Russia vs Ukraine War: ರೊಚ್ಚಿಗೆದ್ದು ರಷ್ಯಾದ ಮೇಲೆ ಡ್ರೋನ್‌ ಸುರಿಮಳೆ ಸುರಿಸಿದ ಉಕ್ರೇನ್‌!

Russia vs Ukraine War: ರಷ್ಯಾ ಹಾಗೂ ಉಕ್ರೇನ್‌ನ ನಡುವಿನ ಯುದ್ಧ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ ಬದಲಾಗಿ, ಈ ಯುದ್ಧ ಇನ್ನಷ್ಟು ಬಿಗಡಾಯಿಸುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧವನ್ನು ನಿಲ್ಲಿಸುವ ಬಗ್ಗೆ ಹಾಗೂ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೆ ಈ ವಿಚಾರವಾಗಿ ಚರ್ಚೆ ಮಾಡುವುದಕ್ಕೆ ನಾವು ಸಿದ್ಧ ಎಂದು ನೆನ್ನೆಯಷ್ಟೇ ಹೇಳಿದ್ದರು. ಇದರಿಂದ ವಿಶ್ವದ ವಿವಿಧ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಯುದ್ಧ ನಿಂತು ಶಾಂತಿ ನೆಲೆಸಲಿದೆ ಎಂದು ನಿರೀಕ್ಷೆ ಮಾಡಿದ್ದವು. ಆದರೆ, ಆ ನಿರೀಕ್ಷೆಗಳು ತಲೆಕೆಳಗಾಗಿವೆ. ರಷ್ಯಾದ ಆಯಿಲ್‌ ಟ್ಯಾಂಕ್‌ (ಇಂಧನ ಶೇಖರಿಸಿ ಇರಿಸುವ ಜಾಗ)ಗಳ ಮೇಲೆ ಉಕ್ರೇನ್‌ ಭಾನುವಾರ ಏಕಾಏಕಿ ಡ್ರೋನ್‌ಗಳ ಸುರಿಮಳೆಯನ್ನೇ ಸುರಿಸಿದೆ. ಇದರಿಂದ ಯುದ್ಧದ ಕಾವು ಇದೀಗ ಇನ್ನಷ್ಟು ಹೆಚ್ಚಾಗಿದೆ. ಇನ್ನು ಒಂದೇ ವಾರದಲ್ಲಿ ಮಾಡಲಾಗಿರುವ ಎರಡನೇ ದಾಳಿ ಇದಾಗಿದೆ.

ಆ ರೀತಿ ನೋಡಿದರೆ ರಷ್ಯಾ ಹಾಗೂ ಉಕ್ರೇನ್‌ನ ಯುದ್ಧವು ಈ ಹಿಂದೆಯೇ ಮುಕ್ತಾಯವಾಗಬೇಕಿತ್ತು. ಈ ಯುದ್ಧದಲ್ಲಿ ಎರಡೂ ರಾಷ್ಟ್ರಗಳು ಕೈಸುಟ್ಟುಕೊಂಡಿವೆ. ಆರ್ಥಿಕವಾಗಿ ಜರ್ಭರಿತವಾಗಿವೆ. ಸಾವಿರಾರು ಸೈನಿಕರು ಹಾಗೂ ನೂರಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಉಕ್ರೇನ್‌ ನ್ಯಾಟೋಗೆ ಸೇರುವ ಪ್ರಕ್ರಿಯೆಯನ್ನು ಬಿಡಬೇಕು ಎಂದು ಈಗಲೂ ರಷ್ಯಾ ಆಗ್ರಹಿಸುತ್ತಿದೆ. ಇನ್ನು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಾನು ಅಧಿಕಾರಕ್ಕೆ ಬಂದ ಮೊದಲ ದಿನವೇ ಯುದ್ಧ ನಿಲ್ಲಿಸುತ್ತೇನೆ ಎಂದಿದ್ದರು. ಆದರೆ, ಯುದ್ಧ ನಿಲ್ಲಿಸುವುದಕ್ಕೆ ಬೇಕಾದ ಪೂರ್ವ ಸಿದ್ಧತೆ ಅಥವಾ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ಇಲ್ಲಿಯವರೆಗೆ ಹಂಚಿಕೊಂಡಿಲ್ಲ ಎಂದು ಹೇಳಲಾಗಿದೆ.

Russia vs Ukraine War Ukraine rained down drones on Russia

ಈ ರೀತಿ ಇರುವಾಗಲೇ ರಷ್ಯಾದ ಪ್ರಮುಖ ಪೆಟ್ರೋಲ್‌ ಹಾಗೂ ಡೀಸೆಲ್ ಸಂಗ್ರಹ ಮಾಡುವ ಪ್ರದೇಶದ ಮೇಲೆ ಉಕ್ರೇನ್‌ ನಿರಂತರವಾಗಿ ಡ್ರೋನ್‌ಗಳ ಸುರಿಮಳೆಯನ್ನೇ ಸುರಿಸಿದೆ. ಇದರಿಂದ ಇನ್ಮುಂದೆ ರಷ್ಯಾ ಸಹ ಉಕ್ರೇನ್‌ನ ಮೇಲೆ ರೊಚ್ಚಿಗೇಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಷ್ಯಾ ದೇಶವು ಮಿಲಿಟರಿ ವಾಹನಗಳು ಹಾಗೂ ಯುದ್ಧ ವಿಮಾನಗಳಿಗೆ ಇಲ್ಲಿಂದಲೇ ಇಂಧನ ಪೂರೈಸುತ್ತಿತ್ತು ಎಂದು ಹೇಳಲಾಗಿದ್ದು, ಇದನ್ನೇ ಗುರಿ ಮಾಡಿಕೊಂಡು ಉಕ್ರೇನ್‌ ಟಾರ್ಗೆಟ್‌ ಮಾಡಿ ಧ್ವಂಸ ಮಾಡುತ್ತಿದೆ. ಆ ರೀತಿ ನೋಡಿದರೆ ಹೋದ ವಾರ ರಷ್ಯಾ ಕಾಲು ಕೆರೆದುಕೊಂಡು ಉಕ್ರೇನ್‌ನ ಮೇಲೆ ಹೋಗಿತ್ತು. ಉಕ್ರೇನ್‌ನ ವಿದ್ಯುತ್‌ ಪೂರೈಕೆ ಮಾಡುವ ಮೈನ್‌ ಪಾಯಿಂಟ್‌ನ ಮೇಲೆ ರಷ್ಯಾ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ರಷ್ಯಾ ಡ್ರೋನ್‌ ಸುರಿಮಳೆ ಸುರಿಸಿದೆ.

Russia vs Ukraine War ರಷ್ಯಾದಿಂದ ಪ್ರತಿದಾಳಿ: ರಷ್ಯಾದಿಂದ ಇದೇ ಸಂದರ್ಭದಲ್ಲಿ ಪ್ರತಿ ದಾಳಿ ಆಗುವ ಆತಂಕ ಎದುರಾಗಿದೆ. ಇನ್ನು ರಷ್ಯಾದ ಇಂಧನ ಪೂರೈಕೆ ಹಾಗೂ ಪ್ರಮುಖ ಮಿಲಿಟರಿ ಕೇಂದ್ರಗಳಿಗೆ ಸಹಾಯವಾಗಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್‌ ದಾಳಿ ಮಾಡಿದೆ ಎನ್ನಲಾಗಿದೆ. ಇನ್ನು ಉಕ್ರೇನ್‌ನ ದಾಳಿಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ರಷ್ಯಾ ಯಶಸ್ವಿಯಾಗಿದೆ. 20ಕ್ಕೂ ಹೆಚ್ಚು ಡ್ರೋನ್‌ಗಳನ್ನು ರಷ್ಯಾ ಮಿಲಿಟರಿ ಪಡೆಗಳು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+