ಉರಲ್ ಪರ್ವತ ಪ್ರದೇಶ ವೃದ್ಧಾಶ್ರಮಕ್ಕೆ ಬೆಂಕಿ, 11 ಮಂದಿ ಮೃತ

ಮಾಸ್ಕೋ, ಡಿ. 15: ರಷ್ಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಬಾಷ್ಕೋರ್ಟೊಸ್ಟಾನ್ ಪ್ರದೇಶದ ಉರಲ್ ಪರ್ವತಗಳಲ್ಲಿನ ಇಷ್ಬುಲ್ದಿನೋ ಎಂಬ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ಬೆಂಕಿ ತಗುಲಿ, ಹಿರಿಜೀವಿಗಳು ಬೆಂಕಿಯಲ್ಲಿ ನಂದಿ ಹೋಗಿವೆ.

ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಮರದಿಂದ ನಿರ್ಮಿಸಲಾದ ಕೊಠಡಿಗಳಿದ್ದ ಒಂದು ಅಂತಸ್ತಿನ ಕಟ್ಟಡ ಇದಾಗಿದ್ದು, ಸತತ ಮೂರು ಗಂಟೆಗಳ ಕಾಲ, ಅಗ್ನಿಶಾಮಕ ದಳದವರು ಶ್ರಮಪಟ್ಟು, ಬೆಂಕಿಯನ್ನು ನಂದಿಸಿದ್ದಾರೆ. ರಕ್ಷಣಾ ಕಾರ್ಯ ಜಾರಿಯಲ್ಲಿದೆ.

Russia: Ural mountains region fire kills 11 elderly residents

ವೃದ್ಧಾಶ್ರಮದಲ್ಲಿದ್ದ ವಯೋವೃದ್ಧರಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಬೆಂಕಿಯ ಜ್ವಾಲೆಗೆ ಸಿಲುಕಿದ್ದಾರೆ. ಆದರೆ, ಈ ಅಪಘಾತದಿಂದ ನಾಲ್ವರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ರಷ್ಯಾದ ಸಂಸ್ಥೆ ತಿಳಿಸಿದೆ. ಘಟನೆಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಕರಣದಲ್ಲಿದೆ ಎಂದು ರಷ್ಯಾದ ವಿಪತ್ತು ನಿರ್ವಹಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+