ಉಕ್ರೇನ್ ಸೇನಾ ನೌಕೆಗಳಿಗೆ ಒಂದು ಗತಿ ಕಾಣಿಸಿದ ರಷ್ಯಾ ಪಡೆಗಳು

ಉಕ್ರೇನ್ ಬೇಡ ಬೇಡ ಎಂದರೂ ಮಾತು ಕೇಳುತ್ತಿಲ್ಲ, ರಷ್ಯಾ ಮೇಲೆ ಪದೇ ಪದೆ ದಾಳಿಗೆ ಮುಂದಾಗಿ ಪೆಟ್ಟು ತಿನ್ನುತ್ತಿದೆ ಎಂಬ ಆರೋಪ ಇದೆ. ಈ ನಡುವೆ ಮತ್ತೊಮ್ಮೆ ಉಕ್ರೇನ್‌ನ ಸೇನೆಗೆ ಕರೆಂಟ್ ಶಾಕ್ ಕೊಟ್ಟಿವೆ ರಷ್ಯಾ ಪಡೆಗಳು. ಕಪ್ಪು ಸಮುದ್ರಕ್ಕೆ ನುಗ್ಗಿ ಬಂದಿದ್ದ 4 ನೌಕೆಗಳನ್ನ ಪುಡಿ ಪುಡಿ ಮಾಡಿದ್ದಾಗಿ ರಷ್ಯಾ ಸೇನೆ ಹೇಳಿದೆ. ಅಲ್ಲದೆ ರಷ್ಯಾ ನಾಶಪಡಿಸಿದ ಉಕ್ರೇನ್ ನೌಕೆಗಳಲ್ಲಿ ಸುಮಾರು 50 ಜನ ಸೈನಿಕರು ಇದ್ದರು ಎನ್ನಲಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ಶೂರುವಾದ ಬಳಿಕ ಸುಮಾರು ಒಂದೂವರೆ ವರ್ಷದಿಂದ ಕಪ್ಪು ಸಮುದ್ರ ಹೊತ್ತಿ ಉರಿಯುತ್ತಿದೆ. ಕಪ್ಪು ಸಮುದ್ರದ ಮೇಲೆ ಹಿಡಿತ ಸಾಧಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ. ಹೀಗಾಗಿ ಗೆಲುವಿಗಾಗಿ ಉಕ್ರೇನ್ ಮತ್ತು ರಷ್ಯಾ ಸೇನೆಗಳು ರಕ್ತ ಹರಿಸುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಉಕ್ರೇನ್ ಸೇನೆಯ 42 ಡ್ರೋನ್‌ಗಳನ್ನು ಪುಡಿ ಪುಡಿ ಮಾಡಿದ್ದಾಗಿ ರಷ್ಯಾ ಹೇಳಿತ್ತು. ಅಲ್ಲದೆ ಉಕ್ರೇನ್ ಯುದ್ಧ ನೌಕೆಯನ್ನೂ ಪುಡಿ ಮಾಡಿತ್ತು. ಇದೀಗ ನೋಡಿದರೆ 4 ಸ್ಪೀಡ್ ಬೋಟ್ ಉಡಾಯಿಸಿದ್ದಾರೆ ರಷ್ಯಾ ಸೈನಿಕರು.

Russia said they have been destroyed 4 Ukrainian military boat in black sea

50 ಉಕ್ರೇನ್ ಸೈನಿಕರ ಗತಿ ಏನು?

ಇನ್ನು ರಷ್ಯಾ ನಡುರಾತ್ರಿ ನಡೆಸಿರುವ ದಾಳಿಯಲ್ಲಿ, ಕಪ್ಪು ಸಮುದ್ರ ದಾಟಿ ಬರುತ್ತಿದ್ದ 50 ಜನ ಸೈನಿಕರು ಕೂಡ ಸೇನೆ ಬೋಟ್‌ನಲ್ಲಿ ಇದ್ದರು ಎನ್ನಲಾಗಿದೆ. ಆದ್ರೆ ಕತ್ತಲೆ ಆವರಿಸಿದ್ದ ಕಾರಣ ದಾಳಿ ಬಳಿಕ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ ಉಕ್ರೇನ್ ಬೋಟ್‌ಗಳಲ್ಲಿ ಇದ್ದ ಸುಮಾರು 50 ಉಕ್ರೇನ್ ಪಡೆಯ ಯೋಧರು ಮೃತಪಟ್ಟಿರಬಹುದು ಇಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ರಷ್ಯಾ ಆಗಲಿ ಅಥವಾ ಉಕ್ರೇನ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಇಲ್ಲಿಯ ತನಕ ಯಾವುದೇ ಮಾಹಿತಿ ನೀಡಿಲ್ಲ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ಕಪ್ಪು ಸಮುದ್ರ ರಕ್ತ ಕುಡಿದು ಕೆಂಪಾಗಿದೆ.

ಮನೆ ಇಲ್ಲದೆ ಬೀದಿಗೆ ಬಿದ್ದ ಜನ

ಕಪ್ಪು ಸಮುದ್ರ ಮಾತ್ರವಲ್ಲದೆ, ಉಕ್ರೇನ್ & ರಷ್ಯಾ ಗಡಿಯಲ್ಲೂ ಭೀರಕ ದಾಳಿ ನಡೆದಿದೆ. ಉಕ್ರೇನ್ ಡ್ರೋನ್‌ಗಳ ಸಹಾಯದಿಂದ ರಷ್ಯಾ ಪ್ರದೇಶದ ಮೇಲೆ ದಾಳಿ ನಡೆಸುವಾಗ, ರಷ್ಯಾ ಕೂಡ ಭಯಾನಕ ದಾಳಿಗೆ ಸಜ್ಜಾಗುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ಗಡಿಭಾಗದಲ್ಲಿ ಯುದ್ಧದ ಭೀಕರತೆ ಜೋರಾಗಿದೆ. ಈಗಾಗಲೇ ರಷ್ಯಾ ತನ್ನ ಗಡಿ ಭಾಗದಲ್ಲಿ ವಾಸವಿರುವ ಹಳ್ಳಿಗಳ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ ಉಕ್ರೇನ್ ಭಾಗದ ಜನರು ತಮ್ಮ ಜೀವ ಉಳಿಸಿಕೊಳ್ಳಲು ಊರು ಬಿಟ್ಟು ಓಡಿ ಹೋಗಿದ್ದಾರೆ. ಮತ್ತೊಂದು ಕಡೆ ಕಪ್ಪು ಸಮುದ್ರ ಕೂಡ ರಕ್ತಸಿಕ್ತವಾಗಿ ಭಯ ಹುಟ್ಟಿಸಿದೆ.

ಜನರಿಗೆ ತಿನ್ನಲು ಅನ್ನವೂ ಸಿಗುತ್ತಿಲ್ಲ

ಉಕ್ರೇನ್ ತನ್ನ ಮೇಲೆ ದಾಳಿ ಮಾಡುತ್ತಿರುವ ಕಾರಣಕ್ಕೆ ರಷ್ಯಾ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ. ಅದರಲ್ಲೂ ಉಕ್ರೇನ್‌ ಧಾನ್ಯ ಸಂಗ್ರಹ ಗೋದಾಮು ಮೇಲೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದೆ ಎಂಬ ಆರೋಪ ಇದೆ. ಹೀಗೆ, 1 ತಿಂಗಳಲ್ಲಿ ಸುಮಾರು 2,70,00 ಮೆಟ್ರಿಕ್‌ ಟನ್‌ ಧಾನ್ಯ ನಾಶವಾಗಿ ಹೋಗಿದೆ. ಆದರೆ ಇಬ್ಬರೂ ಹಠ ಬಿಟ್ಟು ಸಂಧಾನಕ್ಕೆ ಕೂರುತ್ತಿಲ್ಲ, ಹೀಗಾಗಿ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತಿಲ್ಲ. ಇದು ಸಾಲದು ಎಂಬಂತೆ ಕಪ್ಪು ಸಮುದ್ರದಲ್ಲೂ ಬಡಿದಾಟ ಶುರುವಾಗಿದೆ. ಹೀಗೆಲ್ಲಾ ಆದರೆ ಮುಂದೇನು? ಎಂಬುದು ಉಕ್ರೇನ್‌ನ ಜನರಿಗೂ ತಿಳಿಯುತ್ತಿಲ್ಲ.

Russia said they have been destroyed 4 Ukrainian military boat in black sea

ಕ್ರಿಮಿಯಾ ಮತ್ತು ಕಪ್ಪು ಸಮುದ್ರ ಟಾರ್ಗೆಟ್

ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕು ಪರದಾಡುತ್ತಿದೆ ಉಕ್ರೇನ್. ಇದೇ ಸಂದರ್ಭದಲ್ಲಿ ಕಪ್ಪು ಸಮುದ್ರದ ಬಳಿ ಉಕ್ರೇನ್ ನೌಕೆ ಅಥವಾ ಬೋಟ್ ಕಾಣಿಸಿದರೆ ಸಾಕು ರಷ್ಯಾ ಮುಲಾಜು ನೋಡದೆ ಉಡೀಸ್ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+