ಅಮೆರಿಕ & ನ್ಯಾಟೋ ಒಕ್ಕೂಟಕ್ಕೆ ಪುಟಿನ್ ಪಂಚ್ ಹೇಗಿದೆ ನೋಡಿ!

ಮಾಸ್ಕೋ: ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪುಟಿನ್ ಪಂಚ್ ಕೊಟ್ಟಿದ್ದಾರೆ. ಇತ್ತೀಚೆಗೆ ರಷ್ಯಾ ತನ್ನ ಸ್ನೇಹಿತ ಬೆಲಾರಸ್‌ ದೇಶದ ಗಡಿಗೆ ಅಣ್ವಸ್ತ್ರ ಕಳುಹಿಸಿ ಕೊಟ್ಟಿದೆ. ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರವನ್ನ ಬಳಸುವ ಬಗ್ಗೆ ಇದು ಪರೋಕ್ಷ ಸಂದೇಶ ನೀಡಿತ್ತು. ಈಗ ನೇರ ಅಮೆರಿಕ & ನ್ಯಾಟೋ ಪಡೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪುಟಿನ್ ವಾರ್ನಿಂಗ್ ಕೊಟ್ಟಿದ್ದಾರೆ.

ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್ ನಗರದಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಪುಟಿನ್‌, ಮಿತ್ರ ರಾಷ್ಟ್ರ ಬೆಲಾರಸ್‌ಗೆ ಪರಮಾಣು ಶಸ್ತ್ರಾಸ್ತ್ರ ರವಾನಿಸಲಾಗಿದೆ. ಇಷ್ಟಾದರೂ ರಷ್ಯಾ ಸೇನೆಯು ಅಣ್ವಸ್ತ್ರವನ್ನ ಅವಲಂಬಿಸುವ ಅಗತ್ಯವಿಲ್ಲ ಎಂಬುದನ್ನ ಒತ್ತಿ ಹೇಳಿದ್ದಾರೆ ಪುಟಿನ್. ಅಲ್ಲದೆ ಇದು ಮೊದಲ ಹಂತ ಅಷ್ಟೇ ಬೇಸಿಗೆ ಹೊತ್ತಿಗೆಲ್ಲಾ ಅಥವಾ ವರ್ಷಾಂತ್ಯದ ಸಂದರ್ಭಕ್ಕೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎನ್ನುವ ಮೂಲಕ ಪುಟಿನ್ ರಷ್ಯಾದ ರಣತಂತ್ರದ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಹಾಗಾದ್ರೆ ಉಕ್ರೇನ್ ಮೇಲೆ ರಷ್ಯಾ ಅಣುಬಾಂಬ್ ಹಾಕೇ ಬಿಡುತ್ತಾ? ಮುಂದೆ ಓದಿ (Russia Ukraine War).

Russia president Putin once again warned West in Ukraine war

'ಮುಟ್ಟಿದ್ರೆ ಸುಟ್ಟು ಹೋಗ್ತಿರಿ ಹುಷಾರ್!'

ಅಷ್ಟಕ್ಕೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ ಇಂದಿಗೆ 480 ದಿನ ಕಳೆದಿದೆ. ಈ ಬೆನ್ನಲ್ಲೇ ರಷ್ಯಾ ತನ್ನ ಶತ್ರುಗಳಿಗೆ ಮಹತ್ವದ ಎಚ್ಚರಿಕೆ ನೀಡಿದೆ. ರಷ್ಯಾ ಪಡೆಗಳು 2022ರ ಫೆಬ್ರುವರಿ 24ರಂದು ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದವು. ಉಭಯ ದೇಶಗಳ ಮಧ್ಯೆ ಸಂಘರ್ಷ ಮುಂದುವರಿದಿದ್ದು, ಅಣ್ವಸ್ತ್ರಗಳನ್ನ ಬೆಲಾರಸ್ ದೇಶದ ಗಡಿಯಲ್ಲಿ ರಷ್ಯಾ ನಿಯೋಜನೆ ಮಾಡಿದೆ. ಈ ಮೂಲಕ ಯಾವಾಗ ಬೇಕಾದರೂ ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವುದು ಗ್ಯಾರಂಟಿ ಅನ್ನೋ ಮೆಸೇಜ್ ನೀಡಲಾಗಿದೆ. ಅದರಲ್ಲೂ ಪುಟಿನ್ ಹೇಳಿರುವ ಮಾತುಗಳು ಅಮೆರಿಕ ಮತ್ತು ನ್ಯಾಟೋ ಒಕ್ಕೂಟದ ಎದೆ ನಡುಗಿಸಿದೆ.

ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧತೆ?

ಹೀಗೆ ಎರಡೂ ರಾಷ್ಟ್ರಗಳ ಯುದ್ಧ 16 ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇನ್ನೇನು 500 ದಿನಗಳನ್ನು ಕೂಡ ಯುದ್ಧ ಪೂರೈಸಲಿದೆ. ಆದರೆ ಈ ಸಂದರ್ಭದಲ್ಲೇ ರೊಚ್ಚಿಗೆದ್ದ ರಷ್ಯಾ ಉಗ್ರಾಣದ ಒಳಗಿಟ್ಟಿದ್ದ ನ್ಯೂಕ್ಲಿಯರ್ ವೆಪನ್ ಹೊರತೆಗೆದಿದೆ. ಅಮೆರಿಕ ಅದೆಷ್ಟೇ ಬಾಯಿ ಬಡಿದುಕೊಂಡರೂ ಕೇರ್ ಮಾಡದೆ, ನೇರವಾಗಿ ನ್ಯೂಕ್ಲಿಯರ್ ಅಸ್ತ್ರಗಳನ್ನು ತನ್ನ ಸ್ನೇಹಿತ ಬೆಲಾರಸ್‌ಗೆ ಕೊಟ್ಟು ಕಳುಹಿಸಿದೆ. ಆದರೆ ಇಲ್ಲಿ ಭಯ ಪಡುವ ಪರಿಸ್ಥಿತಿ ಯಾಕೆ ಎದುರಾಗಿದೆ ಎಂದರೆ, ಬೆಲಾರಸ್ ಗಡಿಯಿಂದ ಕೇವಲ 200 ಕಿಲೋ ಮೀಟರ್ ದೂರದಲ್ಲಿ ಉಕ್ರೇನ್‌ನ ರಾಜಧಾನಿ ಇದೆ (Nuclear Weapons).

ರಷ್ಯಾ ಅಧ್ಯಕ್ಷರಿಂದಲೇ ವಿಷಯ ಕನ್ಫರ್ಮ್

ಪರಮಾಣು ಬಾಂಬ್ ಬಳಸುವ ಕೃತ್ಯಕ್ಕೆ ರಷ್ಯಾ ಕೈಹಾಕಲ್ಲ ಎಂದೇ ಯುರೋಪ್ ಈವರೆಗೆ ಭಾವಿಸಿತ್ತು. ಆದರೆ ಬೆಲಾರಸ್‌ಗೆ ರಷ್ಯಾದ ನ್ಯೂಕ್ಲಿಯರ್ ಅಥವಾ ಪರಮಾಣು ಬಾಂಬ್‌ನ ಮೊದಲ ಬ್ಯಾಚ್ ತಲುಪಿದೆ. ಈ ವಿಚಾರವನ್ನ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಬೆಲಾರಸ್‌ಗೆ ಮೊದಲ ಬ್ಯಾಚ್‌ನಲ್ಲಿ ಪರಮಾಣು ಶಸ್ತ್ರಗಳು ತಲುಪಿರುವುದನ್ನ ಕನ್ಫರ್ಮ್ ಮಾಡಿದ್ದಾರೆ. ಹೀಗಾಗಿ ನಿಜ ಭಯ ಇಲ್ಲಿಂದಲೇ ಶುರುವಾಗಿದೆ ಎನ್ನಬಹುದು. ಏಕೆಂದರೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳು ಈಗ ತಲುಪಿರುವ ಜಾಗದಿಂದ ಕೂಗಳತೆ ದೂರದಲ್ಲಿ ಉಕ್ರೇನ್ ರಾಜಧಾನಿ ಕೀವ್ ಇದೆ!

Russia president Putin once again warned West in Ukraine war

ಇಷ್ಟೆಲ್ಲಾ ಬೆಳವಣಿಗೆ ನೋಡುತ್ತಿದ್ರೆ ರಷ್ಯಾ ತನ್ನ ಶತ್ರುಗಳನ್ನ ಒಂದೇ ಬಾರಿಗೆ ಸದೆಬಡಿದು, ಯುದ್ಧದಲ್ಲಿ ವಿಜಯ ಸಾಧಿಸಲು ತಂತ್ರ ರೂಪಸಿದಂತೆ ಕಾಣುತ್ತಿದೆ. ಅತ್ತ ಅಮೆರಿಕ ಕೂಡ ಈ ವಿಚಾರದಲ್ಲಿ ಅಲರ್ಟ್ ಆಗಿದೆ. ಹೀಗಾಗಿಯೇ ಉಕ್ರೇನ್ ಸೇನೆಗೆ ಬೇಕಾಗಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನ ಕಳುಹಿಸಿ ಕೊಡುತ್ತಿದೆ. ಹೀಗೆ ಎರಡೂ ಕಡೆ ಸಮಬಲದ ಹೋರಾಟವೂ ನಡೆಯುತ್ತಿದೆ. ಆದರೆ ನಮ್ಮ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಅಂತಾ ರಷ್ಯಾ ಅಧ್ಯಕ್ಷರು ವಾರ್ನಿಂಗ್ ಮಾಡಿದ್ದಾರೆ. ಹೀಗಾಗಿ ಯುದ್ಧ ಮತ್ತಷ್ಟು ಡೆಡ್ಲಿ ಆದರೂ ಅಚ್ಚರಿ ಪಡಬೇಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+