನಡೆಯುವ ಸಾಧ್ಯತೆ ಇಲ್ಲ. ಹೀಗೆ ಕಗ್ಗಂಟಾಗಿರುವ ಪರಿಸ್ಥಿತಿಯಲ್ಲಿ ಒಬ್ಬರ ಮೇಲೆ ಒಬ್ಬರು ಬಾಂಬ್ ಹಾಕಿಕೊಳ್ಳುತ್ತಾ ಸಾಯುತ್ತಿರುವುದು ವಿಪರ್ಯಾಸವೇ ಸರಿ.












Click it and Unblock the Notifications