20 ಡ್ರೋನ್ ಪೀಸ್ ಪೀಸ್ ಮಾಡಿದ ರಷ್ಯಾ: ಯಾಕೆ ಗೊತ್ತಾ?

ರಷ್ಯಾ & ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಘೋರವಾಗುತ್ತಿದೆ. ಅದ್ರಲ್ಲೂ ಉಕ್ರೇನ್ ಡ್ರೋನ್ ದಾಳಿ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ. ತನ್ನಲ್ಲಿರುವ ಎಲ್ಲಾ ರೀತಿಯ ಅತ್ಯಾಧುನಿಕ ಅಸ್ತ್ರ ಬಳಸಿ, ಉಕ್ರೇನ್ ಡ್ರೋನ್‌ಗಳನ್ನು ಪೀಸ್ ಪೀಸ್ ಮಾಡುತ್ತಿದೆ ರಷ್ಯಾ. ಈಗ ಕೂಡ ಅಷ್ಟೇ ಉಕ್ರೇನ್ ಹಾರಿಸಿದ್ದ 20 ಡ್ರೋನ್ ಪೀಸ್ ಪೀಸ್ ಮಾಡಿದ ರಷ್ಯಾ ಸೇನೆ. ಉಕ್ರೇನ್ ಸೇನೆಗೆ ಇದು ಶಾಕ್ ಕೊಟ್ಟಿದ್ದರೆ ಮತ್ತೊಂದ್ಕಡೆ ಭಯದ ವಾತಾವರಣ ನಿರ್ಮಾಣವಾಗಿದೆ.

ಉಕ್ರೇನ್ ಪಡೆಗಳು ಕ್ರಿಮಿಯಾ ಪರ್ಯಾಯ ದ್ವೀಪದ ಮೇಲೆ ದಾಳಿಗೆ ಪ್ರಯತ್ನಿಸಿವೆ ಎಂದು ಆರೋಪಿಸಲಾಗಿದೆ. ಹೀಗೆ ದಾಳಿ ನಡೆಸಲು ಹಾರಿ ಬಂದ ಡ್ರೋನ್‌ಗಳನ್ನ ಹೊಡೆದಾಕಿರುವ ಬಗ್ಗೆ ರಷ್ಯಾ ತಿಳಿಸಿದೆ. ಉಕ್ರೇನ್‌ಗೆ ಸೇರಿರುವ ಒಟ್ಟು 20 ಡ್ರೋನ್‌ನ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಹೇಳಿದೆ. 14 ಡ್ರೋನ್‌ಗಳನ್ನು ರಕ್ಷಣಾ ವ್ಯವಸ್ಥೆಯ ಮೂಲಕ ಉಡಾಯಿಸಿದ್ದರೆ 6 ಡ್ರೋಣ್‌ಗಳನ್ನ ಎಲೆಕ್ಟ್ರಾನಿಕ್‌ ಯುದ್ಧದ ಮೂಲಕ ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಉಕ್ರೇನ್ ಜತೆಗಿನ ರಷ್ಯಾ ಜಿದ್ದು ಮತ್ತಷ್ಟು ಹೆಚ್ಚಾಗಿದೆ.

russia-told-they-destroyed-20-drones

ನಿಲ್ಲುತ್ತಿಲ್ಲ ಯುದ್ಧ.. ಪರಮಾಣು ದಾಳಿ ಆತಂಕ!

20 ಡ್ರೋನ್ ಉಡಾಯಿಸಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾಗೇ ಮಾಸ್ಕೋ ನೈರುತ್ಯ ಪ್ರದೇಶದಿಂದ 150 ಕಿಲೋ ಮಿಟರ್ ದೂರದ ಕಲುಗಾದಲ್ಲಿ ನಿನ್ನೆ ಒಂದು ಡ್ರೋನ್ ಹೊಡೆದು ಉರುಳಿಸಿದ ಬಗ್ಗೆಯೂ ರಷ್ಯಾ ಮಾಹಿತಿ ನೀಡಿದೆ. ಉಕ್ರೇನ್ ಇತ್ತೀಚೆಗೆ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಅದರಲ್ಲೂ ರಷ್ಯಾ ರಾಜಧಾನಿ ಸುತ್ತಮುತ್ತ ಡ್ರೋನ್ ದಾಳಿ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪವಿದೆ. ಇಷ್ಟೆಲ್ಲಾ ಆರೋಪಗಳ ನಡುವೆಯೂ ಇದೀಗ 20 ಡ್ರೋನ್‌ಗಳನ್ನ ನೆಲಕ್ಕೆ ಉರುಳಿಸಿದೆ. ಪರಮಾಣು ಯುದ್ಧ ಭೀತಿ ಇರುವಾಗಲೇ ಹೀಗೆ ಎರಡೂ ರಾಷ್ಟ್ರಗಳ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ.

ರಷ್ಯಾ & ಉಕ್ರೇನ್ ನಡುವೆ ಮತ್ತೊಂದು ಸಂಕಷ್ಟ!

ಹೌದು, ಅತ್ತ ರಷ್ಯಾ ಮತ್ತು ಉಕ್ರೇನ್ ಜಗಳದ ನಡುವೆ ಪೋಲ್ಯಾಂಡ್ ಹಾಗೂ ಬೆಲಾರಸ್ ತಿಕ್ಕಾಟ ಕೂಡ ಶುರುವಾಗಿದೆ. ಈಗ ಇಬ್ಬರು ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ. ಪೋಲ್ಯಾಂಡ್ ಹಾಗೂ ಬೆಲಾರಸ್ ಸಂಬಂಧ ಈ ಮೊದಲಿನಿಂದ ಹಾವು & ಮುಂಗುಸಿ ರೀತಿಯೇ ಇದೆ. ಆದರೆ ಈಗ ರಷ್ಯಾ ಮತ್ತು ಉಕ್ರೇನ್ ನಡುವೆ ಬೆಂಕಿ ಧಗಧಗಿಸುವ ಹೊತ್ತಲ್ಲೇ ಬೆಲಾರಸ್ ವಿರುದ್ಧ ಪೋಲ್ಯಾಂಡ್ ಕೆಂಡಕಾರಿದೆ. ಸುಮಾರು 10 ಸಾವಿರ ಸೈನಿಕರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಪೋಲ್ಯಾಂಡ್ ಸೇನೆ ಮುಂದಾಗಿದ್ದು, ಪೋಲ್ಯಾಂಡ್ ಹಾಗೂ ಬೆಲಾರಸ್ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

russia-told-they-destroyed-20-drones

ರಷ್ಯಾ ಪರ ನಿಂತಿದ್ದಕ್ಕೆ ಟಾರ್ಗೆಟ್?

ಬೆಲಾರಸ್ ದೇಶ ರಷ್ಯಾ ಪರ ನಿಂತಿದ್ದಕ್ಕೆ ಪೋಲ್ಯಾಂಡ್ ಈ ರೀತಿ ತಕರಾರು ತೆಗೆಯುತ್ತಿದೆ ಎಂಬ ಆರೋಪ ಇದೆ. ಇಂತಹ ಆರೋಪಗಳ ನಡುವೆ ರಷ್ಯಾ ಕೂಡ ರೊಚ್ಚಿಗೆದ್ದು ಬೆಲಾರಸ್‌ಗೆ ತನ್ನ ಅಧಿಕೃತ ಬೆಂಬಲ ಘೋಷಿಸಿದೆ. ಈ ಮೊದಲೇ ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್ ಕೊಟ್ಟಿದ್ದು ಅಪ್ಪಿತಪ್ಪಿ ಬೆಲಾರಸ್‌ ತಂಟೆಗೆ ಹೋದ್ರೆ ನಿಮಗೆ ಉತ್ತರ ಸಿಗಲಿದೆ ಎಂದಿದ್ದರು ಪುಟಿನ್. ಇದೀಗ ರಷ್ಯಾ ಮಾತಿಗೆ ವಿರುದ್ಧವಾಗಿ ಬೆಲಾರಸ್ ಗಡಿಯಲ್ಲಿ ಮತ್ತಷ್ಟು ಸೈನಿಕರನ್ನು ನಿಯೋಜನೆ ಮಾಡುತ್ತಿದೆ ಪೋಲ್ಯಾಂಡ್. ಹೀಗಾಗಿ ಮತ್ತೊಂದು ಮಹಾಯುದ್ಧದ ಭೀತಿಯೂ ಆವರಿಸಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಲವಾರು ರೀತಿಯಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ. ಇದರ ಜೊತೆಗೆ ಬೇರೆ ಬೇರೆ ದೇಶಗಳು ಕೂಡ ಯುದ್ಧಕ್ಕೆ ಸಿದ್ಧವಾಗುತ್ತಿವೆ. ಯುರೋಪ್‌ನಲ್ಲಿ ಈ ಯುದ್ಧ ಸಾಕಷ್ಟು ಅನಾಹುತ ಸೃಷ್ಟಿಸುವ ಸಾಧ್ಯತೆ ಇದ್ದು, ಜಗತ್ತಿನ ಅಭಿವೃದ್ಧಿಶೀಲ ದೇಶಗಳು ಯುದ್ಧ ನಿಲ್ಲಿಸಲು ಪ್ರಯತ್ನಿಸುತ್ತಿವೆ. ಆದರೂ ಸಂಧಾನಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ಒಮ್ಮತ ಮೂಡದ ಕಾರಣ ಪರಿಸ್ಥಿತಿ ಇನ್ನೂ ಹಾಗೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+