Breaking: ಖೆರ್ಸನ್‌ನಿಂದ ಸೇನೆ ವಾಪಸ್ ಕರೆಸಿಕೊಂಡ ರಷ್ಯಾ!

ಕೀವ್, ನವೆಂಬರ್ 09: ಉಕ್ರೇನಿಯನ್ ದಾಳಿ ಹಿನ್ನೆಲೆಯಲ್ಲಿ ಡ್ನೀಪರ್ ನದಿಯ ಪಶ್ಚಿಮ ದಂಡೆಯ ದಕ್ಷಿಣ ನಗರವಾದ ಖೆರ್ಸನ್ ಬಳಿಯಿಂದ ದೇಶದ ಸೇನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ರಷ್ಯಾ ಆದೇಶಿಸಿದೆ. ಕಳೆದ ಫೆಬ್ರವರಿ ಅಂತ್ಯದಲ್ಲಿ ಯುದ್ಧವನ್ನು ಘೋಷಿಸಿದ ನಂತರದಲ್ಲಿ ರಷ್ಯಾದ ಪ್ರಮುಖ ಹಿಮ್ಮೆಟ್ಟುವಿಕೆಯಲ್ಲಿ ಇದೂ ಸಹ ಒಂದಾಗಿದೆ.

ಉಕ್ರೇನಿಯನ್ ಅಧಿಕಾರಿಗಳು ಈ ಕ್ರಮವನ್ನು ತಕ್ಷಣವೇ ದೃಢೀಕರಿಸಲಿಲ್ಲ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚಿನ ದಿನಗಳಲ್ಲಿ ಉಕ್ರೇನಿಯನ್ ಸೇನೆಯು ಬೇರೂರಿರುವ ಖೆರ್ಸನ್‌ನಿಂದ ಹಿಂದೆ ಸರಿಯುವಂತೆ ನಟಿಸುತ್ತಿದ್ದಾರೆ ಎಂದು ಸೂಚಿಸಿದ್ದಾರೆ. ರಷ್ಯಾದ ನಿಯಂತ್ರಿತ ಪ್ರದೇಶಕ್ಕೆ ಆಳವಾಗಿ ಚಲಿಸಲು ನಾಗರಿಕರನ್ನು ಮನವೊಲಿಸುವ ಪ್ರಯತ್ನಗಳನ್ನು ಝೆಲೆನ್ಸ್ಕಿ "ಥಿಯೇಟರ್" ಎಂದು ಕರೆದಿದ್ದಾರೆ.

''ನಾವು ನಮ್ಮ ಸೈನಿಕರ ಜೀವಗಳನ್ನು ಮತ್ತು ನಮ್ಮ ಘಟಕಗಳ ಹೋರಾಟದ ಸಾಮರ್ಥ್ಯವನ್ನು ಉಳಿಸುತ್ತೇವೆ. ಅವುಗಳನ್ನು ಬಲ ಪಶ್ಚಿಮ ದಂಡೆಯಲ್ಲಿ ಇಡುವುದು ನಿರರ್ಥಕವಾಗಿದೆ. ಅವುಗಳಲ್ಲಿ ಕೆಲವನ್ನು ಇತರ ರಂಗಗಳಲ್ಲಿ ಬಳಸಬಹುದು" ಎಂದು ಸುರೋವಿಕಿನ್ ಹೇಳಿದ್ದಾರೆ.

Russia Vladimir putin Order Its Military To Withdraw From Ukraines Kherson City: Report

ರಷ್ಯಾದ ತೀವ್ರ ಹಿನ್ನಡೆ:

ಈ ಮೊದಲು ಮಾಸ್ಕೋ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಅದೇ ಹೆಸರಿನ ಪ್ರದೇಶದಲ್ಲಿ ಇರುವ ಖೆರ್ಸನ್‌ನಿಂದ ಹಿಂತೆಗೆದುಕೊಳ್ಳುವಿಕೆಯು ಮತ್ತೊಂದು ಗಮನಾರ್ಹ ಹಿನ್ನಡೆಯಾಗಿದೆ. 280,000 ಜನಸಂಖ್ಯೆಯನ್ನು ಹೊಂದಿರುವ ನಗರವು ಫೆಬ್ರವರಿ 24ರ ಆಕ್ರಮಣವು ಪ್ರಾರಂಭವಾದಾಗಿನಿಂದ ರಷ್ಯಾದ ಪಡೆಗಳಿಂದ ವಶಪಡಿಸಿಕೊಂಡ ಏಕೈಕ ಪ್ರಾದೇಶಿಕ ರಾಜಧಾನಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+