ಉತ್ತರ ಕೊರಿಯಾ & ರಷ್ಯಾ ಸೈನಿಕರ ನಡುವೆ ಕಿರಿಕ್ ಶುರುವಾಯ್ತಾ?
ರಷ್ಯಾ
& ಉಕ್ರೇನ್ ನಡುವೆ ಘೋರ ಕಾಳಗ ನಡೆಯುತ್ತಿರುವ ಸಮಯದಲ್ಲಿ ಗೊಂದಲ ಬಲು ಜೋರಾಗಿದೆ. ರಷ್ಯಾ ಸೇನೆ ಈಗಾಗಲೇ ಲಕ್ಷಾಂತರ ಸೈನಿಕರನ್ನ ಕಳೆದುಕೊಂಡು ನರಳುತ್ತಿದೆ. ಆದ್ರೆ ರಷ್ಯಾ ದೇಶದಲ್ಲಿ ಈಗ ಉಕ್ರೇನ್ ವಿರುದ್ಧ ಹೋರಾಟ ನಡೆಸಲು ಜನರೇ ಸಿದ್ಧರಾಗಿಲ್ಲ. ಹೀಗಾಗಿ ರಷ್ಯಾ ಮಿಲಿಟರಿಗೆ ಸೇರುವ ಸೈನಿಕರ ಸಂಖ್ಯೆ ಕುಸಿದು ಬಿದ್ದಿದ್ದು, ಇದರಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ದೊಡ್ಡ ತಲೆನೋವು ಶುರುವಾಗಿತ್ತು. ಹೀಗಿದ್ದ ವೇಳೆ ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ಎಂಟ್ರಿ ಕೊಟ್ಟು ಪುಟಿನ್ ತಲೆನೋವು ಕಡಿಮೆ ಮಾಡಿದ್ದ! id="toptextpromo"> id='are-slot-1' class='oiad oi-axt oiadv'> id='top-searched-articles'>ಉತ್ತರ
ಕೊರಿಯಾ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮಧ್ಯೆ ಸಂಧಾನ ನಡೆದಿತ್ತು. ಈ ಮಾತುಕತೆ ಪರಿಣಾಮ ಉತ್ತರ ಕೊರಿಯಾದ ಸಾವಿರಾರು ಸೈನಿಕರು ಈಗ ರಷ್ಯಾ ಮಿಲಿಟರಿಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಉತ್ತರ ಕೊರಿಯಾದ ಸೈನಿಕರು ರಷ್ಯಾ ಪರವಾಗಿ ನಿಂತು ಉಕ್ರೇನ್ ವಿರುದ್ಧ ಹೋರಾಟದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಉತ್ತರ ಕೊರಿಯಾ ವಿರುದ್ಧ ಭರ್ಜರಿ ಗೆಲುವು ಗ್ಯಾರಂಟಿ ಎಂಬ ಆಸೆಯನ್ನು ರಷ್ಯಾ ಇಟ್ಟುಕೊಂಡಿತ್ತು. ಆದರೆ ಈಗ ದಿಢೀರ್ ರಷ್ಯಾ ಸೈನಿಕರು & ಉತ್ತರ ಕೊರಿಯಾ ಸೈನಿಕರ ನಡುವೆ ಕಿರಿಕ್ ಬಲು ಜೋರಾಗಿದೆ ಎಂಬ ಆರೋಪ ಕೇಳಿ ಬಂದಿದೆ. id='are-slot-2' class='oiad oi-axt oiadv'>












Click it and Unblock the Notifications