ರಷ್ಯಾ-ಉಕ್ರೇನ್ ಸಂಘರ್ಷ: ಐದನೇ ದಿನ ಏನೇನು ನಡೀತು

ಕೀವ್, ಫೆಬ್ರವರಿ 28: ರಷ್ಯಾ ಹಾಗೂ ಉಕ್ರೇನ್ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದೆ. ಒಂದೆಡೆ ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ್ದರೆ ಇನ್ನೊಂದೆಡೆ ಬೆಲಾರಸ್‌ನಲ್ಲಿ ಉಕ್ರೇನ್ ಹಾಗೂ ರಷ್ಯಾ ಶಾಂತಿಯುತ ಮಾತುಕತೆ ಆರಂಭಿಸಿದೆ.

ಎರಡೂ ದೇಶಗಳ ನಿಯೋಗಗಳು ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಮಾತುಕತೆ ನಡೆಸುತ್ತಿವೆ. ಈ ನಡುವೆ ಉಕ್ರೇನ್ ಅಧ್ಯಕ್ಷರು ರಷ್ಯಾ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು. ಅಲ್ಲದೇ ತನ್ನ ರಕ್ಷಣಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಳೆದ ವಾರ ಪುಟಿನ್ ಅವರ ಪಡೆಗಳು ಉಕ್ರೇನ್ ನಲ್ಲಿ ದೊಡ್ಡ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಇದು ಎರಡೂ ದೇಶಗಳ ನಡುವಿನ ಮೊದಲ ಸಭೆಯಾಗಿದೆ. 5ನೇ ದಿನದ ರಷ್ಯಾ - ಉಕ್ರೇನ್ ನಡುವಿನ ಯುದ್ಧದ ಬಳಿಕ, ಇದೀಗ ಯುದ್ಧ ಕೊನೆಗೊಳಿಸುವ ಕುರಿತಂತೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಯುದ್ಧ ಅಂತ್ಯದ ಬಗ್ಗೆ ಮಾಹಿತಿ ಪ್ರಕಟವಾಗುವ ನಿರೀಕ್ಷೆಯಿದೆ.

Russia-Ukraine war: What To Know On Day Five

ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು, ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿತ್ತು. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿತ್ತು ಎನ್ನಲಾಗಿದೆ.

ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಕೂಡ ಪ್ರಸ್ತಾಪಿಸಿ ಬೇರೆಡೆಗೆ ಮಾತುಕತೆಗೆ ಸಿದ್ಧ ಎಂದಿದ್ದರು.

*ಕೀವ್‌ನಲ್ಲಿ ಸ್ಫೋಟ: ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಬೆಳಗ್ಗೆ ಸ್ಫೋಟಕ ಶಬ್ದ ಕೇಳಿಬಂದಿದೆ. ಉಕ್ರೇನ್‌ನ ಚೆರ್ನೆಹಿವ್‌ನಲ್ಲಿ ವಸತಿ ಕಟ್ಟಡವನ್ನು ಕ್ಷಿಪಣಿಯಿಂದ ಹೊಡೆದುರುಳಿಸಲಾಗಿತ್ತು.

*ರಷ್ಯಾ ಪಡೆಗಳು ಆಕ್ರಮಣದ ವೇಗವನ್ನು ನಿಧಾನಗೊಳಿಸಿವೆ ಎಂದು ಉಕ್ರೇನ್ ಹೇಳಿದೆ.

*ರಷ್ಯಾವು ದಕ್ಷಿಣದಲ್ಲಿ ಮುಂದುವರೆಯುತ್ತಿದ್ದು, ಕೀವ್ ಕಪ್ಪುಸಮುದ್ರದ ಕ್ರೈಮಿಯಾದ ಇನ್ನೊಂದು ಬದಿಯಲ್ಲಿ ಮುತ್ತಿಗೆ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.

* ವ್ಯಾಟಿಕನ್ ಬೆಂಬಲ: ರಷ್ಯಾ-ಉಕ್ರೇನ್ ಸಂಘರ್ಷ ಕೊನೆಗೊಳಿಸುವಂತೆ ವ್ಯಾಟಿಕನ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+