ಉಕ್ರೇನ್‌ ನೆಲದಲ್ಲಿ 79 ಮಕ್ಕಳ ಜೀವ ತೆಗೆದ ರಷ್ಯಾದ ಯುದ್ಧ!

ಕೀವ್, ಮಾರ್ಚ್ 12: ಉಕ್ರೇನ್ ನೆಲದಲ್ಲಿ ರಷ್ಯಾದ ರೌದ್ರನರ್ತನ ಶುರುವಾಗಿ ಶನಿವಾರಕ್ಕೆ 17 ದಿನವಾಗಿದೆ. ರಷ್ಯಾ ಆಕ್ರಮಣದ ಪ್ರಾರಂಭದಿಂದ ಈವರೆಗೂ 79 ಮುಗ್ಧ ಮಕ್ಕಳನ್ನು ಕೊಂದು ಹಾಕಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.

ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾದ ಸೇನಾ ಕಾರ್ಯಾಚರಣೆ ಶುರು ಮಾಡಿದೆ. ಮರಿಯೋಪೋಲ್ ಪ್ರದೇಶದಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ಬುಧವಾರ ರಷ್ಯಾ ಬಾಂಬ್ ದಾಳಿ ನಡೆಸಿತು. ಈ ವೇಳೆ ಪುಟ್ಟ ಬಾಲಕಿ ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟರು.

ಕಳೆದ 17 ದಿನಗಳಿಂದ ರಷ್ಯಾ ನಡೆಸುತ್ತಿರುವ ಆಕ್ರಮಣದಲ್ಲಿ 79 ಪುಟ್ಟ ಮಕ್ಕಳು ಸಾವಿನ ಮನೆ ಸೇರಿದ್ದು, 100ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.

Russia-Ukraine War: 79 Children Killed in Since Russian Invasion Began, Says Ukraine

ಮರಿಯೋಪೋಲ್ ಆಸ್ಪತ್ರೆ ಮೇಲೆ ಬಾಂಬ್ ದಾಳಿ:

ಉಕ್ರೇನ್‌ನ ಆಗ್ನೇಯ ಬಂದರು ಮರಿಯೋಪೋಲ್, ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಿಂದ ರಷ್ಯಾದ ಪಡೆಗಳು ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳಿಂದ ಮುತ್ತಿಗೆಗೆ ಒಳಗಾಗಿದ್ದರಿಂದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಈ ಬಾಂಬ್ ದಾಳಿಯಲ್ಲಿ 17 ವಯಸ್ಕರೂ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಝೈಟೊಮಿರ್ ಪ್ರದೇಶದ ಮಾಲಿನ್‌ನಲ್ಲಿ ರಷ್ಯಾ ನಡೆಸಿದ ವೈಮಾನಿಕ ದಾಳಿಗಳಿಂದ ಏಳು ಜನವಸತಿ ಕಟ್ಟಡಗಳು ನೆಲ ಕಚ್ಚಿವೆ. ಈ ದಾಳಿಯಲ್ಲಿ ಮೂರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ. ಡೆನಿಸೋವಾ ಪ್ರಕಾರ, ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವ ಮಕ್ಕಳ ಕುರಿತು ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಲಾಗಿದೆ.

ಬುಧವಾರ ರಾತ್ರಿ,

"ಪೂರ್ವ ಇಜಿಯಮ್ ಪ್ರದೇಶದ ಸ್ಲೋಬೋಝಾನ್ಸ್ಕೆ ಹಳ್ಳಿಯಲ್ಲಿ ಬುಧವಾರ ನಡೆಸಿದ ಶೆಲ್ ದಾಳಿಯಿಂದ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದರು, ಐದು ವರ್ಷದ ಬಾಲಕಿ ಬದುಕುಳಿದರು," ಎಂದು ಡೆನಿಸೋವಾ ಹೇಳಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ:

ಯುರೋಪಿಯನ್ ಒಕ್ಕೂಟಕ್ಕೆ ಸೇರಿಕೊಳ್ಳಬೇಕು, ನ್ಯಾಟೋ ಸದಸ್ಯವನ್ನು ಸಂಪಾದಿಸಿಕೊಳ್ಳಬೇಕು ಎಂಬ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಒಂದೇ ಒಂದು ಬಯಕೆ ರಷ್ಯಾದ ಕಣ್ಣು ಕೆಂಪಾಗಿಸಿದೆ. ಕಳೆದ ಫೆಬ್ರವರಿ 24ರಿಂದ ಆರಂಭವಾದ ಯುದ್ಧದಿಂದ ಉಕ್ರೇನ್ ನೆಲದಲ್ಲಿ ನರಕ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಕಳೆದ 17 ದಿನಗಳಿಂದ ರಷ್ಯಾ ನಡೆಸುತ್ತಿರುವ ವೈಮಾನಿಕ ದಾಳಿ, ಶೆಲ್ ದಾಳಿ ಮತ್ತು ಗುಂಡಿನ ಮಳೆಗೆ ಉಕ್ರೇನ್ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಉಕ್ರೇನ್ ನೀಡಿರುವ ಮಾಹಿತಿ ಪ್ರಕಾರ, ಈವರೆಗೂ ರಷ್ಯಾದ 12,000 ಯೋಧರನ್ನು ಉಕ್ರೇನ್ ಸೈನಿಕರು ಹೊಡೆದುರುಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+